Advertisement

Freedom of Religion: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ

12:28 AM Apr 13, 2023 | Team Udayavani |

ತೃಶೂರ್‌: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಕೇರಳದ ಮಲಂಕರ ಆರ್ಥೋಡಕ್ಸ್‌ ಸಿರಿಯನ್‌ ಚರ್ಚ್‌ನ ಬಿಷಪ್‌ ಗೀವರ್ಗೀಸ್‌ ಮಾರ್‌ ಯೂಲಿಯೋಸ್‌ ಹೇಳಿದ್ದಾರೆ. “ಪಟ್ಟಭದ್ರ ಹಿತಾಸಕ್ತಿಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ “ಭಾರತದಲ್ಲಿ ಕ್ರಿಶ್ಚಿಯನ್‌ ಸಮುದಾಯವು ಕಿರುಕುಳಕ್ಕೊಳಗಾಗಿದೆ” ಎಂದು ಅಪಪ್ರಚಾರ ನಡೆಯುತ್ತಿದೆ. ಇದು ಒಂದು ಶ್ರೇಷ್ಠ ರಾಷ್ಟ್ರವಾದ ಭಾರತವನ್ನು ಅವಮಾ ನಿಸುವಂತಿದೆ” ಎಂದು ಬೇಸರ ವ್ಯಕ್ತಪ ಡಿಸಿದ್ದಾರೆ. “ಈ ರೀತಿಯ ಪಟ್ಟಭದ್ರ ಹಿತಾ ಸಕ್ತಿಗಳು, “ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ದೇಶದಲ್ಲಿ ಕ್ರಿಶ್ಚಿಯನ್‌ ಸಮು ದಾಯದ ಮೇಲೆ ದಾಳಿ ನಡೆಸ ಲಾಗುತ್ತಿದೆ’ ಎಂದು ಅಪಪ್ರಚಾರ ಮಾಡುತ್ತಿವೆ. ನನಗೂ ಈ ಬಗ್ಗೆ ವಿವರಣೆ ಕೇಳಿ ವಿದೇಶಗಳಿಂದ ಕರೆಗಳು ಬರುತ್ತಿವೆ,” ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next