Advertisement

ಜಲ ಕ್ಷಾಮದಿಂದ ಪಾರಾಗುವ ಅನಿವಾರ್ಯವಿದೆ: ಎ.ಕೆ. ಸಿಂಗ್‌

12:50 AM Jul 08, 2019 | Sriram |

ಭತ್ತದ ಕೃಷಿ ನೀರಿಂಗಿಸುವ ಪ್ರಕ್ರಿಯೆಗೆ ಪೂರಕವಾಗಿದ್ದು, ಈ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸಬೇಕು. ಭೂಮಿಯನ್ನು ಬರಡು ಮಾಡುವ ಅಕೇಶಿಯಾ ಮರಗಳನ್ನು ತೆರವುಗೊಳಿಸುವಂತೆ ಜನಪ್ರತಿನಿಧಿಗಳು ಆಗ್ರಹಿಸಿದರು. ವನ ಪ್ರದೇಶಗಳ ಕೆರೆಗಳು, ತೊರೆಗಳು ಸಹಿತ ಜಲಾಶಯಗಳನ್ನು ಸಂರಕ್ಷಿಸುವಲ್ಲಿ ಕೆಲವು ಕಾನೂನು ತೊಡಕುಗಳಿದ್ದು, ಅವುಗಳನ್ನು ಪರಿಹರಿಸಬೇಕೆಂಬ ಬೇಡಿಕೆ ಇರಿಸಲಾಯಿತು.

Advertisement

ಕುಂಬಳೆ: ಸಮಗ್ರ ಜಲನೀತಿ ರಚಿಸುವ ನಿಟ್ಟಿನಲ್ಲಿ ಮತ್ತು ಜನಶಕ್ತಿ ಅಭಿಯಾನ ಪ್ರಕಾರ ಸ್ಥಿತಿಗತಿ ಅವಲೋಕನ ನಡೆಸುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸಿರುವ ಕೇಂದ್ರ ಪ್ರತಿನಿಧಿ ಅಶೋಕ್‌ ಕುಮಾರ್‌ ಸಿಂಗ್‌ ಅವರು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್‌, ಗ್ರಾಮ ಪಂಚಾಯತ್‌, ನಗರಸಭೆಗಳ ಅಧ್ಯಕ್ಷರು, ಪ್ರತಿನಿಧಿಗಳು ಭಾಗವಹಿಸಿದರು.

ದೇಶದಲ್ಲಿ ತೀವ್ರತರ ಕುಡಿಯುವ ನೀರಿನ ಬರ ಅನುಭವಿಸುತ್ತಿರುವ 255 ಜಿಲ್ಲೆಗಳಲ್ಲಿ ಕಾಸರಗೋಡು ಜಿಲ್ಲೆಯೂ ಸೇರಿದ್ದು, ಸೂಕ್ತ ಜಲಸಂರಕ್ಷಣೆ ಚಟುವಟಿಕೆಗಳ ಮೂಲಕ ಈ ಪಿಡುಗಿನಿಂದ ಪಾರಾಗಬೇಕಾದ ಅನಿವಾರ್ಯವಿದೆ. ಚಟು ವಟಿಕೆಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ವೇಳೆ ಸಾಧ್ಯತೆಗಳನ್ನು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅಶೋಕ್‌ ಕುಮಾರ್‌ ಸಿಂಗ್‌ ಅಭಿಪ್ರಾಯಪಟ್ಟರು.

ಜಲ ಬಳಕೆ ವಿಧಾನದಲ್ಲಿ ದಕ್ಷತೆಯ ಸಹ ಭಾಗಿತ್ವ ವಹಿಸಿ ಜಲನೀತಿ ರಚಿಸುವುದು ಅನಿ ವಾರ್ಯ ಎಂದು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಅಶೋಕ್‌ ಕುಮಾರ್‌ ಅವರಲ್ಲಿ ಆಗ್ರಹಿಸಿದರು. ಜಿಲ್ಲೆಯ ನದಿಗಳನ್ನು ವೈಜ್ಞಾನಿಕ ರೀತಿಯ ಪಾರ್ಶ್ವಭಿತ್ತಿ ನಿರ್ಮಿಸುವ ಮೂಲಕ ಸಂರಕ್ಷಿಸುವ, ಜಿಲ್ಲೆಯ ಕೆಲವು ವಲಯಗಳ ಭೌಗೋಳಿಕ ಹಿನ್ನೆಲೆಯಲ್ಲಿ ನದಿನೀರು ಹರಿದು ಪೋಲಾಗುತ್ತಿದ್ದು, ಇದನ್ನು ತಡೆಯಲು ಪೂರಕ ಸೌಲಭ್ಯ ಏರ್ಪಡಿಸು ವಂತೆ ಜನಪ್ರತಿನಿಧಿಗಳು ಬೇಡಿಕೆ ಇರಿಸಿದರು.

ಸಮುದ್ರ ನೀರು ಶುದ್ಧಗೊಳಿಸಿ
ಮಂಜೇಶ್ವರ ಬ್ಲಾÉಕ್‌ನಲ್ಲಿ ಸಿಬಂದಿ ಕೊರತೆಯ ಪರಿಣಾಮ ಅನೇಕ ಕಾಮಗಾರಿಗಳು ಪೂರ್ತಿ ಗೊಂಡಿಲ್ಲ. ಇಲ್ಲಿನ ಕುಡಿಯುವ ನೀರಿನ ಬರ ಪರಿಹರಿಸಲು ಮತ್ತು ಸಮುದ್ರದ ನೀರು ಶುದ್ಧಗೊಳಿಸಿ ಮನೆ ಬಳಕೆಗೆ ಮತ್ತು ಕೃಷಿಗೆ ಬಳಸುವ ವ್ಯವಸ್ಥೆ ನಡೆಸುವಂತೆ, ಇದಕ್ಕೆ ಕೇಂದ್ರ ಸರಕಾರ ನೇತƒತ್ವ ವಹಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Advertisement

ನೀರಿನ ದುರುಪಯೋಗ ಆರೋಪ
ನೀರಿನ‌ ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪಿಂಕ್ಲರ್‌ ಬಳಕೆ ಕೈಬಿಟ್ಟು ಡ್ರಿಪ್‌ ಇರಿಗೇಶನ್‌ ಯೋಜನೆಗೆ ಪ್ರೋತ್ಸಾಹ ನೀಡಬೇಕು. ಚರಂಡಿ ನಿರ್ಮಾಣ ವೇಳೆ ಪೂರ್ಣ ರೀತಿಯಲ್ಲಿ ಕಾಂಕ್ರೀಟೀಕರಣ ನಡೆಸುವ ಕಾರಣ ಭೂಮಿಗೆ ಮಳೆ ನೀರು ಇಂಗಿಹೋಗುವುದಕ್ಕೆ ತಡೆಯಾಗುತ್ತಿದೆ. ಚರಂಡಿಯ ಅಡಿಭಾಗದಲ್ಲಿ ಕಾಂಕ್ರೀಟ್‌ ಹಾಕದೆ ನೀರು ಭೂಮಿಗಿಳಿಯುವಂತೆ ಮಾಡಬೇಕು ಎಂಬ ಸಲಹೆ ಸಭೆಯ ಮುಂದೆ ಇರಿಸಲಾಯಿತು.

ಜಲಶಕ್ತಿ ಅಭಿಯಾನದ ಜಿಲ್ಲಾ ನೋಡಲ್‌ ಅಧಿಕಾರಿ, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ. ಅಶೋಕ್‌ ಕುಮಾರ್‌, ಪ್ರಭಾರ ಹೆಚ್ಚುವರಿ ದಂಡಾಧಿಕಾರಿ ಪಿ.ಆರ್‌. ರಾಧಿಕಾ, ಹುಸೂರ್‌ ಶಿರಸೇ¤ದಾರ್‌ ಕೆ. ನಾರಾಯಣನ್‌, ಸಹಾಯಕ ಅಭಿವೃದ್ಧಿ ಕಮಿಷನರ್‌ (ಜನರಲ್‌) ಬೆವಿನ್‌ ಜೋನ್‌ ವರ್ಗೀಸ್‌, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ವಿಶೇಷ ಅಧಿಕಾರಿ ಇ.ಪಿ. ರಾಜ್‌ ಮೋಹನ್‌ ಉಪಸ್ಥಿತರಿದ್ದರು.
ಸಭೆಯ ಬಳಿಕ ಅಶೋಕ್‌ ಕುಮಾರ್‌ ಸಿಂಗ್‌ ಅವರ ನೇತƒತ್ವದಲ್ಲಿ ಅಧಿಕಾರಿಗಳ ತಂಡ ಜಿಲ್ಲೆಯ ಚೆಮ್ನಾಡ್‌, ಬದಿಯಡ್ಕ, ಪೈವಳಿಕೆ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಈ ಪ್ರದೇಶಗಳ ಜಲಲಭ್ಯತೆ, ಸಮಸ್ಯೆಗಳು, ಜಲಸಂರಕ್ಷಣೆಯ ಚಟುವಟಿಕೆಗಳು ಇತ್ಯಾದಿಗಳ ಅಧ್ಯಯನ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next