Advertisement

ಬ್ಯಾಂಕ್‌ ಕರೆಯಿತು…ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕೆಲಸ ಖಾಲಿ ಇದೆ…

03:49 PM Jun 19, 2018 | Team Udayavani |

ಬ್ಯಾಂಕಿನ ಸೌಲಭ್ಯಗಳನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ದದ್ದು ಗ್ರಾಮೀಣ ಬ್ಯಾಂಕ್‌ಗಳ ಹೆಚ್ಚುಗಾರಿಕೆ. ಈ ಬ್ಯಾಂಕ್‌ಗಳಿಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಹೊಣೆ ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ (ಐಬಿಪಿಎಸ್‌)ನ ಮೇಲಿದೆ. ದೇಶಾದ್ಯಂತ ಇರುವ ಗ್ರಾಮೀಣ ಬ್ಯಾಂಕುಗಳಲ್ಲಿ 10,190 ಹುದ್ದೆಗಳು ಖಾಲಿ ಉಳಿದಿದ್ದು, ಹೊಸ ನೇಮಕಾತಿಗೆ ಅರ್ಜಿ ಕರೆಯಲಾಗಿದೆ…
  
ಭಾರತದಲ್ಲಿ ಬ್ಯಾಂಕಿಂಗ್‌ ಕ್ಷೇತ್ರ ಅಸ್ತಿತ್ವಕ್ಕೆ ಬಂದದ್ದು 18ನೇ ಶತಮಾನದಲ್ಲಿ. ಪ್ರಾರಂಭದಲ್ಲಿ ಶ್ರೀಮಂತರಿಗೆ ಮಾತ್ರ ಮೀಸಲಾಗಿದ್ದ ಬ್ಯಾಂಕುಗಳು, ಸ್ವಾತಂತ್ರಾé ನಂತರ ಎಲ್ಲರಿಗೂ ಮುಕ್ತವಾಗಿ ಲಭ್ಯವಾದವು. ಆ ದಿನಗಳಲ್ಲಿ ತಾಲೂಕು ಕೇಂದ್ರಗಳಂಥ “ನಗರ’ಗಳಲ್ಲಿ ಮಾತ್ರ ಬ್ಯಾಂಕುಗಳು ಇದ್ದುದರಿಂದ ಗ್ರಾಮೀಣ ಜನತೆಯನ್ನು ಅವು ತಲುಪಿರಲೇ ಇಲ್ಲ. ಕ್ರಮೇಣ, ಆರಂಭವಾಗಿದ್ದು ಗ್ರಾಮೀಣ ಬ್ಯಾಂಕ್‌ಗಳ ಜಮಾನ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬ್ಯಾಂಕುಗಳು ಹಳ್ಳಿಗಳ ಜನರಿಗೂ ತಲುಪುವಂತಾಗಿದ್ದು ಇತ್ತೀಚಿನ ಕೆಲವು ದಶಕಗಳಲ್ಲಿ. 

Advertisement

ಸಾಮಾನ್ಯ ಜನರಿಗೂ ಬ್ಯಾಂಕಿಂಗ್‌ ಕ್ಷೇತ್ರದ ಅರಿವು ಮೂಡಿಸುವಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸೇರಿದಂತೆ ಹಲವು ಗ್ರಾಮೀಣ ಬ್ಯಾಂಕುಗಳ ಪಾತ್ರ ದೊಡ್ಡದು. ಇದೇ ಮಾದರಿಯಲ್ಲಿ ವಿವಿಧ ರಾಜ್ಯಗಳಲ್ಲಿ ಅನೇಕ ಗ್ರಾಮೀಣ ಬ್ಯಾಂಕುಗಳು ಶ್ರೀಸಾಮಾನ್ಯರ ನೆರವಿಗೆ ನಿಂತಿವೆ.

ಈ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸವನ್ನು, ಇನ್ಸ್‌ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (ಐಬಿಪಿಎಸ್‌) ನಿರ್ವಹಿಸುತ್ತಿದೆ. ಪ್ರಸ್ತುತ ಐಬಿಪಿಎಸ್‌ನ ಮೂಲಕ ಸಿಆರ್‌ಪಿ ಆರ್‌ಆರ್‌ಬಿ Vಐಐ (ಆಫೀಸರ್‌ ಸ್ಕೇಲ್‌ 1,2,3 ಮತ್ತು ಆಫೀಸ್‌ ಅಸಿಸ್ಟೆಂಟ್‌) 10,190 ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. 

ವಿದ್ಯಾರ್ಹತೆ, ವಯೋಮಿತಿ 
– ಆಫೀಸ್‌ ಅಸಿಸ್ಟೆಂಟ್‌ ಮತ್ತು ಆಫೀಸರ್‌ ಸ್ಕೇಲ್‌-1/3 ಜನರಲ್‌ ಬ್ಯಾಂಕಿಂಗ್‌ ಆಫೀಸರ್‌, ಐಟಿ, ಹುದ್ದೆಗೆ ಪದವಿ, ಮಾರ್ಕೆಟಿಂಗ್‌ ಹುದ್ದೆಗೆ ಎಂಬಿಎ ಮಾರ್ಕೆಟಿಂಗ್‌, ಟ್ರೆಷರಿ ಆಫೀಸರ್‌ ಹುದ್ದೆಗೆ ಸಿಎ/ಎಂಬಿಎ, ಲಾ ಆಫೀಸರ್‌ ಹುದ್ದೆಗೆ ಕಾನೂನು ಪದವಿ ಹೊಂದಿರಬೇಕು. 

– ಆಫೀಸರ್‌ ಸ್ಕೇಲ್‌-1 ಹುದ್ದೆಗೆ ಕನಿಷ್ಠ 18 ವರ್ಷ ಮತ್ತು ಸ್ಕೇಲ್‌ 2/3 ಹುದ್ದೆಗೆ ಕನಿಷ್ಠ 21ವರ್ಷ ಹಾಗೂ ಸ್ಕೇಲ್‌ 1ಕ್ಕೆ 30, 2ಕ್ಕೆ 32 ಮತ್ತು 3 ಕ್ಕೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ.

Advertisement

ಅಭ್ಯರ್ಥಿ ಆಯ್ಕೆ ಹೇಗೆ?
ಅಭ್ಯರ್ಥಿಗಳನ್ನು ಆನ್‌ಲೈನ್‌ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಾಥಮಿಕ ಮತ್ತು ಮೈನ್ಸ್‌ ಪರೀಕ್ಷೆ ಬರೆದು ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆ ಮತ್ತು ಸಂದರ್ಶದ ಅವಧಿ ಪ್ರಕ್ರಿಯೆ ಸ್ಕೇಲ್‌ 1,2,3 ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿರುತ್ತದೆ. ಜೊತೆಗೆ ಅಗತ್ಯ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುತ್ತದೆ. 

ಅರ್ಜಿ ಸಲ್ಲಿಕೆ ಹೇಗೆ
ಆಫೀಸರ್‌ (ಸ್ಕೇಲ್‌ 1,2,3) ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಅಗತ್ಯವಾದ ದಾಖಲೆ ಸಾಫ್ಟ್ಕಾಪಿ, ಸಹಿ, ಭಾವಚಿತ್ರವನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು. ಬಳಿಕ  ಜಾಲತಾಣ ಪ್ರವೇಶಿಸಿ, ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದು ಆಯ್ಕೆ ಮಾಡಿಕೊಳ್ಳಿ. ನಂತರ ತಮ್ಮ ಜನ್ಮದಿನಾಂಕ, ತಂದೆ, ತಾಯಿ ಹೆಸರು ಇತ್ಯಾದಿ ಅಗತ್ಯ ಮಾಹಿತಿಗಳನ್ನು ತುಂಬಿ ರಿಜಿಸ್ಟರ್‌ ಆಗಬೇಕು. ರಿಜಿಸ್ಟರ್‌ ಒಟಿಪಿ ಪಡೆದು ಪಾಸ್‌ವರ್ಡ್‌ ಬಳಸಿ ಮತ್ತೆ ಒಳಪ್ರವೇಶಿಸಿ ಅಗತ್ಯ ದಾಖಲೆ, ಭಾವಚಿತ್ರ, ಸಹಿ ಇತ್ಯಾದಿಗಳನ್ನು ತುಂಬಿ ಚಲನ್‌ ಪಡೆಯಬೇಕು. ನಂತರ 48 ಗಂಟೆಗಳಲ್ಲಿ ಅಂಚೆಕಚೇರಿಯಲ್ಲಿ ಶುಲ್ಕ ಪಾವತಿ ಮಾಡಿ, ಅಲ್ಲಿ ನೀಡುವ ಪಾವತಿ ನಂಬರನ್ನು ಜಾಲತಾಣದಲ್ಲಿ ನಮೂದಿಸಬೇಕು. ಪರೀಕ್ಷೆ ತಯಾರಾಗಬೇಕು. ಅರ್ಜಿ ಸಲ್ಲಿಕೆಗೆ ಜುಲೈ-2 ಕೊನೆ ದಿನವಾಗಿದ್ದು, ಸಾಮಾನ್ಯ ಅಭ್ಯರ್ಥಿಗೆ 600 ರೂ. ಮತ್ತು ಪರಿಶಿಷ್ಟ ಅಭ್ಯರ್ಥಿಗೆ 100 ರೂ. ಶುಲ್ಕ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ
 

ಹುದ್ದೆಗಳ ವಿಂಗಡನೆ
– ಆಫೀಸ್‌ ಅಸಿಸ್ಟೆಂಟ್‌ (ಮಲ್ಟಿಪರ್ಪಸ್‌)- 5,249
– ಆಫೀಸ್‌ ಸ್ಕೇಲ್‌ 1- 3,312
– ಆಫೀಸ್‌ ಸ್ಕೇಲ್‌- 2 (ಅರ್ಗಿಕಲ್ಚರ್‌ ಆಫೀಸರ್‌)- 72
– ಆಫೀಸ್‌ ಸ್ಕೇಲ್‌- 2 (ಮಾರ್ಕೆಟಿಂಗ್‌ ಆಫೀಸರ್‌)- 38
– ಆಫೀಸ್‌ ಸ್ಕೇಲ್‌- 2(ಟ್ರೆಜರಿ ಮ್ಯಾನೇಜರ್‌)-17
– ಆಫೀಸ್‌ ಸ್ಕೇಲ್‌- 2 (ಕಾನೂನು)- 32
– ಆಫೀಸ್‌ ಸ್ಕೇಲ್‌- 2 (ಸಿಎ)- 21
– ಆಫೀಸ್‌ ಸ್ಕೇಲ್‌- 2 (ಐಟಿ)- 81
– ಆಫೀಸ್‌ ಸ್ಕೇಲ್‌-2 (ಜನರಲ್‌ ಬ್ಯಾಂಕಿಂಗ್‌ ಆಫೀಸರ್‌)- 1,208
– ಆಫೀಸ್‌ ಸ್ಕೇಲ್‌- 3- 160

ಒಟ್ಟು 10,190 ಹುದ್ದೆಗಳು ಖಾಲಿ ಉಳಿದಿವೆ. ಇವುಗಳನ್ನು ಸರ್ಕಾರದ ನಿಯಮಗಳ ಅನುಸಾರ ವಿಂಗಡನೆ ಮಾಡಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದ ವಿವಿಧ ಭಾಗದಲ್ಲಿರುವ ಬ್ಯಾಂಕ್‌ಗಳಲ್ಲಿ ನೌಕರಿ ಸಿಗುವ ಸಾಧ್ಯತೆಗಳಿರುತ್ತವೆ. 

– ಎನ್.ಅನಂತನಾಗ್

Advertisement

Udayavani is now on Telegram. Click here to join our channel and stay updated with the latest news.

Next