Advertisement
“ಸರಣಿಯುದ್ದಕ್ಕೂ ನಾವು ಉತ್ತಮ ಮಟ್ಟದ ಆಟವನ್ನೇ ಆಡಿದ್ದೇವೆ. ಹೀಗಾಗಿ ಭಾರೀ ನಷ್ಟವೇನೂ ಆಗಿಲ್ಲ ಎಂಬುದು ನನ್ನ ಭಾವನೆ. ಕೊನೆಯ 3 ಪಂದ್ಯಗಳಲ್ಲಿ ನಮಗೂ ಗೆಲುವು ಸಾಧ್ಯವಿತ್ತು. ಆದರೆ ನಾವು ಒತ್ತಡ ನಿಭಾಯಿಸುವಲ್ಲಿ ಎಡವಿದೆವು. ಆದರೆ ಆಸ್ಟ್ರೇಲಿಯ ಒತ್ತಡ ತಡೆದುಕೊಂಡು ಆಡುವಲ್ಲಿ ಯಶಸ್ವಿಯಾಯಿತು’ ಎಂದು ಕೊಹ್ಲಿ ಹೇಳಿದರು.
“ಆಸ್ಟ್ರೇಲಿಯ ವಿರುದ್ಧ ಸರಣಿ ಸೋತದ್ದಕ್ಕೇನೂ ವಿನಾಯಿತಿ ಇಲ್ಲ. ಸೋಲು ಸೋಲೇ. ನಮ್ಮೆಲ್ಲರ ಮುಂದೆ ವಿಶ್ವಕಪ್ ಕೂಟದ ಭಾರೀ ಸವಾಲಿದೆ. ಹೀಗಾಗಿ ಪ್ರತಿಯೊಂದು ಐಪಿಎಲ್ ಪಂದ್ಯವನ್ನೂ ಎಂಜಾಯ್ ಮಾಡಬೇಕು, ಮುಂದಿನ ವಿಶ್ವಕಪ್ ಪಂದ್ಯಾವಳಿಗೆ ಸಜ್ಜಾಗಬೇಕು. ಆದರೆ ಇಲ್ಲಿ ಒಂದು ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಐಪಿಎಲ್ ಪ್ರತೀ ವರ್ಷವೂ ಬರುತ್ತದೆ. ವಿಶ್ವಕಪ್ ದರ್ಶನವಾಗುವುದು 4 ವರ್ಷಗಳಿಗೊಮ್ಮೆ’ ಎಂದೂ ಕ್ಯಾಪ್ಟನ್ ಕೊಹ್ಲಿ ಹೇಳಿದರು. ಇಂಗ್ಲೆಂಡಿಗೆ ಪಯಣಿಸುವ ಪ್ರತಿಯೊಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವೂ ಅವರದಾಗಿತ್ತು. ಪಾಂಡ್ಯ-ಸಮತೋಲನ
ಒಮ್ಮೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಂದರೆ ಸಾಕು, ತಂಡದಲ್ಲಿ ತನ್ನಿಂತಾನಾಗಿ ಸಮತೋಲನ ಕಂಡುಬರುತ್ತದೆ. ಇದು ವಿಶ್ವಕಪ್ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂಬುದಾಗಿ ಕೊಹ್ಲಿ ಹೇಳಿದರು.
Related Articles
Advertisement