Advertisement

ದನದ ಮಾಂಸ ಆರೋಗ್ಯಕರವೆಂದು ಶ್ಲೋಕದಲ್ಲೇ ಹೇಳಿದ್ದಾರೆ, ಆದರೆ ನಾನು ತಿಂದಿಲ್ಲ: ಸಿದ್ದರಾಮಯ್ಯ

02:54 PM Jan 13, 2021 | Team Udayavani |

ಮೈಸೂರು: ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವಿದೆ. ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಆ ಶ್ಲೋಕದಲ್ಲಿ ಹೇಳಿದ್ದಾರೆ. ಆದರೆ ನಾನು ದನದ ಮಾಂಸ ತಿಂದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಆ ಶ್ಲೋಕ ನೆನಪಾಗುತ್ತಿಲ್ಲ. ಆಮೇಲೆ ನೆನಪು ಮಾಡ್ಕೊಂಡು ಹೇಳುತ್ತೇನೆ. ಸಂಸ್ಕೃತ ಗೊತ್ತಿರುವವರೇ ಶ್ಲೋಕ ಬರೆದಿರುತ್ತಾರೆ. ಹಾಗಾದರೆ ಶ್ಲೋಕದಲ್ಲಿ ತಪ್ಪು ಇದೆಯಾ ಎಂದು ಪ್ರಶ್ನಿಸಿದರು.

ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ. ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳುತ್ತೇನೆ. ಈಗ ಹೇಳಿರದೆ ಅದನ್ನು ವಿವಾದ ಮಾಡಿಬಿಡುತ್ತಾರೆ. ನಾನು ಹೇಳಿದ ವಿಚಾರ ಬಿಟ್ಟು ಬೇರೆ ಅರ್ಥದಲ್ಲಿ ಅದನ್ನು ಹೇಳಿಬಿಡುತ್ತಾರೆ. ಅದಕ್ಕೆ ಶ್ಲೋಕವನ್ನು ಸರಿಯಾಗಿಯೇ ಹೇಳುತ್ತೇನೆ ಎಂದರು.

ನಾನು‌ ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನಿಸಿದ್ರೆ ತಿನ್ನುತ್ತೇನೆ. ಅದನ್ನು ಕೇಳಲು ಇವರ್ಯಾರು? ಆಹಾರ ನನ್ನ ಹಕ್ಕು ಅದನ್ನು ಪ್ರಶ್ನಿಸೋಕೆ ಇವರ್ಯಾರು ಎಂದು ಕುಟುಕಿದರು.

ಇದನ್ನೂ ಓದಿ:ಮಂತ್ರಿಗಿರಿಗಾಗಿ CD ಬ್ಲ್ಯಾಕ್ ಮೇಲ್, ಹಣಕೊಟ್ಟು ಸಚಿವಸ್ಥಾನ ಪಡೆದಿದ್ದಾರೆ: ಯತ್ನಾಳ್ ಆರೋಪ

Advertisement

ನಾನು ಈವರೆಗೆ ಗೋಮಾಂಸ ತಿಂದಿಲ್ಲ. ನಾನು ಹಂದಿ ಮಾಂಸ ತಿಂದಿಲ್ಲ. ನಾನು ತಿಂದಿರುವುದು ಕೋಳಿ ಮಾಂಸ, ಕುರಿಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಗೋಮಾಂಸ ತಿನ್ನುವುದೇ ಸಾಧನೆ ಎಂದು ಹೇಳಿದ್ದಾನೆ. ಆದರೆ ನಾನೇನು ಅವನ ಥರ ಸೋಪ್ಪು ತಿನ್ನಲಾ?  ನಾನು ಸೊಪ್ಪು ಬೇಕು ಅಂದ್ರೆ ಸೊಪ್ಪು ತಿನ್ನುತ್ತೇನೆ. ಮಾಂಸ ಬೇಕು ಅಂದ್ರೆ ಮಾಂಸ ತಿನ್ನುತ್ತೇನೆ. ನಾನೇನಾದರೂ ನಿಂಗೆ ಮಾಂಸ ತಿನ್ನು ಎಂದು ಹೇಳಿದ್ದೀನಾ? ಮತ್ತೇ ತಿನ್ನುವವರಿಗೆ ಸುಮ್ಮನೆ ಯಾಕೇ ಪ್ರಶ್ನೆ ಮಾಡ್ತೀಯಾ? ಜಗತ್ತಿನಲ್ಲಿ ಮಾಂಸಹಾರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ‌ ನಾಲ್ಕು ಕಾಲಿನ ಮಂಚವೊಂದನ್ನು ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ. ಅಮೇರಿಕಾ, ಇಂಗ್ಲೆಂಡ್, ಬ್ರಿಟನ್ ಸೇರಿದಂತೆ ಬೇರೆ ದೇಶದಲ್ಲಿರೋರು ದನ ತಿಂತಾರೆ. ಹಾಗಾದರೆ ಅವರೆಲ್ಲಾ ಪ್ರಾಣಿಗಳಾ? ನಿಮಗೆ ಸೊಪ್ಪುಇಷ್ಟ ಇದ್ದರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆಯೋ ಅದನ್ನು ತಿನ್ನಲು ಬಿಡಿ ಎಂದು ಬಿಎಸ್‌ವೈ ವಿರುದ್ದ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next