Advertisement

ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ

12:30 AM Mar 06, 2019 | Team Udayavani |

ಧಾರವಾಡ: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಅಗತ್ಯ ಪರಿಹಾರ ಕಾಮಗಾರಿಗಳೊಂದಿಗೆ ಸಮರ್ಪಕವಾಗಿ ಬರ ನಿರ್ವಹಣೆ ಮಾಡಲಾಗುತ್ತಿದೆ. ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, 30 ಜಿಲ್ಲೆಗಳ ಜಿಲ್ಲಾ ಧಿಕಾರಿಗಳಿಗೆ ಬರ ನಿರ್ವಹಣೆಗಾಗಿ ಈಗಾಗಲೇ ಕನಿಷ್ಠ 5 ಕೋಟಿ ಹಣ ನೀಡಲಾಗಿದೆ. ಬರ ನಿರ್ವಹಣೆಗಾಗಿ ರಾಜ್ಯದ ಎಲ್ಲ ಜಿಲ್ಲಾ ಧಿಕಾರಿಗಳ ಬಳಿ ಸೇರಿ ಸುಮಾರು 637 ಕೋಟಿ ರೂ. ಈಗಾಗಲೇ ಇದೆ. ದನ-ಕರು ಮತ್ತು ಜನರಿಗೆ ಕುಡಿವ ನೀರು, ಗುಳೇ ತಡೆಯಲು ಉದ್ಯೋಗ ಮತ್ತು ದನ-ಕರುಗಳಿಗೆ ಮೇವು ಬ್ಯಾಂಕ್‌ ಆರಂಭಿಸಲು ಎಲ್ಲ ಜಿಲ್ಲಾ ಧಿಕಾರಿ ಮತ್ತು ಜಿಪಂ ಸಿಇಒಗಳಿಗೆ ನಿರ್ದೇಶನ ನೀಡಲಾಗಿದೆ. ಅ ಧಿಕಾರಿಗಳು ಪ್ರತಿ ವಾರ ಜಿಲ್ಲಾ ಪ್ರವಾಸ ಮಾಡಿ ಬರ ಪರಿಹಾರ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ರಿಜಿಸ್ಟರ್‌ನಲ್ಲಿ ತಮ್ಮ ಅಭಿಪ್ರಾಯ, ಪರಿಶೀಲಿಸಿದ ಅಂಶಗಳ ಕುರಿತು ದಾಖಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next