Advertisement

20 ವರ್ಷ ಅಧಿಕಾರದ ಬಹುಮತ ಸಿಗಲಿ¨

01:05 PM Feb 27, 2018 | Team Udayavani |

ಬಸವಕಲ್ಯಾಣ (ಬೀದರ): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ ಗೆಲುವು ಸಾ ಧಿಸುವುದಷ್ಟೇ ಅಲ್ಲ, ಮುಂದಿನ 20 ವರ್ಷಗಳ ಕಾಲ ಸರ್ಕಾರವನ್ನು ಅಲುಗಾಡಿಸಲಾಗದಂತಹ ಪ್ರಚಂಡ ಬಹುಮತದಿಂದ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

Advertisement

ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ನವಶಕ್ತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ರಾಜ್ಯದ ಜನರು ಮೋದಿ ಜತೆಗೆ ಇದ್ದಾರೆ ಎಂದರು. 

ಕೇಂದ್ರದ ಯೋಜನೆಗಳನ್ನು ರಾಜ್ಯಗಳಲ್ಲಿ ಜಾರಿಗೆ ತಂದರೆ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚುತ್ತದೆ ಎಂದು ಅದರ ಲಾಭವನ್ನು ಜನರಿಗೆ ಮುಟ್ಟಿಸುತ್ತಿಲ್ಲ. ಸಿಎಂ ಸಿದ್ಧರಾಮಯ್ಯ ಅರ್ಧ ಸಮಯವನ್ನು ಪ್ರಧಾನಿ ಜತೆ ಜಗಳ ಆಡುವುದರಲ್ಲೇ ಕಳೆಯುತ್ತಿದ್ದಾರೆ. ಒಂದು ವೇಳೆ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದ ವಿಕಾಸ ಯಾತ್ರೆ ಮುನ್ನಡೆಯಲು ಸಾಧ್ಯ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಕರೆ ನೀಡಿದರು.

ದೇಶದಲ್ಲಿ 1,650 ಪಕ್ಷಗಳಿದ್ದು, ಅದರಲ್ಲಿ ಬಿಜೆಪಿ ವಿಭಿನ್ನವಾಗಿದೆ. ಬೂತ್‌ ಮಟ್ಟದ ಅಧ್ಯಕ್ಷ ಸಹ ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಲು ಸಾಧ್ಯವಿದ್ದು, ಅದಕ್ಕೆ ಹಿಂದೆ ವಾಲ್‌ ಪೇಂಟ್‌ ಹಾಕುತ್ತಿದ್ದ ನಾನೇ ಸಾಕ್ಷಿ. ಜನ ಸಂಘ ಸ್ಥಾಪನೆಯಾದಾಗ ಸ್ಥಳೀಯ ಸಂಸ್ಥೆಯಲ್ಲೂ ಗೆಲ್ಲಲು ಸಶಕ್ತನಾಗಿರದಿದ್ದ ಬಿಜೆಪಿ ಇಂದು 1,480 ಶಾಸಕರು, 303 ಸಂಸದರು ಮತ್ತು 19 ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಇದಕ್ಕೆ ಕಾರ್ಯಕರ್ತರ ಪರಿಶ್ರಮವೇ ಕಾರಣ. 4 ವರ್ಷಗಳಲ್ಲಿ ಕಾಂಗ್ರೆಸ್‌ ಅಧಿ ಕಾರದಲ್ಲಿ ಹಲವು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿ ಸಿದೆ. ಈಗ ತ್ರಿಪುರಾ ಮತ್ತು ಕರ್ನಾಟಕದ ಸರದಿ. ಇಲ್ಲಿಯೂ ಸಹ ಬಿಜೆಪಿ ಜಯಭೇರಿ ಬಾರಿಸಿ ಅಧಿಕಾರ ಗಿಟ್ಟಿಸಲಿದೆ ಎಂದು ಭವಿಷ್ಯ ನುಡಿದರು.

ಸಮಾವೇಶದಲ್ಲಿಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಪ್ರಭಾರಿ ಮುರಳಿಧರರಾವ್‌, ಸಹ ಪ್ರಭಾರಿ ಪುರಂದೇಶ್ವರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವ್ಹಾಣ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಸೂರ್ಯಕಾಂತ ನಾಗಮಾರಪಳ್ಳಿ, ಶಿವರಾಜ ಗಂದಗೆ, ಕೊಳ್ಳೂರ ಗುರುನಾಥ, ಲಿಂಗರಾಜ ಪಾಟೀಲ ಅಟ್ಟೂರ ಮತ್ತಿತರರು ಇದ್ದರು. 

Advertisement

ಅಮಿತ ಶಾರನ್ನು ಸನ್ಮಾನಿಸಿದ ಖೂಬಾ 
ಬಸವಕಲ್ಯಾಣ: ನಗರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರ ಸಮ್ಮುಖದಲ್ಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಜೆಡಿಎಸ್‌ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನುವ ಬಗ್ಗೆ ಗುಸು, ಗುಸು ಚರ್ಚೆಗಳು ಕೇಳಿ ಬಂದವಾದರೂ ಎಲ್ಲರ ನಿರೀಕ್ಷೆ ಹುಸಿಯಾದವು. ಅಮಿತ ಶಾ ಅವರು ಅನುಭವ ಮಂಟಪಕಕ್ಕೆ ಭೇಟಿ ನೀಡಿದಾಗ ತಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ಬಂದ ಶಾಸಕ ಖೂಬಾ, ಅಮಿತ ಶಾ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ವೇದಿಕೆ ಹಂಚಿಕೊಂಡರು. ನಂತರ ಅಮಿತ ಶಾ ಅವರು ಮುಖ್ಯರಸ್ತೆ ಮಾರ್ಗವಾಗಿ ನಗರಕ್ಕೆ ಆಗಮಿಸುವ ವೇಳೆ ರಸ್ತೆ ಬದಿಯಲ್ಲಿರುವ ತಮ್ಮ ನಿವಾಸದ ಹತ್ತಿರ ಅಮಿತ ಶಾ ಅವರ ವಾಹನ ನಿಲ್ಲಿಸಿ ಮತ್ತೆ ಸನ್ಮಾನಿಸಿದರು.

ಬಿಎಸ್‌ವೈ ಜತೆ ಖೂಬಾ ಗುಪ್ತ ಚರ್ಚೆ 
ಬಸವಕಲ್ಯಾಣ: ಜೆಡಿಎಸ್‌ ತೊರೆದು ಬಿಜೆಪಿ ಸೇರಲು ಸಿದ್ಧವಾಗಿರುವ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು, ನಗರದ ಅನುಭವ ಮಂಟಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಜತೆಗೆ ಗುಪ್ತವಾಗಿ ಚರ್ಚಿಸಿದ್ದು ಗಮನ ಸೆಳೆಯಿತು. ಅನುಭವ ಮಂಟಪಕಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರನ್ನು ಶ್ರೀಗಳು, ಪ್ರಮುಖರು ಸನ್ಮಾನಿಸುವ ವೇಳೆ, ಬಿಎಸ್‌ವೈ ಅವರನ್ನು ಮಂಟಪದ ಮೂಲೆಯೊಂದರಲ್ಲಿ ಕರೆದುಕೊಂಡು ಹೋದ ಖೂಬಾ, ಕೆಲ ಕಾಲ ಬಿಎಸ್‌ವೈ ಅವರೊಂದಿಗೆ ಚರ್ಚಿಸುತ್ತಿರುವುದು ಕಂಡು ಬಂದಿತು. ಆದರೆ ಇಬ್ಬರ ಮಧ್ಯೆ ಏನು ಚರ್ಚೆ ನಡೆಯಿತು ಎನ್ನುವುದು ತಿಳಿದು ಬಂದಿಲ

Advertisement

Udayavani is now on Telegram. Click here to join our channel and stay updated with the latest news.

Next