Advertisement

ಕೋಟದ ಹಲವೆಡೆ ಕೈಕೊಟ್ಟ ಮತಯಂತ್ರ

10:32 AM Apr 19, 2019 | sudhir |

ಕೋಟ: ಕೋಟ ಹೋಬಳಿಯ ಕೋಟತಟ್ಟು, ಪಾರಂಪಳ್ಳಿಗುಡ್ಡಿಶಾಲೆ, ಕಾವಡಿ, ಗುಂಡ್ಮಿ ಮತಕೇಂದ್ರದಲ್ಲಿ ಮತಯಂತ್ರದಲ್ಲಿ ದೋಷ ಉಂಟಾಗಿ
ಮತಚಲಾವಣೆಗೆ ಸ್ವಲ್ಪ ಸಮಸ್ಯೆ ಯಾಯಿತು.

Advertisement

ಕೋಟತಟ್ಟು ಗ್ರಾ.ಪಂ. ಮತಕೇಂದ್ರ ದಲ್ಲಿ ಬೆಳಗ್ಗೆ ಮತಯಂತ್ರ ಸರಿಪಡಿಸಲಾಗದೆ ಮತದಾನ ಆರಂಭಿಸುವುದು ಗಂಟೆಗಟ್ಟಲೆ ತಡವಾಯಿತು. ಕಾವಡಿ ಹಿ.ಪ್ರಾ.ಶಾಲೆಯ ಮತಕೇಂದ್ರದಲ್ಲಿ ಎರಡೆರಡು ಬಾರಿ ಮತಯಂತ್ರದಲ್ಲಿ ದೋಷ ಕಂಡು ಬಂದು ಎರಡು ಮತಯಂತ್ರ ಬದಲಾಯಿಸಲಾಯಿತು. ಇದರಿಂದಾಗಿ ಮತಚಲಾಯಿಸಲು ಬಂದವರು ಗಂಟೆಗಟ್ಟಲೆ ಕಾಯಬೇಕಾಯಿತು ಹಾಗೂ ಸಾಲಿನಲ್ಲಿ ನಿಂತವರು ಆಕ್ರೋಶ ವ್ಯಕ್ತಪಡಿಸಿದರು. ಪಾರಂಪಳ್ಳಿ ಗುಡ್ಡಿ ಶಾಲೆ ಹಾಗೂ ಗುಂಡ್ಮಿ ಶಾಲೆ ಕೂಡ ಇದೇ ರೀತಿ ಮತಯಂತ್ರ ದೋಷದಿಂದ ಮತದಾನ ತಡವಾಯಿತು.

ನಿಧಾನಗತಿಯಲ್ಲಿ ಮತಚಲಾವಣೆ
ಕೆಲವು ಕಡೆಗಳಲ್ಲಿ ಮತದಾನ ಪ್ರಕ್ರಿಯೆ ತುಂಬಾ ನಿಧಾನಗತಿಯಲ್ಲಿ ಸಾಗಿತು. ಹೀಗಾಗಿ ಕೋಟತಟ್ಟು ಗ್ರಾ.ಪಂ. 145ನೇ ಮತಗಟ್ಟೆಯಲ್ಲಿ ಬೆಳಗ್ಗೆ ಬೇಗ ಮತಚಲಾಯಿಸಲು ಬಂದ ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿಯವರು ಸುಮಾರು 45ನಿಮಿಷ ಸರತಿಯ ಸಾಲಿನಲ್ಲಿ ನಿಂತು ಕಾದು ಮತಚಲಾಯಿಸಿದರು.

ಗುರುತು ಚೀಟಿ ಗೊಂದಲ
ಕೆಲವು ಮಂದಿ ಆಧಾರ್‌ ಕಾರ್ಡ್‌ ಝೆರಾಕ್‌, ರೇಷನ್‌ ಕಾಡ್‌, ಬಿ.ಎಲ್‌.ಒ.ಗಳು ನೀಡಿದ ಗುರುತು ಚೀಟಿಗಳನ್ನು ಹಿಡಿದು ಮತಚಲಾಯಿಸಲು ಬಂದರು . ಅವರಿಗೆ ಬೇರೆ ಗುರುತು ಪತ್ರಗಳನ್ನು ತರುವಂತೆ ಹೇಳಿ ವಾಪಾಸು ಕಳುಹಿಸಲಾಯಿತು.

ಅಂಗಡಿ-ಮುಂಗಟ್ಟು ಮುಚ್ಚಿಸಿದರು
ಜಿಲ್ಲಾಧಿಕಾರಿಗಳ ಸೂಚನೆ ಇದೆ ಎನ್ನುವ ಕಾರಣವನ್ನು ನೀಡಿ ಕೋಟತಟ್ಟು ಶಾಲೆ, ಕೋಡಿ ಕನ್ಯಾಣ ಮುಂತಾದ ಕಡೆಗಳಲ್ಲಿ ಚುನಾವಣೆ ಕೇಂದ್ರದ ಹೊರಗಡೆ ಇದ್ದ 200ಮೀಟರ್‌ ವ್ಯಾಪ್ತಿಯೊಳಗಿನ ಅಂಗಡಿ-ಹೋಟೆಲ್‌ಗ‌ಳನ್ನು ಕೋಟ ಪೊಲೀಸರು ಮುಚ್ಚಿಸಿದರು. ಕಳೆದ 30ವರ್ಷದಿಂದ ವ್ಯಾಪಾರ ನಡೆಸುತ್ತಿದ್ದೇವೆ. ಇದೇ ಮೊದಲ ಬಾರಿಗೆ ಈ ರೀತಿ ಅಂಗಡಿ-ಮುಂಗಟ್ಟು ಮುಚ್ಚಿಸಲಾಗಿದೆ. ಮತಚಲಾಯಿಸಲು ಬಂದವರು ಅವರ ಸ್ವಂತ ಖರ್ಚಿನಲ್ಲಿ ವ್ಯಾಪಾರ ಮಾಡಿ ಹೋಗುತ್ತಿದ್ದರು ಹಾಗೂ ಯಾರಿಗೂ ಸಮಸ್ಯೆ ಇರಲಿಲ್ಲ. ಈ ರೀತಿ ಮಾಡಿರುವುದು ಅನ್ಯಾಯ. ಬೇರೆ ಕಡೆಗಳಲ್ಲಿ ಈ ರೀತಿ ಮಾಡಿಲ್ಲ ಎಂದು ಮಾಲಕರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಮತ ಪ್ರಮಾಣ ಕಡಿಮೆ
ಮತ ಯಂತ್ರ ಕೈಕೊಟ್ಟ ಸ್ಥಳಗಳಲ್ಲಿ ಶೇಕಡಾವಾರು ಮತ ಪ್ರಮಾಣ ಕುಸಿತವಾಗಿದೆ. ಮತ ಯಂತ್ರ ಕೈಕೊಟ್ಟಿದ್ದಾಗ ಮತದಾರರು ಮನೆಗೆ ಹೋಗಿದ್ದು ವಾಪಸ್‌ ಬಂದಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next