Advertisement

25 ಆಪ್‌ ಅಭ್ಯರ್ಥಿಗಳಿಗೆ ಠೇವಣಿ ಇಲ್ಲ

03:45 AM Mar 13, 2017 | |

ನವದೆಹಲಿ: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಗೆದ್ದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಆಮ್‌ ಆದ್ಮಿ ಪಕ್ಷದ ಬರೋಬ್ಬರಿ 24 ಮಂದಿ ಅಭ್ಯರ್ಥಿಗಳು ಭದ್ರತಾ ಠೇವಣಿಯನ್ನೂ ಕಳೆದುಕೊಂಡಿದ್ದಾರೆ.

Advertisement

ಒಟ್ಟು 62 ಮಂದಿ ಆಪ್‌ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ಇಳಿಯಲ್ಪಟ್ಟರೆ, ಭೋವಾ, ಫ‌ಜಿಲ್ಕಾ ಮತ್ತು ಮುಕೇರಿಯನ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. 25 ಮಂದಿ ಆಪ್‌ ಅಭ್ಯರ್ಥಿಗಳು ಚುನಾವಣಾ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ಮತ ಹಂಚಿಕೆಯಲ್ಲೂ ಆಪ್‌ ಮೂರನೇ ಸ್ಥಾನ ಪಡೆದಿದೆ. ಇಲ್ಲಿ ಕಾಂಗ್ರೆಸ್‌ ಶೇ.38.5ರಷ್ಟು ಮತಗಳನ್ನು ಗಳಿಸಿದ್ದರೆ, ಶಿರೋಮಣಿ ಅಕಾಲಿ ದಳವು ಶೇ.25 ಮತಗಳನ್ನು ಗಳಿಸಿವೆ. ಆಪ್‌ಗೆ ಸಿಕ್ಕಿದ್ದು ಶೇ.23 ಮತಗಳು.

Advertisement

Udayavani is now on Telegram. Click here to join our channel and stay updated with the latest news.

Next