Advertisement

ಉಗ್ರ ಚಟುವಟಿಕೆ ಸದೆಬಡಿಯದೇ ಇದ್ದರೆ ದೇಶಕ್ಕೆ ಅಪಾಯ: ಪೇಜಾವರ ಶ್ರೀ

02:17 PM Sep 23, 2022 | Team Udayavani |

ಬೆಳ್ತಂಗಡಿ: ಕರಾವಳಿ ಭಾಗದಲ್ಲಿ ಉಗ್ರರ ನಂಟಿನ ಬಗ್ಗೆ ಈ ಹಿಂದೆ ಅನೇಕ ಸಂಶಯಗಳು ಮೂಡಿದ್ದವು. ಅದು ಇಂದು ಮತ್ಯೆ ಸತ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಈ ವಿಷಯದಲ್ಲಿ ತೀವ್ರ ವಿಚಾರಣೆ ನಡೆಸಿ ಯಾವ ಒಬ್ಬ ಉಗ್ರನು ಇಲ್ಲಿ ಉಳಿಯಬಾರದು ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥಿ ಸ್ವಾಮೀಜಿಯವರು ಧರ್ಮಸ್ಥಳದಲ್ಲಿ ಹೇಳಿದರು.

Advertisement

ಇದನ್ನೂ ಓದಿ:ಕೇರಳದಲ್ಲಿ ಹರತಾಳ; ಹಿಂಸಾಚಾರಕ್ಕೆ ತಿರುಗಿದ ಪಿಎಫ್ ಐ ಪ್ರತಿಭಟನೆ, ಕಲ್ಲುತೂರಾಟ; ಹಲವರ ಬಂಧನ

ಶಿವಮೊಗ್ಗ ಹಾಗೂ ಕರಾವಳಿ ಭಾಗದಲ್ಲಿ ಉಗ್ರರ ಸಂಚು ಪತ್ತೆಯಾಗಿದೆ. ಇದನ್ನು ಈ ಮೊದಲೇ ಮಟ್ಟ ಹಾಕಬೇಕಿತ್ತು. ಕೇಂದ್ರ, ರಾಜ್ಯ ಸರಕಾರಗಳು ಈಗಾಗಲೇ ಬಂಧಿಸಿದವರನ್ನು ತೀವ್ರ ವಿಚಾರಣೆ ನಡೆಸಿ, ಇದರ ಮೂಲವನ್ನು ಬೇರು ಸಹಿತ ಕಿತ್ತೊಗೆಯಬೇಕು. ಈ ವಿಚಾರಗಳಿಗೆ ಕೋಮು‌ ಬಣ್ಣಹಚ್ಚುವ ಷಡ್ಯಂತ್ರ ನಡೆಯುತ್ತಿದ್ದು ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು. ದೇಶದಲ್ಲಿ ಸದಾ ಶಾಂತಿ ಸುವ್ಯವಸ್ಥೆ ಇರಬೇಕು ಎಂಬುದೇ ನಮ್ಮ ಆಶಯವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಉಗ್ರಚಟುವಟಿಕೆಗಳಿಗೆ ಅಂತ್ಯ ಹಾಡಬೇಕು ಎಂದು ಅವರು ಆಗ್ರಹಿಸಿದರು.

ಹಿಂದೂ ಸಮಾಜದ ಎಲ್ಲರ ಕೇಂದ್ರಬಿಂದು ಪ್ರಭು ಶ್ರೀರಾಮಚಂದ್ರನ ಮಂದಿರ ಪುನರ್ ನಿರ್ಮಾಣಗೊಳ್ಳುತ್ತಿದ್ದು ಸಂಕ್ರಾಂತಿ ಬಳಿಕ ಬಹುತೇಕ‌ ಕಾಮಗಾರಿಗಳಿಗೆ ವೇಗ ಸಿಗಲಿದೆ. ಭೂಮಿಯಿಂದ ಸುಮಾರು ಮೇಲ್ಭಾಗ ದೇವರ ಪೀಠದ ರಚನೆ ಕಾರ್ಯ ನಡೆದಿದ್ದು ಕಂಬಗಳನ್ನು ನಿಲ್ಲಿಸುವ ಕಾರ್ಯ ಸಾಗುತ್ತಿದೆ. ಬಾಲರಾಮ ದೇವರ ವಿಗ್ರಹವನ್ನು ಅಮೃತ ಶಿಲೆಯಿಂದ ನಿರ್ಮಿಸುವ ವಿಚಾರ ಮುಂದಿದ್ದು ನೀಲಿ ವರ್ಣವೂ ಅದರಲ್ಲಿ ಒಳಗೊಳ್ಳಲಿದೆ. ಇದನ್ನು ಈಗಾಗಲೇ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದಕ್ಕೆ ಬೇಕಾದ ಶಿಲೆಯ ಶೋಧ ನಡೆಯುತ್ತಿದೆ ಎಂದು ಅಯೋಧ್ಯೆ ಶ್ರೀ ರಾಮಮಂದಿರ ಟ್ರಸ್ಟ್ ಟ್ರಸ್ಟಿ ಉಡುಪಿ ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next