Advertisement
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಟೀಂನಲ್ಲಿರುವವರೆಲ್ಲಾ ಆಟ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ನ ಪ್ರಮುಖ ಆಟಗಾರರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅಂತಹ ಅನೇಕರು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.
Related Articles
Advertisement
ಚಿಕ್ಕ ಮಗಳೂರು ಜಿಲ್ಲೆಯಲ್ಲಿ ನಮ್ಮ ಅಜ್ಜಿ (ಇಂದಿರಾಗಾಂಧಿ)ಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆ ಎಂದು ಹೇಳಿದ್ದೀರಾ, ಅಂದು ಮೊರಾರ್ಜಿ ದೇಸಾಯಿ ಅವರು ಕಾಂಗ್ರೆಸ್ ಸದಸ್ಯತ್ವದಿಂದ ವಜಾ ಮಾಡಿದ ಮೇಲೆ ದಿಕ್ಕುಗಾಣದಂತಾಗಿದ್ದ ಇಂದಿರಾಗಾಂಧಿ ಅವರನ್ನು ಚಿಕ್ಕಮಗಳೂರು ಜಿಲ್ಲೆಗೆ ಕರೆತಂದು ಲೋಕಸಭಾಸದಸ್ಯರನ್ನಾಗಿಸಿ ಘನತೆ, ಗೌರವ ತಂದುಕೊಟ್ಟವರು ಡಿ.ದೇವರಾಜಅರಸು, ಅದಕ್ಕೆ ನೆರವಾದವರು ಡಿ.ಬಿ.ಚಂದ್ರೇಗೌಡರು. ಅಂತಹವರು ಮರೆತು ಹೋದರಾ ನಿಮಗೆ ? ಅಥವಾ ನಿಮಗೆ ಬರೆದು ಕೊಟ್ಟವರು ಈ ಅಂಶಗಳನ್ನು ಸೇರಿಸಿರಲಿಲ್ಲವೇ ಎಂದು ಟೀಕಿಸಿದರು.
3500ರೈತರ ಆತ್ಮಹತ್ಯೆ, ಧರ್ಮದ ಹೆಸರಿನಲ್ಲಿ ಯುವಕರ ಮಾರಣಹೋಮ ಸೇರಿದಂತೆ ಅನೇಕ ಘಟನೆ ನಡೆದಿದೆ. ಮಲ್ಲಿಕಾರ್ಜುನಖರ್ಗೆ, ಡಾ.ಜಿ.ಪರಮೇಶ್ವರ್, ವಿ.ಶ್ರೀನಿವಾಸಪ್ರಸಾದ್ ಸೇರಿದಂತೆ ಅನೇಕರಿಗೆ ಸಿದ್ದರಾಮಯ್ಯ ಅಸೂಯೆಪಟ್ಟರು. ಇನ್ನು ಸಿದ್ದರಾಮಯ್ಯಗೆ ಬಹುವಚನವೇ ಗೊತ್ತಿಲ್ಲ. 1300 ಕೋಟಿ ಜಾಹಿರಾತುಕೊಟ್ಟು ತಮ್ಮನ್ನು ತಾವು ಬಿಂಬಿಸಿಕೊಂಡಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಅವರಿಗೆ ಅಂತರಂಗ-ಬಹಿರಂಗ ಎರಡೂ ಶುದ್ಧಿಯಾಗಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರಿಗೆ ಹಣ ಬಲ, ಭುಜ ಬಲ ಎರಡೂ ಇದೆ. ಹುಣಸೂರು ಕ್ಷೇತ್ರದಲ್ಲಿ ನಮ್ಮ ಸಮಾಜದವರನ್ನು ಕರೆಸಿ ಮಾತನಾಡುತ್ತಿದ್ದಾರೆ. ದುಡ್ಡಿಲ್ಲದೆ ಚುನಾವಣೆ ಆಗಲ್ಲ. ಆದರೆ, ದುಡ್ಡೇ ಎಲ್ಲವೂ ಅಲ್ಲ. ಆಗಿದ್ದರೆ, ಮಾರ್ವಾಡಿಗಳೆಲ್ಲ ಶಾಸಕರಾಗಿರುತ್ತಿದ್ದರು, ನೋಡೋಣ ಜನ ಇದ್ದಾರೆ.-ಎಚ್.ವಿಶ್ವನಾಥ್, ಮಾಜಿ ಸಂಸದ