Advertisement
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುತ್ಛಯದಲ್ಲಿ ರಂಗಧ್ವನಿ-17ರ ಪ್ರಯುಕ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣ “ರಂಗಾಭಿನಯ: ಮಾತುಕತೆ, ಮಾಟ, ಮನನ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಪೀಳಿಗೆಗೆ ತಲೆ ಕೆಡೆಸುವಂತ ಮನ ಕುಲುಕುವಂತಹ ವಿಷಯಗಳ ಬಗ್ಗೆ ತಿಳಿಯುವಲ್ಲಿ ಶ್ರಮಿಸಬೇಕಿದೆ ಎಂದರು.
Related Articles
Advertisement
ಸಾಹಿತ್ಯದ ಹಾಗೂ ರಂಗಭೂಮಿಯ ವಸ್ತುಗಳಿಂದ ಬದುಕಿಗೆ ಯಾವುದೇ ಅರ್ಥವಿಲ್ಲ ಎಂಬ ಸಂದೇಶವನ್ನು ರಾಜಕೀಯ ವ್ಯಕ್ತಿಗಳು, ಮಾಧ್ಯಮಗಳನ್ನು ನಿಯಂತ್ರಿಸುತ್ತಿರುವ ಧಣಿಗಳು ಸಾರುತ್ತಿದ್ದಾರೆ. ಹೀಗಾಗಿ ಸುಮಾರು ಮೂರು ದಶಕಗಳ ಹಿಂದೆ ಇದ್ದ ರಂಗ ಸಂಸ್ಕೃತಿ ಇಂದು ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಲವಕುಮಾರ, ಟಿ.ಎಚ್. ಸಂಧ್ಯಾರಾಣಿ, ಬಸವರಾಜ ಹೂಗಾರ ಹಾಗೂ ರಜನಿ ಗರುಡ ಇದ್ದರು. ವಿಚಾರ ಸಂಕಿರಣದ ಕೊನೆಯ ದಿನವಾದ ರವಿವಾರ ಪುದುಚೇರಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸವಿತಾ ರಾಣಿ ಅವರು ಪ್ರಸ್ತುತಪಡಿಸಿದ ರೆಸ್ಟ್‌ನೆಸ್ ಇನ್ ಪೀಸ್ (ರಿಪ್) ಎಂಬ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಮಹಿಳೆಯರ ಜೀವನ ಚೂರಾಗಿ ಚಡಪಡಿಸುವುದನ್ನು ರಂಗದ ಮೇಲೆ ಪ್ರಾತ್ಯಕ್ಷಿಕೆ ರೂಪದಲ್ಲಿ ಪ್ರಸ್ತುತಪಡಿಸಿದರು.
ಚಂಪಾ ಶೆಟ್ಟಿ ಮತ್ತು ತಂಡದವರು “ಅಕ್ಕು ಕಥಾಭಿನಯ’ ಎಂಬ ಮೂರು ಕಥೆಗಳನ್ನು ಒಳಗೊಂಡ ನಾಟಕವನ್ನು ಸಾದರ ಪಡಿಸಿದರು. ಇದರೊಂದಿಗೆ ಚಂಪಾ ಶೆಟ್ಟಿ ಅವರು ಅದರ ಪ್ರಾತ್ಯಕ್ಷಿಕೆ ನೀಡಿದರು. ಇದಾದ ನಂತರ ಹೆಗ್ಗೊàಡಿನ ನೀನಾಸಂ ತಂಡದಿಂದ “ಬಾಬುಗಿರಿ, ತಂಡ’ ಎಂಬ ಟ್ಯಾಗೋರರ “ಬಾಬೂಸ್ ಆಫ್ ನಯಂಜೂರ್ ಮತ್ತು ಮೈ ಲಾಡ್ ದ ಬೇಬಿ’ ಎಂಬ ಎರಡು ಕಥೆಗಳ ರಂಗರೂಪವನ್ನು ಪ್ರಸ್ತುಪಡಿಸಿದರು. ಇದಕ್ಕೂ ಮೊದಲು “ಕಾಯದ ಸತ್ಯ’ ವಿಷಯ ಕುರಿತು ಪುತ್ತೂರಿನ ಲಕ್ಷಿಶ ತೋಳ್ಪಾಡಿ ತಮ್ಮ ಅನಿಸಿಕೆ ಹಂಚಿಕೊಂಡರು.