Advertisement

ಕೊರೊನಾ ಕರಿಛಾಯೆ! ಮಲ್ಪೆ ಸೈಂಟ್‌ಮೇರಿ ದ್ವೀಪದಲ್ಲಿ ಪ್ರವಾಸಿಗರಿಲ್ಲ

10:16 PM Mar 15, 2020 | Sriram |

ಮಲ್ಪೆ: ಕೊರೊನಾ ವೈರಸ್‌ ಎಫೆಕ್ಟ್ ಮಲ್ಪೆ ಸೈಂಟ್‌ಮೇರಿ ದ್ವೀಪಕ್ಕೂ ತಟ್ಟಿದ್ದು ಕಳೆದ ಒಂದು ವಾರದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ವಾರಾಂತ್ಯ ಹಾಗೂ ಉಳಿದ ದಿನಗಳಲ್ಲೂ ಗಿಜಿಗುಡುತಿದ್ದ ದ್ವೀಪದಲ್ಲಿ ರವಿವಾರ ಪ್ರವಾಸಿಗರು ಇಲ್ಲದೆ ಭಣಗುಡುತ್ತಿದೆ. ವಾರದ ರಜೆ ದಿನಗಳಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೈಂಟ್‌ಮೇರಿ ದ್ವೀಪಕ್ಕೆ ಅಗಮಿಸುತ್ತಿದ್ದರು. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಈಗ ಬರುತ್ತಿಲ್ಲ. ಟೂರಿಸ್ಟ್‌ ಬೋಟ್‌ಗಳಿಗೆ ದಿನಕ್ಕೆ ಒಂದು ಟ್ರಿಪ್‌ ಸಿಗುವುದು ಕಷ್ಟವಾಗಿದೆ. ಮಲ್ಪೆ ಬೀಚ್‌ನಲ್ಲಿರುವ ಸ್ಪೀಡ್‌ ಬೋಟ್‌ಗಳಿಗೂ ಜನರಿಲ್ಲದೆ ನಿಂತಿದೆ. ಮಲ್ಪೆ ಬೀಚ್‌ನಲ್ಲೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಕಳೆದ ಒಂದು ವಾರದಿಂದ ಶೇ.60ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ದಿನಕ್ಕೆ 200-300 ರೂ. ಮಾತ್ರ ವ್ಯಾಪಾರ ನಡೆಯುತ್ತಿದೆ ಎನ್ನುತ್ತಿದ್ದಾರೆ ಇಲ್ಲಿನ ಅಂಗಡಿಯವರು.

Advertisement

ಪಡುಬಿದ್ರಿಯಲ್ಲಿ ವಿಹಾರಿಗಳಿಲ್ಲ
ಪಡುಬಿದ್ರಿ: ಇಲ್ಲಿನ ಬೀಚ್‌ ಕೂಡ ಬಿಕೋ ಎನ್ನುತ್ತಿದ್ದು, ವ್ಯಾಪಾರಿಗಳಿಗೆ ನೇರ ಪರಿಣಾಮ ತಟ್ಟಿದೆ. ಪಡುಬಿದ್ರಿ ಪೇಟೆಯಲ್ಲಿಯೂ ಜನ ಸಂಚಾರ ವಿರಳವಾಗಿದ್ದು ವ್ಯಾಪಾರವೂ ಕುಸಿದಿದೆ. ಪೇಟೆಯಲ್ಲಿನ ಬಾಳೆಹಣ್ಣು ವ್ಯಾಪಾರಿ ಭಾಸ್ಕರ್‌ ಪಲಿಮಾರ್‌ ಅವರು ಪ್ರತಿಕ್ರಿಯಿಸಿ, ವಹಿವಾಟಿನಲ್ಲಿ ಹಲವು ಸಾವಿರ ರೂ. ನಷ್ಟವಾಗಿರುವುದಾಗಿ ಹೇಳಿದ್ದಾರೆ.

ಟೋಲ್‌ ಪ್ಲಾಜಾ ಖಾಲಿ
ಕೋಟ: ಇತ್ತ ವಾಹನಗಳ ಸಂಚಾರವೇ ಕಡಿಮೆಯಾಗಿ ಟೋಲ್‌ಪ್ಲಾಜಾಗಳೂ ಖಾಲಿಯಾಗಿವೆ. ಪ್ರತಿ ರವಿವಾರ ಪ್ರವಾಸ, ಧಾರ್ಮಿಕ ಕ್ಷೇತ್ರಗಳ ಭೇಟಿ, ಶುಭ ಸಮಾರಂಭಗಳು ಸೇರಿದಂತೆ ರಸ್ತೆಯಲ್ಲಿ ಸಾವಿರಾರು ಜನ ಸಂಚರಿಸುತ್ತಿದ್ದರು. ಹೀಗಾಗಿ ದಟ್ಟನೆ ಸಾಮಾನ್ಯವಾಗಿತ್ತು. 400-500ಮೀ. ದೂರ ವಾಹನಗಳು ಸಾಲು ನಿಲ್ಲುತ್ತಿದ್ದವು. ಆದರೆ ಈ ರವಿವಾರ ದಟ್ಟನೆ ಇರಲಿಲ್ಲ. ಬಸ್ಸುಗಳು, ಸರಕು ಸಾಗಾ ಣಿಕೆ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಓಡಾಟ ಸಾಕಷ್ಟು ಕಡಿಮೆ ಇದ್ದು ಹೀಗಾಗಿ ಶುಲ್ಕ ಸಂಗ್ರಹ ಕೂಡ ಗಣನೀ ಯವಾಗಿ ಇಳಿಕೆಯಾಗಿದೆ ಎಂದು ಸಾಸ್ತಾನ ಟೋಲ್‌ ಸಿಬಂದಿ ತಿಳಿಸಿದ್ದಾರೆ.

ಕಾಪುವಿನಲ್ಲೂ ಪ್ರವಾಸಿಗರಿಲ್ಲ
ಕಾಪು: ಇಲ್ಲಿನ ಬೀಚ್‌ ಗೆ ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯ ಪ್ರವಾಸಿಗರು ಮತ್ತು ವಿಹಾರಾರ್ಥಿಗಳು ಭೇಟಿ ನೀಡುತ್ತಾರೆ. ಆದರೆ ಕೊರೊನಾ ಆತಂಕದಿಂದಾಗಿ ಜನರ ಸಂಖ್ಯೆ ತೀವ್ರ ಇಳಿಮುಖವಾಗಿದೆ. ರವಿವಾರ ಸಂಜೆ ಕನಿಷ್ಠ ಸಂಖ್ಯೆಯ ಜನ ಬೀಚ್‌ಗೆ ಭೇಟಿ ನೀಡಿದ್ದು, ಇದರಿಂದಾಗಿ ಬೀಚ್‌ ಬದಿಯ ವ್ಯಾಪಾರಿಗಳೂ ಆತಂಕಕ್ಕೆ ಒಳಗಾಗಿದ್ದಾರೆ.

ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕುಸಿತ
ಕಾಪು ಬೀಚ್‌ ಗೆ ವಾರಾಂತ್ಯದಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಪ್ರತೀ ಶನಿವಾರ ಮತ್ತು ರವಿವಾರ ಪಾರ್ಕಿಂಗ್‌ ಯಾರ್ಡ್‌ ನಲ್ಲಿ ಜಾಗವಿಲ್ಲದೇ ವಾಹನ ಸವಾರರು ಪರದಾಡುವಂತಾಗಿತ್ತು. ಆದರೆ ಇವತ್ತು ರವಿವಾರ ಎಂದೇ ತಿಳಿಯುತ್ತಿಲ್ಲ . ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕುಸಿದು ಬಿಟ್ಟಿದೆ.
-ಪ್ರಶಾಂತ್‌ ಕರ್ಕೇರ,ಕಾಪು ಬೀಚ್‌ ನಿರ್ವಾಹಕ

Advertisement

ಜನ ವಿರಳ
ಈ ಹಿಂದೆ ದಿನಕ್ಕೆ ಸಾರಾಸರಿ 5- 6 ಟ್ರಿಪ್‌ ಆಗುತ್ತಿದ್ದು ಇದೀಗ ಒಂದು ವಾರದಿಂದ ದಿನಕ್ಕೆ ಒಂದು ಟ್ರಿಪ್‌ಗ್ೂ ಜನ ಭರ್ತಿ ಆಗುವುದು ಕಷ್ಟವಾಗಿದೆ. ಮೂರು ದಿನದಿಂದ ಬೋಟನ್ನು ದಡದಲ್ಲಿ ಕಟ್ಟಿ ಇಟ್ಟಿದೇªವೆ. ರವಿವಾರ ರಜಾ ದಿನವಾದರೂ ಕೇವಲ ಒಂದು ಟ್ರಿಪ್‌ ಮಾತ್ರ ಆಗಿದೆ.
– ಗಣೇಶ್‌ ಅಮೀನ್‌ ಮಲ್ಪೆ,ರಾಜರಾಜೇಶ್ವರೀ ಟೂರಿಸ್ಟ್‌ ಬೋಟ್‌ನ ನಿರ್ವಾಹಕರು

Advertisement

Udayavani is now on Telegram. Click here to join our channel and stay updated with the latest news.

Next