Advertisement

ಜಂತುಹುಳು ಮಾತ್ರೆಗಳ ಸೇವನೆಯಿಂದ ದುಷ್ಪರಿಣಾಮಗಳು ಇಲ್ಲ :ಮಕ್ಕಳಲ್ಲಿ ಜಾಗೃತಿ ಅಗತ್ಯ

06:40 PM Mar 13, 2023 | Team Udayavani |

ರಬಕವಿ-ಬನಹಟ್ಟಿ: ಜಂತುಹುಳುಗಳನ್ನು ಜಂತುಹುಳು ನಾಶಕದಿಂದ ನಿವಾರಣೆ ಮಾಡುವುದಷ್ಟೆ ಅಲ್ಲದೆ ಇತರ ಆಚರಣೆಯ ಮೂಲಕವೂ ಅವುಗಳನ್ನು ನಿಯಂತ್ರಿಸಬಹುದಾಗಿದೆ. ಜಂತುಹುಳುಗಳ ಸೋಂಕಿನಿಂದಾಗಿ ಮಕ್ಕಳಲ್ಲಿ ರಕ್ತ ಹೀನತೆ, ಪೌಷ್ಟಿಕಾಂಶದ ಕೊರತೆ, ನಿಶ್ಯಕ್ತಿ, ಹೊಟ್ಟೆ ನೋವು ವಾಕರಿಕೆ, ವಾಂತಿ, ಅತಿಸಾರ ಮತ್ತು ತೂಕು ಕಡಿಮೆಯಾಗುವುದು ಕಂಡು ಬರುತ್ತವೆ. ಆದ್ದರಿಂದ ಜಂತುಹುಳುಗಳ ನಾಶಕದ ಮಾತ್ರೆಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಸಮನ್ವಯ ಅಧಿಕಾರಿ ವೈ.ಎಸ್. ಧನಗರ ತಿಳಿಸಿದರು.

Advertisement

ಸೋಮವಾರ ಸ್ಥಳೀಯ ಎಸ್‌ಆರ್‌ಎ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣೆಯ ಮಾತ್ರೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರದಲ್ಲಿ ಜಂತುಹುಳುಗಳನ್ನು ಕಡಿಮೆ ಮಾಡುವುದರಿಂದ ಸಮುದಾಯಕ್ಕೆ ಪ್ರಯೋಜನಕಾರಿಯಾಗುತ್ತದೆ. ಮಕ್ಕಳಲ್ಲಿ ಶುಚಿತ್ವ ಬಹಳಷ್ಟು ಮುಖ್ಯವಾಗಿದೆ. ಮಕ್ಕಳು ತಮ್ಮ ಉಗುರುಗಳನ್ನು ಸ್ವಚ್ಛವಾಗಿ ಮತ್ತು ಚಿಕ್ಕದಾಗಿ ಇಟ್ಟುಕೊಳ್ಳಬೇಕು, ಯಾವಾಗಲೂ ಶುದ್ಧ ನೀರನ್ನು ಕುಡಿಯಬೇಕು, ಬಯಲಿನಲ್ಲಿ ಮಲ ವಿಸರ್ಜನೆ ಮಾಡದೆ ಯಾವಾಗಲೂ ಶೌಚಾಲಯವನ್ನೆ ಬಳಸಬೇಕು, ಬರಿಗಾಗಲಿನಿಂದ ನಡೆಯಬಾರದು ಮತ್ತು ನಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ವರ್ಷದಲ್ಲಿ ಎರಡು ಬಾರಿ ಮಾತ್ರೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿಯೂ ಮಾತ್ರೆಗಳನ್ನು ನೀಡುತ್ತಾರೆ. ಜಂತುಹುಳಗಳ ನಾಶಕ ಮಾತ್ರೆಗಳ ಬಗ್ಗೆ ಯಾವುದೆ ನಿರ್ಲಕ್ಷ್ಯ ಬೇಡ. ಇದರಿಂದ ಯಾವುದೆ ದುಷ್ಪರಿಣಾಗಳು ಇಲ್ಲ ಎಂದು ವೈ.ಎಸ್.ಧನಗರ ತಿಳಿಸಿದರು.

ರಬಕವಿ ಬನಹಟ್ಟಿ ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಧಬಾಡಿ ಮಕ್ಕಳಿಗೆ ಜಂತುಹುಳುಗಳ ಮಾತ್ರೆಗಳನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರಸಭೆಯ ಸದಸ್ಯೆ ಗೌರಿ ಮಿಳ್ಳಿ, ಪ್ರಭಾರ ಮುಖ್ಯ ಶಿಕ್ಷಕ ಡಾ.ಡಿ.ಎಂ.ನದಾಫ್, ಆರೋಗ್ಯ ಇಲಾಖೆಯ ಅಧಿಕಾರಿ ಅಪ್ಪಾಜಿ ಹೂಗಾರ, ಶಿಕ್ಷಣಾಧಿಕಾರಿ ಜಿ.ಐ.ಹತ್ತಳ್ಳಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next