Advertisement

ನನೆಗುದಿಗೆ ಬಿದ್ದ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಇಲ್ಲ

12:30 AM Feb 09, 2019 | Team Udayavani |

ಮಂಡ್ಯ: ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಹೊಸ ಕೊಡುಗೆಗಳೇನೋ ಸಿಕ್ಕಿದೆ. ಆದರೆ, ಜಿಲ್ಲೆಯ ಜನರ ಹಿಂದಿನ ನಿರೀಕ್ಷೆಗಳಲ್ಲಿ ಕಾರ್ಯಗತವಾಗದೆ ನನೆಗು ದಿಗೆ ಬಿದ್ದಿರುವ ಹಲವಾರು ಯೋಜನೆಗಳಿವೆ. ಅವುಗಳು ಯಾವನ್ನೂ ಈ ಬಜೆಟ್‌ನಲ್ಲಿ ನೆನೆಪಿಸಿಕೊಂಡಿಲ್ಲ.

Advertisement

ಬಿಡುಗಡೆಯಾಗಿಲ್ಲ 50 ಕೋಟಿ ರೂ.: ಕಳೆದ ಬಜೆಟ್‌ ನಲ್ಲಿ ಮಂಡ್ಯ ನಗರದ ಅಭಿವೃದ್ಧಿಗೆ 50 ಕೋಟಿ ರೂ. ಹಣ ಘೋಷಣೆಯಾಗಿತ್ತು. ಆ ಹಣ ಇದುವರೆಗೂ ಬಿಡುಗಡೆಯಾಗಿಲ್ಲ. ನಗರದ ಚಿತ್ರಣವೂ ಬದಲಾಗಿಲ್ಲ. ನಗರದ ಪ್ರಮುಖ ರಸ್ತೆಗಳೆಲ್ಲವೂ ಕುಲಗೆಟ್ಟು
ಹಾಳಾಗಿವೆ. ಯಾವೊಂದು ರಸ್ತೆಗಳೂ ಉತ್ತಮ ಸ್ಥಿತಿಯ ಲ್ಲಿಲ್ಲದೆ ತಾಲೂಕು ರಸ್ತೆಗಳಿಗಿಂತಲೂ ದುಸ್ಥಿತಿಯಲ್ಲಿವೆ.

ತರಕಾರಿ ಮಾರುಕಟ್ಟೆಗೆ ಹಣವಿಲ್ಲ: ಮಂಡ್ಯದಲ್ಲಿ ಹೊಸ ತರಕಾರಿ ಮಾರುಕಟ್ಟೆ ನಿರ್ಮಾಣವಾಗಬೇಕು ಎನ್ನುವುದು ನಗರದ ಜನರ ದಶಕಗಳ ಕನಸು. ಈ ಬಾರಿಯ ಬಜೆಟ್‌ನಲ್ಲೂ ಅದು ನನಸಾಗಿಲ್ಲ. ಹಾಳಾಗಿರುವ ಮಾರುಕಟ್ಟೆ ಯಲ್ಲೇ ಇಂದಿಗೂ ತರಕಾರಿ
ವಹಿವಾಟು ನಡೆಯು ತ್ತಿದೆ. ಸುಸಜ್ಜಿತವಾದ ಮಾರುಕಟ್ಟೆಯನ್ನು ನಿರ್ಮಾಣ ಮಾಡುವ ಕನಸು ಕನಸಾಗಿಯೇ ಉಳಿದಿದೆ.

ವರ್ತುಲ ರಸ್ತೆ ಬಗ್ಗೆ ಚಕಾರವಿಲ್ಲ: ಬೆಂಗಳೂರು-  ಮೈಸೂರು ಹೆದ್ದಾರಿ ಹತ್ತು ಪಥದ ರಸ್ತೆಯಾಗಿ ಪರಿವರ್ತನೆಯಾಗುತ್ತಿದ್ದು, ಬೈಪಾಸ್‌ ರಸ್ತೆ ಅದೇ ಸಮಯದಲ್ಲಿ ನಿರ್ಮಾಣವಾಗುವುದು ನಿಶ್ಚಿತವಾಗಿದೆ. ಆದರೆ, ನಗರದ ಜನರ ಬಹುದಿನಗಳ ಬೇಡಿಕೆ ವರ್ತುಲ (ರಿಂಗ್‌) ರಸ್ತೆಯಾಗಿದೆ. ಈಗಾಗಲೇ ಹೆದ್ದಾರಿಯ ಎರಡೂ ಬದಿಯಲ್ಲಿ ರಸ್ತೆಯ ನೀಲಿ ನಕಾಶೆ ಸಿನನೆಗುದಿಗೆ ಬಿದ್ದ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಇಲ್ಲವಾಗಿದೆ. ಬೈಪಾಸ್‌ ಬೆಂಗಳೂರಿನಿಂದ ಬರುವಾಗ ಬಲಭಾಗದಿಂದ ನಿರ್ಮಾಣವಾಗಲಿದೆ. ಅದೇ ರೀತಿ 2006ರಲ್ಲೇ
ಎಡಭಾಗದಿಂದಲೂ ರಸ್ತೆಗೆ ನೀಲಿ ನಕಾಶೆ ಸಿದ್ಧಪಡಿಸಿದ್ದು ಅದನ್ನೂ ಸೇರಿಸಿಕೊಂಡು ವರ್ತುಲ ರಸ್ತೆಗೆ ಚಾಲನೆ ನೀಡಿದ್ದರೆ ನಗರದ ಬೆಳವಣಿಗೆಗೆ ಅನುಕೂಲವಾಗುತ್ತಿತ್ತು ಎಂಬುದು ಜಿಲ್ಲೆಯ ಜನರ ಆಶಯವಾಗಿದೆ.

ಹಳ್ಳ ಹಿಡಿದ ಉಪನಗರ ಯೋಜನೆ 
ಮಂಡ್ಯ ಹೊರವಲಯದಲ್ಲಿರುವ ತೂಬಿನ ಕೆರೆ ಬಳಿ ಸಿದ್ಧರಾಮಯ್ಯ ಅಧಿಕಾರವಧಿಯ ಆರಂಭದಲ್ಲಿ ಉಪ ನಗರ ನಿರ್ಮಾಣ ಮಾಡುವುದಾಗಿ ಘೋಷಣೆ ಯಾಗಿದ್ದೆಷ್ಟು ಅಷ್ಟೇ. ಅಲ್ಲಿಂದ ಯೋಜನೆ ಮುಂದು ವರಿಯಲೇ ಇಲ್ಲ. ಭೂ ಪರಿಹಾರ ನೀಡುವ ವಿಚಾರ ದಲ್ಲಿ ರೈತರು ಹಾಗೂ ಸರ್ಕಾರದ ನಡುವೆ ಒಮ್ಮತ ಮೂಡದಿದ್ದರಿಂದ ಭೂಮಿ ಕೊಡಲು ಆ ಭಾಗದ ಜನರು ಒಪ್ಪಲಿಲ್ಲ. ಹೀಗಾಗಿ ಯೋಜನೆ ಸಾಕಾರ ಗೊಳ್ಳಲೂ ಇಲ್ಲ. ಮಂಡ್ಯ ನಗರದ ಬೆಳವಣಿಗೆಗೆ ಪೂರಕವಾಗಿ ತೂಬಿನಕೆರೆ ಬಳಿ ಉಪನಗರ ನಿರ್ಮಾಣ ವಾಗಿದ್ದರೆ ಜನ ವಸತಿಗೆ ಹೆಚ್ಚಿನ ಅನು ಕೂಲವಾಗಿ, ನಗರ ಬೆಳವಣಿಗೆ ಕಾಣಲು ಹೆಚ್ಚು ಸಹಕಾರಿಯಾ ಗುತ್ತಿತ್ತೆಂಬ ಪರಿಕಲ್ಪನೆ ಈ ಯೋಜನೆ ಹಿಂದಿತ್ತು.

Advertisement

ನೀರು ಸಂಗ್ರಹಣಾ ವ್ಯವಸ್ಥೆ ಇಲ್ಲ
ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಹೆಚ್ಚು ವರ್ಷ ಧಾರೆಯಾದ ಸಮಯದಲ್ಲಿ ಕೃಷ್ಣರಾಜಸಾಗರ ಭರ್ತಿಯಾಗಿ ಹೊರಬೀಳುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ. ಹಾಲಿ 14.5 ಟಿಎಂಸಿ ಹೆಚ್ಚುವರಿ ನೀರು ನಮಗೆ ದೊರಕಿದ್ದರೂ ಅದರಲ್ಲಿ ದೊರಕುವ ನೀರನ್ನೂ ಸಂರಕ್ಷಣೆ ಮಾಡುವ ಆಲೋಚನೆಗಳನ್ನು ನಡೆಸಿಲ್ಲ. ಇದಕ್ಕಾಗಿ ಕೆರೆಯಿಂದ ಕೆರೆಗೆ ನೀರು ಎಂಬ ಯೋಜನೆ ಜಾರಿಗೆ ತರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಅನೇಕ ಬಾರಿ ಪ್ರಸ್ತಾಪಿಸಿ ದ್ದರು. ನಾಲಾ ಸಂಪರ್ಕ ವ್ಯವಸ್ಥೆಯಿಂದ ಪೈಪ್‌ಲೈನ್‌ ಅಳವಡಿಸಿ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಆದರೆ, ಈ ಬಗ್ಗೆ ಬಜೆಟ್‌ನಲ್ಲಿ ಎಲ್ಲಿಯೂ ಚಕಾರ ಎತ್ತಿದಂತೆ ಕಂಡು ಬರುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next