Advertisement

ನಮ್ಮ ನಡುವೆ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ: ನಳಿನ್ ಕುಮಾರ್ ಕಟೀಲ್

03:15 PM Sep 07, 2019 | Team Udayavani |

ಹುಬ್ಬಳ್ಳಿ: ನಮ್ಮಲ್ಲಿ ಯಾವುದೇ ಅಸಮಧಾನವಿಲ್ಲ. ನಿನ್ನೆ ನಡೆದ ಕೋರ್ ಕಮಿಟಿ ಸಭೆಗೆ ಆರ್. ಅಶೋಕ, ಲಿಂಬಾವಳಿ ಅವರು ಇತರ ಕಾರ್ಯಗಳಿಂದ ಬಂದಿಲ್ಲ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಹೇಳಿದರು.

Advertisement

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳಿಲ್ಲ ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು. ಸಿದ್ದರಾಮಯ್ಯ ಅಧಿಕಾರಲ್ಲಿದ್ದಾಗ ನಿದ್ರೆ ಮಾಡುತ್ತಿದ್ದರು, ಇವಾಗ ಕನಸು ಕಾಣುತ್ತಿದ್ದಾರೆ. ಹೀಗಾಗಿ ಅವರು ಮಧ್ಯಂತರ ಚುನಾವಣೆ ಬಗ್ಗೆ ಹೇಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗಲೇ ಕನಸು ನನಸಾಗಲ್ಲಿಲ್ಲ. ಈಗಲೂ ಅವರ ಕನಸು ನನಸಾಗುವುದಿಲ್ಲ ಎಂದು ಹೇಳಿದರು.

ಡಿಕೆಶಿ ಬಂಧನ ಮೂಲಕ ಬಿಜೆಪಿ ದ್ವೇಷ ರಾಜಕಾರಣ ಆರೋಪಕ್ಕೆ ತಿರುಗೇಟು ನೀಡಿದ ನಳಿನ್, ಸಿಬಿಐ, ಐಟಿ, ಇಡಿ, ಬಿಜೆಪಿ ನಿರ್ಮಾಣ ಮಾಡಿದ ಸಂಸ್ಥೆ ಗಳಲ್ಲ. ಡಿಕೆಶಿ ಅವರ ಮೇಲೆ ಆರೋಪವಿದೆ ಕಾನೂನು ಹೋರಾಟ ಮಾಡಿ ಹೊರಬರಲಿ. ಮೋದಿ, ಅಮಿತ್ ಶಾ ಸಹಿತ ಆರೋಪ ಬಂದಾಗ ಕಾನೂನು ಹೋರಾಟ ಮಾಡಿ ಬಂದಿದ್ದಾರೆ ಎಂದರು.

ಹಿಂದಿನವರು ಮಾಡಿದ್ದು ದ್ವೇಷ ರಾಜಕಾರಣವೇ…? ದಕ್ಷಿಣ ಕನ್ನಡ ಡಿಸಿ ಸಸಿಕಾಂತ್ ಸೆಂಥಿಲ್ ವೈಯಕ್ತಿಕ ವಿಚಾರಕ್ಕೆ ರಾಜೀನಾಮೆ ನೀಡಿದ್ದಾರೆ‌. ಯಾವುದೇ ಉಹಾಪೋಹಗಳು ಬೇಡ. ಈ ಹಿಂದೆ ಅಣ್ಣಾಮಲೈ ಕೂಡಾ ರಾಜೀನಾಮೆ ನೀಡಿದ್ದರು ಈಗ ರಾಜಕೀಯ ಮಾತನಾಡುತ್ತಿದ್ದಾರೆ. ಇವರು ಮುಂದೆ ಏನ್ ಮಾಡ್ತಾರೇ ನೋಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next