Advertisement

ಈ ಧೋನಿ ಆಡದ ಆಟಗಳೇ ಇಲ್ಲ

07:33 PM Nov 08, 2019 | Lakshmi GovindaRaju |

ಮೇಕೆ ತಿನ್ನದೇ ಸೊಪ್ಪಿಲ್ಲ, ಇವನು ತಿನ್ನದ ಮೇಕೆಯಿಲ್ಲ…ಹೀಗೊಂದು ಹಾಡಿನ ಸಾಲು ಕನ್ನಡದ ಜಾಕಿ ಸಿನಿಮಾದಲ್ಲಿ ಬರುತ್ತದೆ. ಇದು ನಾಯಕ ಪುನೀತ್‌ರನ್ನು ಪರಿಚಯಿಸುವ ಹಾಡು. ಬಹುಶಃ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಧೋನಿಯ ಕುರಿತೂ ಹೀಗೊಂದು ಮಾತು ಬಳಕೆ ಮಾಡಬಹುದು, ಆದರೆ ಸ್ವಲ್ಪ ಭಿನ್ನವಾಗಿ. ಮೇಕೆ ತಿನ್ನದ ಸೊಪ್ಪಿಲ್ಲ, ಧೋನಿ ಆಡದ ಆಟವಿಲ್ಲ…! ಹೌದು ಈ ಧೋನಿ ಫ‌ುಟ್‌ಬಾಲ್‌, ವಾಲಿಬಾಲ್‌ ಆಡುತ್ತಾರೆ, ಬ್ಯಾಡ್ಮಿಂಟನ್‌, ಟೆನಿಸನ್ನೂ ಆಡುತ್ತಾರೆ. ಮಾತ್ರವಲ್ಲ ಕಾರ್‌, ಬೈಕ್‌ ಓಡಿಸುವುದರಲ್ಲೂ ಬಹಳ ಪ್ರೀತಿ. ಅಂತಹ ಧೋನಿ ಇತ್ತೀಚೆಗೆ ರಾಂಚಿಯಲ್ಲಿ ಟೆನಿಸ್‌ ಆಡಿದರು. ಅದು ಎಲ್ಲಕಡೆ ದೊಡ್ಡ ಸುದ್ದಿಯಾಯಿತು. ಧೋನಿ ಆಡುತ್ತಿದ್ದಾರೆಂದು ಮತ್ತೆ ಕ್ರಿಕೆಟ್‌ಗೆ ಮರಳಬಹುದೆನ್ನುವುದು ಅಭಿಮಾನಿಗಳ ಸಂತಸಕ್ಕೆ ಕಾರಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next