Advertisement
1,783 ಕುಟುಂಬಮುಂಡ್ಕೂರು ಗ್ರಾಮದ ಈ ಕೇಂದ್ರದಲ್ಲಿ ಹಿಂದಿನಿಂದಲೂ ವೈದ್ಯಕೀಯ ಸಿಬಂದಿಯ ಸೇವೆ ಉತ್ತಮವಾಗಿದ್ದರಿಂದ ಪಂಚಾಯತ್ ವ್ಯಾಪ್ತಿಯ 1,783 ಕುಟುಂಬಗಳು ಅವಕಾಶ
ಸದುಪಯೋಗಪಡಿಸಿಕೊಳ್ಳುತ್ತಿದ್ದವು. ಇಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯಾಧಿಕಾರಿ ಡಾ| ಫೌಜಿಯಾ ಹೆಚ್ಚಿನ ವ್ಯಾಸಂಗಕ್ಕಾಗಿ ತೆರಳಿದ್ದರಿಂದ ಇಲ್ಲಿನ ವೈದ್ಯಾಧಿಕಾರಿಗಳ ಹುದ್ದೆ ಖಾಲಿಯಾಗಿದೆ .
ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸತೀಶ್ ಇದೀಗ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಭಾರ ವೈದ್ಯಾಧಿಕಾರಿಯಾಗಿ ಹೆಚ್ಚುವರಿ ಸೇವೆ ಸಲ್ಲಿಸುತ್ತಿದ್ದಾರೆ. ನಿಟ್ಟೆಯ ವೈದ್ಯಾಧಿಕಾರಿ ಡಾ| ಗಿರೀಶ್ ನಿಯೋಜನೆಯಲ್ಲಿ ಸಚ್ಚೇರಿಪೇಟೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳ್ಮಣ್ ಕೇಂದ್ರವೂ ಬಹಳಷ್ಟು ವಿಸ್ತಾರವಾದ ವ್ಯಾಪ್ತಿ ಹೊಂದಿರು ವುದರಿಂದ ಅಲ್ಲೂ ಸೇವೆ ಸಲ್ಲಿಸುವುದು ಅನಿವಾರ್ಯವಾಗಿದೆ. ಗೊಂದಲ
ಇದೀಗ ಕೋವಿಡ್ 19 ಬಗ್ಗೆ ಜನರಲ್ಲಿ ಭಾರೀ ಆತಂಕವೂ ಇರುವುದರಿಂದ ಇತರ ಕಾಯಿಲೆಗಳ ಬಗ್ಗೆಯೂ ಮಾಹಿತಿ ನೀಡಿ ಧೈರ್ಯ ತುಂಬಲು ಖಾಯಂ ವೈದ್ಯಾಧಿಕಾರಿಗಳ ಅಗತ್ಯ ಇದೆ. ಇಂತಹ ಸಂದಿಗ್ಧ ಕಾಲದಲ್ಲಿ ವೈದ್ಯಾಧಿಕಾರಿಗಳು ಇಲ್ಲದಿರುವುದೂ ಜನರಿಗೆ ಆತಂಕ ಮೂಡಿಸಿದೆ. ಸದ್ಯ ಇಲ್ಲಿನ ಉಳಿದ ಸಿಬಂದಿ ಜನರಿಗೆ ಉತ್ತಮ ಸೇವೆ ನೀಡುವಲ್ಲಿ ನಿರತರಾಗಿದ್ದಾರೆ.
Related Articles
Advertisement
ಸಕಾರಾತ್ಮಕ ಸ್ಪಂದನೆ ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಕೂಡಲೇ ಖಾಯಂ ವೈದ್ಯಾಧಿಕಾರಿಗಳ ನೇಮಕಕ್ಕೆ ಎಲ್ಲ ಸಹಕಾರ ನೀಡಲಾಗುವುದು.
-ವಿ.ಸುನಿಲ್ ಕುಮಾರ್, ಶಾಸಕರು, ಕಾರ್ಕಳ ಇಲಾಖೆಗೆ ಪತ್ರ
ಈ ಬಗ್ಗೆ ಇಲಾಖೆಗೆ ಪತ್ರ ಬರೆಯಲಾಗುವುದು. ಬೆಳ್ಮಣ್‌ನ ವೈದ್ಯಾಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಉಳಿದ ಸಿಬಂದಿ ಸೇವೆ ಸಕಾಲಿಕವಾಗಿದೆ.
-ಶುಭಾ ಪಿ.ಶೆಟ್ಟಿ, ಅಧ್ಯಕ್ಷೆ ,
ಮುಂಡ್ಕೂರು ಗ್ರಾಮ ಪಂಚಾಯತ್ ಇನ್ನೂ ಹಲವು ಬೇಡಿಕೆಗಳು
4 ಉಪ ಕೇಂದ್ರಗಳಿರುವ ಈ ಆಸ್ಪತ್ರೆಯ ಮುಂಡ್ಕೂರು ಹಾಗೂ ಸಚ್ಚೇರಿಪೇಟೆ ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡ ಇದೆ. 4 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿ ಇದ್ದು ಸದ್ಯಕ್ಕೆ 2 ಮಂದಿಯನ್ನಾದರೂ ನೀಡಿದರೆ ಉತ್ತಮ ಎನ್ನುವುದು ಜನರ ಅಹವಾಲು. ನೀರಿನ ವ್ಯವಸ್ಥೆಗೆ ಬೋರ್‌ವೆಲ್, ಸಿಬಂದಿಗೆ ವಸತಿಗೃಹದ ಆವಶ್ಯಕತೆಯಿದೆ.