Advertisement

ನವವರ್ಷದಲ್ಲಿವೆ ಹಲವು ಖಗೋಳ ವಿಸ್ಮಯಗಳು

12:30 AM Jan 05, 2019 | |

ಆಕಾಶ ಆಸಕ್ತರಿಗೆ ತುಂಬಾ ಆಶಾದಾಯಕವಾದ ವರ್ಷ. ಪ್ರತೀ ವರ್ಷದಂತೆ ಗ್ರಹಣಗಳು, ಉಲ್ಕಾಪಾತಗಳು, ಸೂಪರ್‌ ಮೂನ್‌ಗಳು, ಮೈಕ್ರೋ ಮೂನ್‌ಗಳು, ಗ್ರಹಣಗಳು, ನಕ್ಷತ್ರಗಳು, ಅವುಗಳ ಸೊಬಗು ಭವ್ಯವಾಗಿದ್ದರೂ ಈ ವರ್ಷ ಒಂದು ವಿಶೇಷ . 

Advertisement

ಗ್ರಹಣ ಕಾಲ: ಡಿಸೆಂಬರ್‌ 26ರಂದು ದಕ್ಷಿಣ ಭಾರತೀಯರಿಗೆ ಬಲು ಅಪರೂಪದ ಕಂಕಣ ಸೂರ್ಯ ಗ್ರಹಣ. ಈ ಹಿಂದೆ 1980ರಲ್ಲಿ ನಮಗೆ ನೋಡುವ ಭಾಗ್ಯ ಲಭಿಸಿತ್ತು. ಇನ್ನು ಮುಂದೆ ದಕ್ಷಿಣ ಭಾರತೀಯರಿಗೆ ಖಗ್ರಾಸ ಸೂರ್ಯ ಗ್ರಹಣ 2064ಕ್ಕೆ. ವರ್ಷದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣ ಸೇರಿ ಸರಿಸುಮಾರು 4 ರಿಂದ 7 ಗ್ರಹಣಗಳು ಸಂಭವಿಸುತ್ತವೆ. 2019 ರಲ್ಲಿ 5 ಗ್ರಹಣಗಳು ಸಂಭವಿಸಲಿವೆಯಾದರೂ ಭಾರತಕ್ಕೆ ಎರಡೇ. ಜುಲೈ 16ರಂದು ಖಂಡಗ್ರಾಸ ಚಂದ್ರ ಗ್ರಹಣ, ಡಿಸೆಂಬರ್‌ 6ರಂದು ಕಂಕಣ ಸೂರ್ಯ ಗ್ರಹಣ.  ಜನವರಿ 6ರ ಪಾರ್ಶ್ವ ಸೂರ್ಯಗ್ರಹಣ, ಜನವರಿ 21ರ ಖಗ್ರಾಸ ಚಂದ್ರ ಗ್ರಹಣ ಜೂನ್‌ 2ರ ಖಗ್ರಾಸ ಸೂರ್ಯಗ್ರಹಣ ಭಾರತಕ್ಕಿಲ್ಲ.  2020ರಿಂದ 2064ರವರೆಗೆ 6 ಪಾರ್ಶ್ವ ಸೂರ್ಯಗ್ರಹಣ ಭಾರತಕ್ಕಿದ್ದರೂ ಖಗ್ರಾಸ ಸೂರ್ಯ ಗ್ರಹಣ 2064ಕ್ಕೆ 
ಮಾತ್ರ. ಹಾಗಾಗಿ ಈ ವರ್ಷದ ಕಂಕಣ ಸೂರ್ಯ ಗ್ರಹಣ  ದಕ್ಷಿಣ ಭಾರತದ ವಿಜ್ಞಾನಿಗಳಿಗೆ, ಖಗೋಳ ಆಸಕ್ತರಿಗೆ ವಿಶೇಷ ಅವಕಾಶ. 

 ಸೂಪರ್‌ ಮೂನ್‌ ಮತ್ತು ಮೈಕ್ರೋ ಮೂನ್‌ 
ಪ್ರತೀ ತಿಂಗಳಲ್ಲೂ ಹುಣ್ಣಿಮೆ, ಅಮಾವಾಸ್ಯೆ ಸಂಭವಿಸುತ್ತದೆ ಆದರೂ ವರ್ಷದಲ್ಲಿ ಕೆಲ ಹುಣ್ಣಿಮೆ ಭವ್ಯವಾಗಿರುತ್ತದೆ. ತನ್ನ ದೀರ್ಘ‌ವೃತ್ತದ ಅಕ್ಷದಲ್ಲಿ ಭೂಮಿಗೆ ಸುತ್ತುವ ಚಂದ್ರ ಕೆಲ ಹುಣ್ಣಿಮೆಗಳಲ್ಲಿ ಭೂಮಿಗೆ ಸಮೀಪ ಬರುವುದಿದೆ. ಆಗ ಸುಮಾರು 14 ಅಂಶ ದೊಡ್ಡದಾಗಿ ಕಂಡು 24 ಅಂಶ ಹೆಚ್ಚಿನ ಪ್ರಭೆಯಲ್ಲಿ ಗೋಚರಿಸುತ್ತಾನೆ. ಈ ಹುಣ್ಣಿಮೆಗಳಿಗೆ ಸೂಪರ್‌ ಮೂನ್‌ಗಳೆಂದು ಕರೆಯುವರು. ಈ ವರ್ಷ ಜ 21ರಂದು (3,57,715 ಕಿ.ಮೀ.), 

ಫೆ .19 ರಂದು (3,56,846 ಕಿ. ಮೀ.) ಹಾಗೂ ಮಾ. 21ರಂದು (3,60, 772 ಕಿ. ಮೀ.) ಸೂಪರ್‌ ಮೂನ್‌.
ಭೂಮಿ ಮತ್ತು ಚಂದ್ರರ ನಡುವಿನ ಸರಾಸರಿ ದೂರ 3,84,00 ಕಿ.ಮೀ. ಅದೇ ದೀರ್ಘ‌ ವೃತ್ತದಲ್ಲಿ ಕೆಲವೊಮ್ಮೆ ದೂರದಲ್ಲಿದ್ದಾಗ ಹುಣ್ಣಿಮೆಯಾದರೆ ಹುಣ್ಣಿಮೆ ಚಂದ್ರ ಮಾಮೂಲಿಗಿಂತ ಚಿಕ್ಕದಾಗಿ ಕಾಣುತ್ತಾನೆ. ಈ ಹುಣ್ಣಿಮೆಗೆ ಮೈಕ್ರೋ ಮೂನ್‌ ಎನ್ನುವರು. ಈ ವರ್ಷ ಸೆ. 14ರ ಹುಣ್ಣಿಮೆ ಮೈಕ್ರೋ ಮೂನ್‌ ( 4,06,377ಕಿ.ಮೀ. ).

 ಉಲ್ಕಾಪಾತ: ವರ್ಷದಲ್ಲಿ ಸುಮಾರು 12ಕ್ಕಿಂತ ಹೆಚ್ಚು ಪ್ರಮುಖ ಉಲ್ಕಾಪಾತಗಳಾದರೂ, ಅವುಗಳ ಸುಂದರ ವೀಕ್ಷಣೆಗೆ ಚಂದ್ರನಿಲ್ಲದ ಆಕಾಶ ಬೇಕು. ಈ ವರ್ಷದ ಜನವರಿ 3-4 ರಂದು ಬೂಟೀಸ್‌ನಿಂದ ಕಾಣುವ ಕ್ವಾಡರ್ನಟಿಡ್‌ ಉಲ್ಕಾಪಾತ ಹಾಗೂ ಮೇ 6- 7ರ ಕುಂಭ ರಾಶಿಯಿಂದ ಕಾಣುವ ಈಟಾ ಅಕ್ವೇರಿಯಸ್‌ ಉಲ್ಕಾಪಾತ, ಮಧ್ಯರಾತ್ರಿಯ ನಂತರ ನೋಡಿ ಖುಷಿ ಪಡಬಹುದು. 

Advertisement

 ಗ್ರಹಗಳು: ಬರಿಗಣ್ಣಿಗೆ ಕಾಣುವ ಬುಧ, ಶುಕ್ರ ,ಮಂಗಳ, ಗುರು ಹಾಗೂ ಶನಿ ಗ್ರಹಗಳು ಸುಂದರವಾಗಿ ಕಾಣುವುದು ಕೆಲ ಸಮಯ ಮಾತ್ರ. 

ಬುಧ ಗ್ರಹ: ಇದು ಕಾಣಸಿಗುವುದೇ ಬಲು ಅಪರೂಪ. ವರ್ಷದಲ್ಲಿ ಮೂರು ಬಾರಿ ಸೂರ್ಯಾಸ್ತವಾದೊಡನೆ ಪಶ್ಚಿಮ ಆಕಾಶದಲ್ಲಿ ಹಾಗೂ ಮೂರುಬಾರಿ ಸೂರ್ಯೋದಯಕ್ಕಿಂತ ಮುಂಚೆ ಮೂರುಬಾರಿ ಮಾತ್ರ. ಅದೂ ಬರೀ 45 ನಿಮಿಷಗಳು. ಈ ವರ್ಷ ಸಂಜೆ ಆಕಾಶದಲ್ಲಿ ಫೆ. 27 ( 18 ಡಿಗ್ರಿ ), ಜೂನ್‌ 23 ರಂದು 25.5 ಡಿಗ್ರಿ) ಹಾಗೂ ಅ. 20ರಂದು ( 24.6 ಡಿಗ್ರಿ) ಅಂತೆಯೇ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮುನ್ನ ಎ. 11 (27.7 ಡಿಗ್ರಿ) ಆ. 9 ( 19 ಡಿಗ್ರಿ)ಮತ್ತು ನ. 28. 

ಶುಕ್ರ ಗ್ರಹ: ವರ್ಷದಲ್ಲಿ ಸುಮಾರು 6 ತಿಂಗಳು ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಹಾಗೂ 6 ತಿಂಗಳು ಪಶ್ಚಿಮ ಆಕಾಶದಲ್ಲಿ ಸಂಜೆ ಆಕಾಶದಲ್ಲಿ ಹೊಳೆವ ಸುಂದರ ಗ್ರಹ ಶುಕ್ರ. ಈ ವರ್ಷ ಜು.23ರ ವರೆಗೆ ಬೆಳಗ್ಗೆ ಪೂರ್ವ ಆಕಾಶದಲ್ಲಿ ಹಾಗೂ ಸೆ. 18ರಿಂದ ಪಶ್ಚಿಮ ಆಕಾಶದಲ್ಲಿ (ಸಂಜೆ ) ಕಾಣಿಸಲಿ¨ªಾನೆ. ಜ.6ರಂದು ಪೂರ್ವ ಆಕಾಶದಲ್ಲಿ ಅತೀ ಎತ್ತರ 47 ಡಿಗ್ರಿ. 

ಮಂಗಳ ಗ್ರಹ: ಈ ವರ್ಷದ ಜೂನ್‌ವರೆಗೂ ಸಂಜೆ ಆಕಾಶದಲ್ಲಿ ನಡು ನೆತ್ತಿಯಿಂದ ಪೂರ್ವಕ್ಕೆ ಕಾಣಿಸುವ ಮಂಗಳ ಆಗಸ್ಟ್‌ನಿಂದ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣುವನು. 

 ಗುರು ಗ್ರಹ: ವರ್ಷದಲ್ಲಿ ಒಂದು ತಿಂಗಳು ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಇಡೀ ರಾತ್ರಿ ಕಾಣುವದು ಜೂನ್‌ನಲ್ಲಿ. ಆಗ ದೂರದರ್ಶಕದಲ್ಲಿ ಗುರು ಗ್ರಹದ ಮೇಲ್ಮೆ„ ಹಾಗೂ ಅದರ ಚಂದ್ರರು ಅತಿ ಸೊಬಗಿನಿಂದ ಕಾಣಲಿವೆ. ಅಲ್ಲಿಯವರೆಗೆ ಬೆಳಗಿನ ಆಕಾಶದಲ್ಲಿ ಕಂಡರೆ ಜೂನ್‌ ನಂತರ ಸಂಜೆ ಆಕಾಶದಲ್ಲಿ ಪೂರ್ವದಲ್ಲಿ ಕಾಣುವನು.

 ಶನಿ ಗ್ರಹ: ವರ್ಷದಲ್ಲಿ ಒಂದು ತಿಂಗಳು ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಇಡೀ ರಾತ್ರಿ ಕಾಣುವುದು ಜುಲೈಯಲ್ಲಿ. ಆಗ ಶನಿಯ ಬಳೆಗಳು ದೂರದರ್ಶಕದಲ್ಲಿ ಅತಿ ಸುಂದರವಾಗಿ ಕಾಣಲಿವೆ. ಅಲ್ಲಿಯವರೆಗೆ ಬೆಳಗಿನ ಆಕಾಶದಲ್ಲಿ ಪೂರ್ವದಲ್ಲಿ ಕಂಡರೆ, ಜುಲೈ ನಂತರ ಸಂಜೆ ಪೂರ್ವ ಆಕಾಶದಲ್ಲಿ ಕಾಣುವನು. 

ಇನ್ನು ಅಮಾವಾಸ್ಯೆಯ ಸಮೀಪ ನಕ್ಷತ್ರ ಪುಂಜಗಳು, ಗುತ್ಛಗಳು, ಆಕಾಶಗಂಗೆಗಳನ್ನು ನೋಡಲು ತುಂಬಾ ಅವಕಾಶ. ಚಂದ್ರನಿಲ್ಲದ ಆಕಾಶದ ರಾತ್ರಿ ಇವೆಲ್ಲವುಗಳ ಸೊಬಗನ್ನು ಸವಿಯಬಹುದು.

ಡಾ| ಎ.ಪಿ.ಭಟ್‌  

Advertisement

Udayavani is now on Telegram. Click here to join our channel and stay updated with the latest news.

Next