Advertisement
ಅ.13ರಂದು ಕರ್ನಾಟಕ ಲೋಕಾಯುಕ್ತ 43 ಶಾಸಕರು ಹಾಗೂ 26 ವಿಧಾನ ಪರಿಷತ್ ಸದಸ್ಯರಿಗೆ 10 ದಿನಗಳೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿತ್ತು. ಇಷ್ಟಾದರೂ 24 ಶಾಸಕರು ಹಾಗೂ 12 ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ನೀಡಿಲ್ಲ.
Related Articles
Advertisement
ವಿಧಾನ ಪರಿಷತ್ ಸದಸ್ಯರ ಪೈಕಿ ಕಾಂಗ್ರೆಸ್‌ನ 6 ಸದಸ್ಯರು, ಜೆಡಿಎಸ್ ಮತ್ತು ಬಿಜೆಪಿಯ ತಲಾ ಮೂವರ ಸಹಿತ ಒಟ್ಟು 12 ಸದಸ್ಯರು ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ ಎಂದು ದಾಖಲೆಗಳು ಸ್ಪಷ್ಟಪಡಿಸಿವೆ. ಆಯನೂರು ಮಂಜುನಾಥ್, ಅಲ್ಲಂ ವೀರಭದ್ರಪ್ಪ, ತೇಜಸ್ವಿನಿ ಗೌಡ, ಕೆ.ಟಿ. ಶ್ರೀಕಂಠೇಗೌಡ, ಕಾಂತರಾಜು, ಎನ್.ಅಪ್ಪಾಜಿಗೌಡ, ಕೆ.ಪಿ. ನಂಜುಂಡಿ, ನಜೀರ್ ಅಹ್ಮದ್ , ಡಿ.ಯು.ಮಲ್ಲಿಕಾರ್ಜುನ, ಎಂ.ನಾರಾಯಣಸ್ವಾಮಿ, ಪಿ.ಆರ್. ರಮೇಶ್, ಸಿ.ಎಂ. ಇಬ್ರಾಹಿಂ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಕ್ರಮ ಕೈಗೊಳ್ಳಲು ಅವಕಾಶವಿದೆಪ್ರತಿವರ್ಷ ರಾಜ್ಯದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಲೋಕಾಯುಕ್ತ ಕಚೇರಿಗೆ ಸಲ್ಲಿಸಬೇಕು. ಆದರೆ ಇತ್ತೀಚೆಗೆ ಹಲವರು ಆಸ್ತಿ ವಿವರ ಗಳನ್ನು ಸಲ್ಲಿಸುತ್ತಿಲ್ಲ. ಈ ರೀತಿ ಕಾನೂನನ್ನು ಉಲ್ಲಂ ಸುವ ಜನ ಪ್ರತಿನಿಧಿ ಗಳ ವಿರುದ್ಧ ಕಾನೂನು ಕ್ರಮ ಜರಗಿಸುವ ಅವಕಾಶ ಲೋಕಾಯುಕ್ತ ಕ್ಕಿದೆ. ನನ್ನ ಅವಧಿಯಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 176ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದಲ್ಲಿ ಐಪಿಸಿ ಸೆಕ್ಷನ್ 177ರ ಅನ್ವಯ ಕ್ರಮ ಜರಗಿಸಬಹುದು.
– ನ್ಯಾ| ಸಂತೋಷ್ ಹೆಗ್ಡೆ , ನಿವೃತ್ತ ಲೋಕಾಯುಕ್ತ