Advertisement

ಬಂದರಿನಲ್ಲೇ ಇದೆ 3 ಲಕ್ಷ ಟನ್‌ ಮಲೇಶಿಯಾ ಮರಳು

12:35 AM Dec 30, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮರಳು ಕೊರತೆ ನೀಗಿಸಲು ಮಲೇಶಿಯಾದಿಂದ ಆಮದು ಮಾಡಿಕೊಂಡ 3 ಲಕ್ಷ ಟನ್‌ ಮರಳು ಎರಡು ಮಂಗಳೂರು ಸೇರಿ ಎರಡು ಬಂದರುಗಳಲ್ಲೇ ಉಳಿದೆ ಎಂದು  ಗಣಿ ಮತ್ತು ಭೂ ವಿಜ್ಞಾನ  ಇಲಾಖೆ  ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಠಾರಿಯಾ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು,  ಸ್ಥಳೀಯವಾಗಿ ದೊರೆಯುವ ಎಂ.ಸ್ಯಾಂಡ್‌ ಪ್ರತಿ ಟನ್‌ಗೆ 800 ರಿಂದ 1000 ರೂ.ಗೆ ಸಿಗುತ್ತಿದೆ. ಹೀಗಾಗಿ ಮಲೇಶಿಯಾ ಮರಳು ಟನ್‌ಗೆ 2 ಸಾವಿರ ರೂ. ನೀಡಿ ಖರೀದಿಸಲು ಜನರು ಮುಂದಾಗುತ್ತಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಮರಳಿನ ಬೇಡಿಕೆ 3.30 ಕೋಟಿ ಟನ್‌ ಇದ್ದು ನದಿಗಳಿಂದ 40 ಲಕ್ಷ ಟನ್‌, ಎಂ. ಸ್ಯಾಂಡ್‌ 2.30 ಕೋಟಿ ಟನ್‌ ಸಿಗುತ್ತಿದೆ. 30 ಲಕ್ಷ ಟನ್‌ ಮರಳು ಕೊರತೆ ಇದ್ದು ಬೆಂಗಳೂರಿಗೆ ತಮಿಳುನಾಡು, ಮಹಾರಾಷ್ಟ್ರದಿಂದ ಬರುತ್ತಿದೆ. ಬೇಡಿಕೆಯಷ್ಟು ಪೂರೈಕೆಯಾಗದ ಕಾರಣ ಸ್ವಲ್ಪ ಸಮಸ್ಯೆಯಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next