Advertisement
ರಾಜ್ಯದಲ್ಲಿ ಕೋವಿಡ್ 19 ಸೋಂಕು ದೃಢಪಟ್ಟವರ ಸಂಖ್ಯೆ 128 ಇದ್ದು, ಈ ಪೈಕಿ 19 ಸೋಂಕಿತರಿಗೆ ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲ. ಯಾರಿಂದ, ಎಲ್ಲಿ, ಯಾವಾಗ ಸೋಂಕು ಸೋಂಕು ತಗಲಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಇಂದಿಗೂ ಆರೋಗ್ಯ ಇಲಾಖೆ ಈ ಕುರಿತು ವೈದ್ಯಕೀಯ ತನಿಖೆ ನಡೆಸುತ್ತಲಿದೆ. ಇನ್ನು ಪ್ರಶ್ನೆಯಾಗಿಯೇ ಉಳಿದಿರುವ ಈ ಸೋಂಕಿತರು ಈಗಾಗಲೇ ಏಳು ಮಂದಿಗೆ ಸೋಂಕು ಹರಡಿಸಿದ್ದಾರೆ.
– ಮೈಸೂರಿನ ನಂಜನಗೂಡು ಔಷಧಿ ಕಾರ್ಖಾನೆ ಸಿಬಂದಿಯೊಬ್ಬರಲ್ಲಿ ಈ ವೈರಸ್ ಕಾಣಿಸಿಕೊಂಡಿತ್ತು. ಬಳಿಕ ಅದೇ ಕಂಪೆನಿಯ ಇತರ 14 ಸಿಬಂದಿಯಲ್ಲಿ ಸೋಂಕು ದೃಢಪಟ್ಟಿದೆ.
– ಮಾ. 10ರಂದು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯ ಹತ್ತು ತಿಂಗಳ ಮಗುವಿನಲ್ಲಿ ಸೋಂಕು ದೃಢಪಟ್ಟಿತು. ಈ ಮಗುವಿಗೆ ವಿದೇಶ ಪ್ರಯಾಣ ಮಾಡಿದ ಮತ್ತು ವಿದೇಶದಿಂದ ಬಂದ ವ್ಯಕ್ತಿಗಳ ನೇರ ಸಂಪರ್ಕವೇ ಇರಲಿಲ್ಲ.
– ಮಾ. 31ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಒಂದೇ ಕುಟುಂಬದ ಮೂರು ಮಂದಿಗೆ ಸೋಂಕು ದೃಢಪಟ್ಟಿತು. ಇವರು ದಾವಣಗೆರೆ ಮೂಲಕ ರೈಲಿನಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಹಿಂದಿರುಗಿದ ಕೆಲವು ದಿನಗಳಲ್ಲಿಯೇ ಸೋಂಕು ಕಾಣಿಸಿಕೊಂಡಿದೆ.
– ಮಾ. 31ರಂದು ಬೆಂಗಳೂರಿನ 62 ವರ್ಷದ ಮಹಿಳೆಗೆ ಸೋಂಕು ದೃಢ.
– ಎ. 2ರಂದು 24 ವರ್ಷದ ಬೆಂಗಳೂರು ಯುವಕನಲ್ಲಿ ಸೋಂಕು ದೃಢ.
– ಎ. 2ರಂದು ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಗಲ ಕೋಟೆಯ 75 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟದೆ.