Advertisement
ಶಾಸಕರ ಅನರ್ಹತೆ ಪ್ರಕರಣ ನ್ಯಾಯಾ ಲಯದಲ್ಲಿ ಇತ್ಯ ರ್ಥಗೊಂಡರೆ 12 ಮಂದಿಗೆ ಅವಕಾಶ ಕಲ್ಪಿಸಿದರೆ ಉಳಿ ಯುವುದು ನಾಲ್ಕು. ಆದರೆ, ಬಿಜೆಪಿಯಲ್ಲಿ ಎರಡು ಡಜನ್ ಆಕಾಂಕ್ಷಿಗಳಿದ್ದು, ಅಲ್ಲೂ ಅತೃಪ್ತ ಶಾಸಕರ ಅಸಮಾಧಾನ ಹೆಚ್ಚಾದರೆ ತಮ್ಮ ಆಸೆಗೆ ಕುತ್ತು ತರಬಹುದಾ ಎಂಬ ಸಣ್ಣ ಆತಂಕವೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
Related Articles
Advertisement
ಇವರ ಭವಿಷ್ಯ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ನಿಂತಿದೆ. ಈ ಜಿಲ್ಲೆಗಳಲ್ಲಿ ಬಿಜೆಪಿ ಯಿಂದ ಮೊದಲ ಹಂತದಲ್ಲಿ ಯಾರಿಗೂ ಅವಕಾಶ ಕೊಡದಿರುವುದು ಭರವಸೆ ಮೂಡಿಸಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರು ವವರ ಪೈಕಿ ನಾಲ್ಕೈದು ಮಂದಿ ಉಪ ಚುನಾವಣೆಗೆ ಸ್ಪರ್ಧೆ ಮಾಡುವುದು ಅನು ಮಾನ. ತಮ್ಮ ಕುಟುಂಬ ಸದಸ್ಯರನ್ನು ಕಣಕ್ಕಿಳಿ ಸಬಹುದು ಇಲ್ಲವೇ ವಿಧಾನಪರಿಷತ್ ಸದಸ್ಯ ಗಿರಿ ಪಡೆದು ಬಿಜೆಪಿಯವರಿಗೆ ಬಿಟ್ಟುಕೊಡ ಬಹುದು ಎಂದು ಹೇಳಲಾಗುತ್ತಿದೆ.
ಬಿಟ್ಟು ಕೊಡ್ತಾರಾ?: ಮತ್ತೂಂದು ಮೂಲದ ಪ್ರಕಾರ ಈಗ ಸಚಿವರಾಗಿರುವವರಲ್ಲಿ ಕೆಲ ವರು ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ಪ್ರಕರಣ ಇತ್ಯರ್ಥಗೊಂಡ ನಂತರ ಬೆಂಗ ಳೂರಿನ ಇಬ್ಬರು, ಬೆಳಗಾವಿಯ ಒಬ್ಬರು ಸೇರಿ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮನಗರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಅವಕಾಶ ಸಿಗಲಿದೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿಯೂ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವಾದರೂ ಅವರ ಆಸೆ ಈಡೇರಿಲ್ಲ.
ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಸಿಗುತ್ತಾ?: ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಸ್ವಲ್ಪ ಶಕ್ತಿ ಕಡಿಮೆಯಿದ್ದು, ಆ ಭಾಗದಲ್ಲಿ ಶಾಸಕರು ಇಲ್ಲದಿದ್ದರೂ ಪರಿಷತ್ ಸದಸ್ಯರಿಗೆ ಅವಕಾಶ ಕೊಡಬೇಕು. ಆ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಬೇಕು ಎಂಬ ಒತ್ತಾಯವೂ ಬಿಜೆಪಿಯಲ್ಲಿ ಕೇಳಿಬರುತ್ತಿದೆ. ಆದರೆ, ಅನರ್ಹತೆ ಪ್ರಕರಣ ಇತ್ಯರ್ಥಗೊಂಡ ನಂತರ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಹಳೇ ಮೈಸೂರು ಭಾಗಕ್ಕೆ ಮತ್ತಷ್ಟು ಪ್ರಾತಿನಿಧ್ಯ ಸಿಗುತ್ತಾ ಕಾದು ನೋಡಬೇಕಾಗಿದೆ.
* ಎಸ್. ಲಕ್ಷ್ಮಿನಾರಾಯಣ