Advertisement

ತತ್ವ ಸಿದ್ಧಾಂತದ ಚುನಾವಣೆ: ಅನಂತ

03:03 PM Apr 05, 2019 | pallavi |
ಹೊನ್ನಾವರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಮಾವಿನಕುರ್ವಾ ಜಿಪಂ ಕ್ಷೇತ್ರ ವ್ಯಾಪ್ತಿಯ ದಿಬ್ಬಣಗಲ್‌ನಲ್ಲಿ ಪ್ರಚಾರ ಸಭೆ ನಡೆಸಿದರು. ಈ ಸಾಲಿನ ಚುನಾವಣೆಯನ್ನು ಸಹ ನಾವು ತತ್ವ ಸಿದ್ಧಾಂತದ ಆಧಾರದಲ್ಲಿ ಸಂಘಟನಾ ಬಲದೊಂದಿಗೆ ಎದುರಿಸುತ್ತಿದ್ದೇವೆ. ಈ ಕ್ಷೇತ್ರದ ಸುಮಾರು 1900ಕ್ಕೂ ಹೆಚ್ಚು ಬೂತ್‌ ಗಳಲ್ಲಿ ನಮ್ಮ ಪಕ್ಷದ ಅಸ್ತಿತ್ವ ಇದೆ. ಇಂದು ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಂಡಿದೆ.
ನಾವು ಈ ಕ್ಷೇತ್ರವನ್ನು ಗೆಲ್ಲುವುದರ ಮೂಲಕ 2/3 ಬಹುಮತದೊಂದಿಗೆ ಸರಕಾರ ರಚಿಸಿ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿ ಆಗುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.
ದೇಶದ ಎಲ್ಲಾ ಜಾತಿಯ ವರ್ಗದ ಜನರನ್ನು ಒಟ್ಟು ಗೂಡಿಸಿಕೊಂಡು ಹೋಗಲಿಕ್ಕೆ ಬಿಜೆಪಿ ಸದಾ ಬದ್ಧವಾಗಿದೆ. ವಿರೋಧ ಪಕ್ಷದ ವಿಘ್ನ ಸಂತೋಷಿಗಳು ದೇಶವನ್ನು ಕೊಳ್ಳೆ ಹೊಡೆಯುವುದಕ್ಕೋಸ್ಕರ ಮಹಾಘಟಬಂಧ ರಚಿಸಿಕೊಂಡಿದ್ದಾರೆ. ಚುನಾವಣೆಗೋಸ್ಕರ ಜಾತಿಯ ಹೆಸರಲ್ಲಿ ಮೇಲಾಟ ಮಾಡುವುದು ನಾವಲ್ಲ. ನಮ್ಮ ಸಾಧನೆಯನ್ನು ವಿಕಾಸಪಥ ಪುಸ್ತಕ ರೂಪದಲ್ಲಿ ಪ್ರಕಟಸಿದ್ದೇವೆ.
ಪ್ರಧಾನಿಮಂತ್ರಿ ಸಮ್ಮಾನ ಯೋಜನೆಯಡಿ ಕರ್ನಾಟಕದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಕಳೆದ 5 ಬಾರಿ ಬದ್ಧತೆ ಹಾಗೂ
ಪ್ರೀತಿಯಿಂದ ಬಿಜೆಪಿಯನ್ನು ಗೆಲ್ಲಿಸಿದ್ದೀರಿ. ದೇಶಕ್ಕೆ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮೂಲ ಸೌಕರ್ಯಗಳ ದೃಷ್ಟಿಯಿಂದ ವೇಗ ನೀಡಬೇಕಾಗಿದ್ದು, ಈ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಈ ಬಾರಿಯೂ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಒಂದೇ ವರ್ಷದಲ್ಲಿ 6 ಸಾವಿರ ಕೋಟಿಗೂ ಅಧಿಕ ಅನುದಾನ 
ಹೊನ್ನಾವರ: ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ತಮ್ಮ ಉಮೇದುವಾರಿಕೆ ಸಲ್ಲಿಸಿದ ಬಳಿಕ ಪ್ರಥಮ ಬಾರಿಗೆ ಹೊನ್ನಾವರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದರು. ನಗಬಸ್ತಿಕೇರಿ ಜಿಪಂ ವ್ಯಾಪ್ತಿಯ ಸಂಶಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಈ ಬಾರಿ ಕಾಂಗ್ರೆಸ್‌ ಜಿಲ್ಲೆಯಲ್ಲಿ ಕಣದಲ್ಲಿ ಇಲ್ಲ. ಮೈತ್ರಿ ಮಾಡಿಕೊಂಡು ಜನತಾದಳ ನಾಮಿನೇಷನ್‌ ಕೊಡಲು ಮೀನಾಮೇಷದ ಮೇರೆಗೆ ಅಂತಿಮ ದಿನ ಸಲ್ಲಿಸಲು ಮುಂದಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಕಿದರೆ ಬೇರೆ ಯಾರೂ ಸ್ಪರ್ಧೆ ಮಾಡುತ್ತಿರಲಿಲ್ಲ. ಈಗ ಯಾವ ಮಟ್ಟದ ಸ್ಥಿತಿ ಆ ಪಕ್ಷಕ್ಕೆ ಬಂದಿದೆ ಎಂದು ನಿಮಗೆ ತಿಳಿದಿದೆ.ಎಷ್ಟೊ ಜನ ಹೇಳುತ್ತಾರೆ ಅನಂತಕುಮಾರ ಹೆಗಡೆ ಭಾಷಣಕ್ಕೆ ಸೀಮಿತ. ಅಭಿವೃದ್ಧಿ ಎಲ್ಲಿ ಆಗಿದೆ ಎಂದು.
ಪೂರ್ವಾಗ್ರಹ ಪೀಡಿತ ಮನಸ್ಸುಗಳಿಗೆ ಅಭಿವೃದ್ಧಿ ಕಾಣಿಸುವುದಿಲ್ಲ. ಅಂಥವರಿಗೆ ಉತ್ತರ ಕೊಡುವ ಅವಶ್ಯಕತೆಯು ಇಲ್ಲ. ನಾನು ಮೊದಲೂ ಸಂಸದನಾದಾಗ ಜಿಲ್ಲೆಯ ಸ್ಥಿತಿ ಈಗಿನ ಸ್ಥಿತಿ ನೋಡಿದರೆ ತಿಳಿಯುತ್ತದೆ. ಕಳೆದ ಒಂದು ವರ್ಷದಲ್ಲಿ ಆರು ಸಾವಿರ ಕೋಟಿಗೂ ಅಧಿಕ ಅನುದಾನ ಜಿಲ್ಲೆಗೆ ಬಂದಿದೆ. ದಕ್ಷಿಣ ಭಾರತದ ಮೊಟ್ಟಮೊದಲ ಡಿಜಿಟಲ್‌ ವಿಲೇಜ ಪ್ರಾರಂಭವಾಗಿದ್ದು ಹೊನ್ನಾವರದಲ್ಲಿ ಅದಕ್ಕೆ ಹೇಳಿದ್ದು ನೋಡುವ ಕಣ್ಣುಗಳಿಗೆ ಎಲ್ಲವು ಕಾಣುತ್ತೆ. ಜಿಲ್ಲೆಯಲ್ಲಿ ಒಂದು ಲಕ್ಷದ ಎಂಬತ್ತು ಸಾವಿರಕ್ಕೂ ಅಧಿಕ ಫಲಾನುಭವಿಗೆ ಉಜ್ವಲ ಗ್ಯಾಸ್‌ ನೀಡಿದ್ದೇವೆ. ಇದರ ದಾಖಲೆ ಕೋಡುತ್ತೇವೆ. ಆಷಾಡಭೂತಿ ಮಾತುಗಳನ್ನು ಆಡುವವರು ಇದನ್ನು ಓದಿ ನೋಡಿದರೆ ಸಾಕು. ಅರ್ಥಮಾಡಿಕೊಳ್ಳುವ ಯೋಗ್ಯತೆ ಇದ್ದರೆ ಅರ್ಥಮಾಡಿಕೊಳ್ಳಲಿ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next