Advertisement

ತೆಕ್ಕಟ್ಟೆ : ಕನಸಾಗಿ ಉಳಿದ ಸರ್ವೀಸ್‌ ರಸ್ತೆ ನಿರ್ಮಾಣ!

06:26 PM Feb 01, 2020 | Team Udayavani |

ತೆಕ್ಕಟ್ಟೆ: ಕುಂದಾಪುರ – ಸುರತ್ಕಲ್‌ ಚತುಷ್ಪಥ ಕಾಮಗಾರಿಯ ಸಂದರ್ಭ ತೆಕ್ಕಟ್ಟೆ ಹಾಗೂ ಕುಂಭಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸರ್ವೀಸ್‌ ರಸ್ತೆಗಳಿಗೆ ಅವಕಾಶ ಕಲ್ಪಿಸದೆ ಇರುವ ಪರಿಣಾಮ ಸ್ಥಳೀಯ ಕೊರವಡಿ ಹಾಗೂ ಕೊಮೆ ಪರಿಸರಕ್ಕೆ ತೆರಳುವ ವಾಹನ ಸವಾರರು ರಸ್ತೆಯ ವಿರುದ್ಧ ದಿಕ್ಕಿಗೆ ಸಾಗುತ್ತಿದ್ದಾರೆ. ಇದರಿಂದ ಗೊಂದಲ ಏರ್ಪಟ್ಟು ಅಪಘಾತಗಳಿಗೂ ಕಾರಣವಾಗುತ್ತಿದೆ.

Advertisement

ಎಲ್ಲೆಲ್ಲಿ ಬೇಕು ಸರ್ವೀಸ್‌ ರಸ್ತೆ?
ರಾಷ್ಟ್ರೀಯ ಹೆದ್ದಾರಿ 66 ಕುಂಭಾಸಿ ಪ್ರಮುಖ ಭಾಗದಿಂದ ಕೊರವಡಿ ಕಡಲ ತೀರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ತೆಕ್ಕಟ್ಟೆ ಪ್ರಮುಖ ಸರ್ಕಲ್‌ನಿಂದ ಕೊಮೆ ಕಡಲ ತೀರದೆಡೆಗೆ ಸಂಪರ್ಕ ಕಲ್ಪಿಸುವಲ್ಲಿ ತುರ್ತಾಗಿ ಸರ್ವಿಸ್‌ ರಸ್ತೆಗಳ ಅಗತ್ಯ ಇದೆ.

ಅಪಾಯಕಾರಿ ಸರ್ಕಲ್‌
ಚಾರುಕೊಟ್ಟಿಗೆ, ಬೇಳೂರು, ಕೆದೂರು, ಉಳೂ¤ರು, ಮಲ್ಯಾಡಿ ಗ್ರಾಮೀಣ ಭಾಗಗಳಿಂದ ಬರುವ ವಾಹನಗಳು ನೇರವಾಗಿ ಬಂದು ರಾ.ಹೆ ಪ್ರವೇಶಿಸುತ್ತವೆ. ಅಷ್ಟೇ ಅಲ್ಲದೆ ರಸ್ತೆ ಸಮೀಪದಲ್ಲಿ ತಾತ್ಕಾಲಿಕ ಬಸ್‌ ತಂಗುದಾಣಗಳಿದ್ದು ಒಳ ಮಾರ್ಗಗಳಿಂದ ಬರುವ ವಾಹನ ಚಾಲಕರಲ್ಲಿ ಗೊಂದಲ ಏರ್ಪಟ್ಟು ಅವಘಡಗಳಿಗೆ ಕಾರಣವಾಗುತ್ತಿವೆ.

ಬೇಕಿದೆ ಹೈಮಾಸ್ಟ್‌ ಲೈಟ್‌ !
ತೆಕ್ಕಟ್ಟೆ, ಕನ್ನುಕೆರೆ, ಕೊರವಡಿ ಭಾಗದಲ್ಲಿ ಕತ್ತಲಾಗುತ್ತಿದ್ದಂತೆ
ಜನದಟ್ಟಣೆ ಇರುತ್ತದೆ. ಇಲ್ಲಿ ವಾಹನಗಳೂ ವೇಗವಾಗಿ ಸಂಚ ರಿಸುವುದರಿಂದ ಜನರ ಓಡಾಟ ಗ್ರಹಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಪ್ರಖರ ಬೆಳಕು ನೀಡುವ ಹೈಮಾಸ್ಟ್‌ ದೀಪಗಳ ಅಗತ್ಯವಿದೆ.

ಸರ್ವಿಸ್‌ ರಸ್ತೆಗೆ ಬೇಡಿಕೆ
ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸರ್ವಿಸ್‌ ರಸ್ತೆಯ ಬಗ್ಗೆ ಬೇಡಿಕೆ ಇಡಲಾಗಿದೆ. ಆದರೆ ಅವರು ಸರ್ವೀಸ್‌ ರಸ್ತೆ ಸಾಧ್ಯವಿಲ್ಲ. ಆದರೆ ದಾರಿದೀಪದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಮತ್ತೂಮ್ಮೆ ಅಧಿಕಾರಿಗಳ ಗಮನಕ್ಕೆ ತರುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
– ಶೇಖರ್‌ ಕಾಂಚನ್‌ ಕೊಮೆ, ಅಧ್ಯಕ್ಷರು, ಗ್ರಾಮ ಪಂಚಾಯತ್‌ ತೆಕ್ಕಟ್ಟೆ.

Advertisement

ಇಬ್ಬಗೆ ನೀತಿ ಸರಿಯಲ್ಲ
ಗ್ರಾಮದ ಮಿತಿಯಲ್ಲಿ ಪ್ರಖರ ದಾರಿ ದೀಪಗಳಾಗಲಿ , ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸದೆ ನವಯುಗ ಕಂಪೆನಿ ಇಬ್ಬಗೆಯ ನೀತಿ ಅನುಸರಿಸಿರುವುದು ಸರಿಯಲ್ಲ. ಗ್ರಾಮದ ಮೂಲ ಸ್ವರೂಪದ ಬಗ್ಗೆ ಅಧ್ಯಯನ ನಡೆಸಿ ಸಮಸ್ಯೆಗೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಿ.
-ಗೋಪಾಲ ಕಾಂಚನ್‌ ಕೊಮೆ, ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next