Advertisement

ತೆಕ್ಕಟ್ಟೆ ಪೆಟ್ರೋಲ್‌ ಬಂಕ್‌ ಸಂಪೂರ್ಣ ಸೀಲ್‌ಡೌನ್‌; ಔಷಧಿ ಸಿಂಪಡಣೆ

09:00 PM Apr 28, 2020 | Sriram |

ತೆಕ್ಕಟ್ಟೆ: ಮಂಡ್ಯ ಮೂಲದ ಕೋವಿಡ್‌19 ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಸ್ನಾನ ಮಾಡಿರುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ರಾ.ಹೆ. 66ರ ಬಳಿ ಇರುವ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ನ್ನು ಸಂಪೂರ್ಣ ಸೀಲ್‌ ಡೌನ್‌ ಮಾಡಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಕುಂದಾಪುರ ಪುರಸಭಾ ವಾಹನದಿಂದ ಎ.28 ರಂದು ಬಂಕ್‌ ಪರಿಸರದ ಸುತ್ತಲೂ ಔಷಧಿ ಸಿಂಪಡಣೆ ಮಾಡಲಾಯಿತು.

Advertisement

ಆತಂಕದಲ್ಲಿ ಗ್ರಾಮಸ್ಥರು : ಮುಂಬೈನಿಂದ ಲಾರಿಯಲ್ಲಿ ಕುಂದಾಪುರ ಉಡುಪಿ ಮಾರ್ಗವಾಗಿ ಮಂಡ್ಯ ಮೂಲದ ಕೋವಿಡ್‌ 19 ಸೋಂಕಿತ ವ್ಯಕ್ತಿ ತೆಕ್ಕಟ್ಟೆ ಪೆಟ್ರೋಲ್‌ ಬಂಕ್‌ ನಲ್ಲಿ ಲಾರಿ ನಿಲ್ಲಿಸಿ ಊಟ ಮತ್ತು ಸ್ನಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಬಂದ ಮಾಹಿತಿಯನ್ನು ಆಧರಿಸಿ ಎ.27ರಂದು ತಡರಾತ್ರಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಕೋಟ ಪೊಲೀಸ್‌ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರ ನೇತೃತ್ವದಲ್ಲಿ ತೆಕ್ಕಟ್ಟೆ ಪೆಟ್ರೋಲ್‌ ಬಂಕ್‌ನ ಸಿಸಿ ಕೆಮರಾದ ದಾಖಲೆಯನ್ನು ಪರಿಶೀಲಿಸಿ ಬಂಕ್‌ ಸೀಲ್‌ಡೌನ್‌ ಮಾಡಿದ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ ತೆಕ್ಕಟ್ಟೆ ಸುತ್ತಮುತ್ತಲ ಸುಮಾರು 3 ಕಿ.ಮೀ. ವ್ಯಾಪ್ತಿಯ ಗ್ರಾಮವೇ ಸೀಲ್‌ಡೌನ್‌ ಮಾಡಲಾಗಿದೆ ತಿಳಿದು ಎಂದು ಆತಂಕಕ್ಕೆ ಒಳಗಾಗಿ ಗ್ರಾಮಸ್ಥರು ಮುಂಜಾನೆ ತೆಕ್ಕಟ್ಟೆ ಯ ಪ್ರಮುಖ ಭಾಗದ ಅಂಗಡಿ ಮುಂಗಟ್ಟು ಹಾಗೂ ಪ್ರಮುಖ ಮಾರ್ಗದಲ್ಲಿ ಜನ ಸಂಚಾರ ಸಂಪೂರ್ಣ ವಿರಳವಾಗಿ ಕಂಡು ಬಂತು .

ಪೆಟ್ರೋಲ್‌ ಬಂಕ್‌ಸಿಬಂದಿಗಳು ಕ್ವಾರಂಟೈನ್‌ಗೆ : ಎ.27ರಂದು ಬಂಕ್‌ನ ಮಾಲಕ ಹಾಗೂ ಸಿಬಂದಿಗಳ ಸಹಿತ ಒಟ್ಟು ಏಳು ಮಂದಿಯನ್ನು ಹಾಗೂ ಮತ್ತೆ ಉಳಿದಿರುವ ನಾಲ್ಕು ಮಂದಿಯನ್ನು ಎ.28 ರಂದು ಕ್ವಾರಂಟೈನ್‌ನಲ್ಲಿ ಇರಿಸುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಪೆಟ್ರೋಲ್‌ ಬಂಕ್‌ನಲ್ಲಿ ಕಾರ್ಯನಿರ್ವಹಿಸಿದ ಸಿಬಂದಿ ಹಾಗೂ ಮಾಲಕರು ಸೇರಿದಂತೆ ಒಟ್ಟು 7 ಕುಟುಂಬ ಸದಸ್ಯರು ಕೂಡಾ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಇಲಾಖೆ ಸೂಚಿಸಿದೆ.

ಚಿತ್ರ-ಮಾಹಿತಿ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ

Advertisement

Advertisement

Udayavani is now on Telegram. Click here to join our channel and stay updated with the latest news.

Next