Advertisement
ಗಣಿಗಾರಿಕಾ ಪ್ರದೇಶದ ಸಮೀಪದಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದೆ. ಅಲ್ಲದೆ ಜಿಲ್ಲಾ ಮುಖ್ಯ ರಸ್ತೆ ಹಾದು ಹೋಗುತ್ತಿದ್ದು, ಅಲ್ಲಿ ನಿತ್ಯ ವಾಹನಗಳು ಸಂಚರಿಸುತ್ತಿರುವ ಕಾರಣ ಶಿಲೆ ಕಲ್ಲು ಗಣಿಗಾರಿಕೆಯ ಮಾಲಿನ್ಯದಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದ್ದು, ಈ ಹಿನ್ನೆಲೆ ಗುತ್ತಿಗೆ ನವೀಕರಣ ತಡೆ ಹಿಡಿಯುವಂತೆ ಆಗ್ರಹಿಸಿದರು.
ಬೇಳೂರಿನ ಗಣಿಗಾರಿಕಾ ಪ್ರದೇಶದಲ್ಲಿ ಅಪಾಯಕಾರಿ ಹೊಂಡಗಳು ಸೃಷ್ಟಿಯಾಗಿದ್ದು, ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಶೇಖರಣೆಯಾಗುತ್ತಿರುವ ಪರಿಣಾಮ ಸೂಕ್ತವಾದ ತಡೆಬೇಲಿಗಳಿಲ್ಲದೇ ಈಗಾಗಲೇ ಹಲವು ಅಪಾಯ ಸಂಭವಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿ.5ರಂದು ಬೇಳೂರು ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಲಿಖೀತವಾಗಿ ದೂರು ನೀಡಿದ್ದಾರೆ.
-ಅವಿನಾಶ್ ಶೆಟ್ಟಿ ಬೇಳೂರು, ನ್ಯಾಯವಾದಿಗಳು