Advertisement

Chikkamagaluru: ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಸೇರಿ ವಸ್ತುಗಳ ಕಳ್ಳತನ

12:18 PM Jun 26, 2024 | Team Udayavani |

ಚಿಕ್ಕಮಗಳೂರು : ನಕಲಿ ಕೀ ಬಳಸಿಕೊಂಡು ಕಾರಿನಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿ ನಡೆದಿದೆ.

Advertisement

ಅಡ್ವೋಕೇಟ್ ದೀಕ್ಷಿತ್ ಎಂಬುವವರಿಗೆ ಸೇರಿದ ಓಮಿನಿ ಕಾರು ಇದಾಗಿದ್ದು, ತಮ್ಮ ಕಚೇರಿಯ ಮುಂಭಾಗ ಕಾರು ನಿಲ್ಲಿಸಿ ಕಾಫಿಗೆ ಹೋದಾಗ ರಸ್ತೆ ಕಾರು ನಿಲ್ಲಿಸಿ ಹೋಗಿದ್ದರು. ಈ ವೇಳೆ ನಕಲಿ ಕೀ ಬಳಸಿಕೊಂಡಿ ಕಳ್ಳರು ಕಾರಿನಲ್ಲಿದ್ದ ವಸ್ತುಗಳನ್ನು ಕಳವುಗೈದಿದ್ದಾರೆ. ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರಿನ ಡೋರ್ ತೆಗೆದು ಕಳ್ಳತನ ಮಾಡಿದ್ದಾರೆ.

ಕಾರಿನಲ್ಲಿದ್ದ  ವಕೀಲರ ಬ್ಲೇಜರ್ ಸೇರಿದಂತೆ 42 ಸಾವಿರ ಹಣ, ಮೊಬೈಲ್ ಕದ್ದಿಯಲಾಗಿದೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next