Advertisement
ಕೆ.ಜಿ.ಹಳ್ಳಿ ನಿವಾಸಿ ಸೈಯದ್ ಜಿಬ್ರಾನ್ (28) ಮತ್ತು ತೆಲಂಗಾಣದ ಹೈದರಾಬಾದ್‌ನ ಪರ್ವತಮ್ ಹೇಮ್‌ಚಂದ್ರ (42) ಬಂಧಿತರು. ಇಬ್ಬರು ಆರೋಪಿಗಳಿಂದ 8.92 ಕೋಟಿ ರೂ. ಮೌಲ್ಯದ ಮರ್ಸಿ ಡಿಸ್ ಬೆಂಜ್, ರೇಂಜ್ ರೋವರ್, ಮಹೀಂದ್ರ ತಾರ್, ಆಡಿ ಕ್ಯೂ ಸೇರಿ ವಿವಿಧ ಕಂಪನಿಯ 12 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಐಷಾರಾಮಿ ಕಾರು ಮಾಲೀಕರಿಗೆ ಎಷ್ಟು ಹಣ ಕೊಟ್ಟು ಕಾರನ್ನು ಮಾರಾಟ ಮಾಡಿ ಕೊಡುವು ದಾಗಿ ಯಾಮಾರಿಸುತ್ತಿದ್ದರು. ಯಾವ ರೀತಿ ಮಾಲೀಕರಿಗೆ ಆಮಿಷವೊಡ್ಡಿ ಮೋಸ ಮಾಡುತ್ತಿದ್ದರು. ಮಾಲೀಕರು ಹೇಗೆ ಅವರ ಮಾತನ್ನು ನಂಬುತ್ತಿದ್ದರು ಎಂಬುದು ಆಶ್ಚರ್ಯವಾಗಿದೆ. ಇದೊಂದು ವ್ಯವಸ್ಥಿತ ಜಾಲ ಇದ್ದಂತಿದೆ. ಇಂತಹ ಐಷಾರಾಮಿ ಕಾರು ಮಾಲೀಕರನ್ನು ಮನವೊಲಿಸುವ ಶೈಲಿ ವಿಚಿತ್ರವಾಗಿದೆ. ಹೀಗಾಗಿ ಕಾರು ಮಾಲೀ ಕರನ್ನು ಕರೆದು ವಿಚಾರಣೆ ನಡೆಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಚಾಲನೆ : ನೆರೆ ರಾಜ್ಯಗಳಲ್ಲಿರುವ ಫೈನಾನ್ಸ್ ಕಂಪನಿಗಳು ಮತ್ತು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ವ್ಯವಹಾರ ನಡೆಸುವ ವ್ಯಕ್ತಿಗಳ ಸಂಪರ್ಕ ಹೊಂದಿರುವ ಸೈಯದ್ ಜಿಬ್ರಾನ್, ಫೈನಾನ್ಸ್ ಕಂಪನಿ ಅಥವಾ ಫೈನಾನ್ಸಿಯರ್ ಗಳು ಅಡಮಾನ ಇಟ್ಟುಕೊಂಡಿರುವ ಐಷಾರಾಮಿ ವಾಹನಗಳನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದ. ಅವುಗಳನ್ನು ಉತ್ತಮ ಬೆಲೆಗೆ ನಗರದಲ್ಲಿ ಮಾರಾಟ/ಬಾಡಿಗೆ ನೆಪದಲ್ಲಿ ಅಸಲಿ ದಾಖಲೆಗಳ ಜತೆ ಕಾರುಗಳನ್ನು ನಗರಕ್ಕೆ ತರುತ್ತಿದ್ದ. ನಂತರ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ. ಖರೀದಿಸಿದ ವ್ಯಕ್ತಿಗೆ ಕೆಲ ದಿನಗಳ ಕಾಲ ಬಳಸಿ, ಕಾರು ಇಷ್ಟವಾಗದಿದ್ದಾಗ ಈತನೇ ಮಧ್ಯವರ್ತಿಯಾಗಿ ಬಂದು ಅದೇ ಕಾರನ್ನು ಮತ್ತೂಬ್ಬ ವ್ಯಕ್ತಿಗೆ ಮಾರಾಟ ಮಾಡುತ್ತಿದ್ದ. ಇನ್ನು ಕೆಲವರಿಗೆ ದಾಖಲೆಗಳನ್ನು ಕೊಡದೆ, ನಕಲಿ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡು ಕಾರು ಚಲಾಯಿಸುವಂತೆ ಸಲಹೆ ನೀಡುತ್ತಿದ್ದ. ಅಂತಹ ಪ್ರಕರಣಗಳು ಪತ್ತೆಯಾಗಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಜಾರ್ಖಂಡ್, ಛತ್ತೀಸ್ ಗಢ ಸೇರಿ ವಿವಿಧ ರಾಜ್ಯಗಳ ಕಾರುಗಳ ಮಾಲೀಕರಿಗೆ ವಂಚಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.