Advertisement

ಬ್ಯಾಂಕ್‌ ಲಾಕರ್‌ ಗೋಡೆ ಒಡೆದು ಕಳ್ಳತನ

12:49 PM Nov 19, 2019 | Suhan S |

ನಾಲತವಾಡ: ಪಟ್ಟಣದ ಸಿಂಡಿಕೇಟ್‌ ಬ್ಯಾಂಕ್‌ ಲಾಕರ್‌ ಗೋಡೆ ಒಡೆದಿರುವ ಕಳ್ಳರು 13,460 ಚಿಲ್ಲರೆ ಹಣ ದೋಚಿ ಪರಾರಿಯಾಗಿದ್ದಾರೆ.

Advertisement

ನಾಲತವಾಡ ಪಟ್ಟಣದ ಸಿಂಡಿಕೇಟ್‌ ಬ್ಯಾಂಕಿಗೆ ಕಳ್ಳರ ಕನ್ನ ಹಾಕಿದ ಪ್ರಕರಣ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ರವಿವಾರ ರಜೆ ದಿನ ಇದ್ದುದ್ದರಿಂದ ಕಳ್ಳರು ಬ್ಯಾಂಕಿನ ಹಿಂಬದಿಯಲ್ಲಿ ಇರುವ ಲಾಕರ್‌ ರೂಮಿನ ಗೋಡೆಯನ್ನು ಕೊರೆದು ನುಗ್ಗಿದ್ದಾರೆ. ರವಿವಾರ ರಜೆ ದಿನ ಮುಗಿಸಿ ಸೋಮವಾರ ಬೆಳಗ್ಗೆ ಬ್ಯಾಂಕಿನ ವ್ಯವಸ್ಥಾಪಕ ಮತ್ತು ಸಿಬ್ಬಂದಿ ಕೆಲಸಕ್ಕೆ ಹಾಜರಾದ ಮೇಲೆ ಲಾಕರ್‌ ಕೊಠಡಿಯ ಗೋಡೆ ಒಡೆದ ದೃಶ್ಯ ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋರೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕಿನ ಹಿಂಬದಿ ಲಾಕರ್‌ ರೂಮಿನ ಕೆಳ ಭಾಗದಲ್ಲಿ   ಒಡೆದು ಕಳ್ಳರು ನುಗ್ಗಿದ್ದಾರೆ. ಲಾಕರ್‌ ರೂಮಿನಲ್ಲಿದ್ದ ದಾಖಲೆಗಳನ್ನು ರೂಮಿನ ಒಳಗೆ ಮತ್ತು ಹೊರಗೆ ಬೀಸಾಡಿದ್ದಾರೆ. ಹಣ ಇದ್ದ ಲಾಕರ್‌ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಇದರಲ್ಲಿ ವಿಫಲರಾಗಿದ್ದಾರೆ. ಲಾಕರ್‌ ಕೊಠಡಿ ಹೊರಗೆ ಇಟ್ಟಿದ್ದ 13,460 ಚಿಲ್ಲರೆ ಹಣ ದೋಚಿದ್ದಾರೆ ಎಂದು ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಬೆಳಗ್ಗೆ ಸಿಪಿಐ ಆನಂದ ವಾಗ್ಮೋರೆ ಹಾಗೂ ಕ್ರೈಂ ಪಿಎಸ್‌ಐ ಭೇಟಿ ನೀಡಿ ಬ್ಯಾಂಕ್‌ ಸುತ್ತ ಮುತ್ತ ಪ್ರದೇಶವನ್ನು ಪರಿಶೀಲಿಸಿದರು. ನಂತರ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next