Advertisement

ಹಾಡು ಹಗಲೇ ಬೇಕರಿ ಮುಂದೆ ನಿಲ್ಲಿಸಿದ ಬೈಕ್ ನಿಂದ 3.40 ಲಕ್ಷ ಹಣ ದೋಚಿ ಪರಾರಿಯಾದ ಖದೀಮ

07:43 PM Mar 21, 2022 | Team Udayavani |

ರಾಮದುರ್ಗ: ರಸ್ತೆಯ ಪಕ್ಕ ವಾಹನ ನಿಲ್ಲಿಸಿ ಬೇಕರಿ ಪದಾರ್ಥಗಳನ್ನು ತರಲು ಅಂಗಡಿ ಹೋಗುತ್ತಿದ್ದಂತೆ ಹೊಂಚು ಹಾಕಿ ಕುಳಿತ್ತಿದ್ದ ಖದೀಮನೊರ್ವ ಬೈಕ್ ನಲ್ಲಿದ್ದ 3.40 ಲಕ್ಷ ಹಣವನ್ನು ದೋಚಿಕೊಂಡು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರವಲಯದ ಸಂಗೊಳ್ಳಿ ರಾಯಣ್ಣ ವೃತ್ತದ ಯಾದವಾಡ ಪೆಟ್ರೋಲ್ ಬಂಕ್ ಮುಂದಿನ ಬೇಕರಿ ಹತ್ತಿರ ನಡೆದಿದೆ.

Advertisement

ಹಣ ಕಳೆದುಕೊಂಡ ವ್ಯಕ್ತಿ ರಾಮದುರ್ಗ ತಾಲೂಕಿನ ಗೊಣಗನೂರ ಗ್ರಾಮದ ಹಟೇಲಸಾಬ ಬುಡ್ಡೆಸಾಬ ಕರೋಲೆ ಎಂದು ತಿಳಿದು ಬಂದಿದ್ದು, ರಾಮದುರ್ಗ ಪಟ್ಟಣದ ಕೆನರಾ ಬ್ಯಾಂಕಿನಿಂದ 3.40 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ತನ್ನ ಬೈಕಿನಲ್ಲಿನ ಪಕ್ಕ ಬಾಕ್ಸ್‌ನಲ್ಲಿ ಇಟ್ಟು ಕೀ ಹಾಕಿ ತನ್ನ ಸ್ವ ಗ್ರಾಮ ಗೊಣಗನೂರ ಗ್ರಾಮಕ್ಕೆ ಹೋರಟಿದ್ದಾನೆ. ಪಟ್ಟಣದ ಹೊರವಲಯದ ಸಂಗೊಳ್ಳಿ ರಾಯಣ್ಣ ವೃತ್ತದ ಯಾದವಾಡ ಪೆಟ್ರೋಲ್ ಬಂಕ್ ಮುಂದಿನ ಬೇಕರಿವೊಂದರಲ್ಲಿ ಸಿಹಿ ತಿನಿಸು ತೆಗೆದುಕೊಳ್ಳಲು ಅಂಗಡಿ ಮುಂದೆ ರಸ್ತೆಯ ಪಕ್ಕ ಬೈಕ್ ನಿಲ್ಲಿಸಿ ಹೋಗುತ್ತಿದ್ದಂತೆ ಬೈಕ್ ಹಿಂಬಾಲಿಸಿಕೊಂಡು ಓಡೋಡಿ ಬಂದ್ ಖದೀಮನು ಡುಬ್ಲಿಕೇಟ್ ಕೀ ಬಳಸಿ ಬೈಕ್ ಪಕ್ಕದ ಬಾಕ್ಸ್ ನಲ್ಲಿದ್ದ 3.40 ಲಕ್ಷ ಹಣವನ್ನು ಹಾಡು ಹಗಲೇ ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಾವಳಿ ಬೇಕರಿಯಲ್ಲಿನ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ರಾಮದುರ್ಗ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಖದೀಮನ ಪತ್ತೆಗಾಗಿ ಜಾಲ ಬೀಸಿದ್ದಾರೆ. ಈ ಘಟನೆ ಕುರಿತು ರಾಮದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next