Advertisement

ಅಂಕೋಲಾ: ರೆಸ್ಟೋರೆಂಟ್ ಗೆ ನುಗ್ಗಿ ಮುಸುಕುಧಾರಿಗಳಿಂದ ಲಕ್ಷಾಂತರ ನಗದು,ಮದ್ಯದ ಬಾಟಲಿ ಕಳ್ಳತನ

04:14 PM Mar 01, 2022 | Team Udayavani |

ಅಂಕೋಲಾ : ಲಕ್ಷಾಂತರ ರೂಪಾಯಿ ನಗದು ಮತ್ತು ಮದ್ಯದ ಬಾಟಲಿ ಕಳುವು ಮಾಡಿದ ಘಟನೆ ಪಟ್ಟಣದ ರಾ.ಹೆ 66 ಕ್ಕೆ ಹೊಂದಿರುವ ಪೀಕಾಕ್ ಬಾರ್ ಎಂಡ್  ರೆಸ್ಟೋರೆಂಟ್ ನಲ್ಲಿ ಮಂಗಳವಾರ ಬೆಳಗಿನ ಜಾವ 2  ಗಂಟೆಗೆ ನಡೆದಿದೆ.

Advertisement

ರಾತ್ರಿ  ವ್ಯಾಪಾರ ಮುಗಿಸಿಕೊಂಡು ಬಾರ್ ಬಂದ ಮಾಡಿ ಸಿಬ್ಬಂದಿಗಳು ಅಲ್ಲಿಯೇ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಮಲಗಿದ್ದರು.  ರೆಸ್ಟೋರೆಂಟ್ ನ ಹಿಂದೆ ಇರುವ  ಬಾಗಿಲಿನ  ಜಾಳಿಗೆಯನ್ನು ಸರಿಸಿ, ಇನ್ನೊಂದು ಬಾಗಿಲನ್ನು ಒಡೆದು  ಮುರಿದು ಕಳ್ಳರು ಒಳ ಪ್ರವೇಶಿಸಿದಂತೆ ಕಂಡು ಬರುತ್ತಿದ್ದು ಕ್ಯಾಶ್  ಕೌಂಟರ್ ಬಳಿ ಬಂದು  ಪೆಟ್ಟಿಗೆ  ಒಡೆದು ಅಲ್ಲಿನ ನಗದು ಕಳ್ಳತನ ಮಾಡಿದ್ದಾರೆ ನಂತರ ಮದ್ಯದ ಬಾಕ್ಸುಗಳನ್ನು ಸಂಗ್ರಹಿಸಿಟ್ಟ ಕೋಣೆಗೆ ನುಗ್ಗಿ ಕೆಲವು ಬಾಕ್ಸುಗಳನ್ನು ಕದ್ದೊಯ್ದಿರುವುದಾಗಿ ತಿಳಿದು ಬಂದಿದೆ.

ಇಬ್ಬರು ಮುಸುಕುಧಾರಿಗಳು ಮಾರಕಾಶ್ತ್ರ ಹಿಡಿದು ಒಳ ಪ್ರವೇಶಿಸಿರುವುದು ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅಂಕೋಲಾ ಪಿಎಸ್ಐ ಪ್ರೇಮನಗೌಡ ಪಾಟೀಲ ತಂಡ ಜೊತೆಗೆ ಶ್ವಾನದಳ ಬೆರಳಚ್ಚು ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next