Advertisement

ಮನೆಕೆಲಸದ ಸೋಗಿನಲ್ಲಿ ಚಿನ್ನಾಭರಣ ಕಳವು-ಮಹಿಳೆ ಬಂಧನ

09:14 PM Jul 14, 2022 | Team Udayavani |

ಬೆಂಗಳೂರು: ಮನೆ ಕೆಲಸ ಬೇಕೆಂದು ಕೇಳಿಕೊಂಡು ಬರುವ ಮಹಿಳೆಯರ ಬಗ್ಗೆ ಎಚ್ಚರವಹಿಸಿ!

Advertisement

ಮನೆಗೆಲಸ ಮಾಡಿ, ಮಸಾಜ್‌ ಮಾಡುತ್ತೇನೆ ಎಂದು ನಂಬಿಸಿ ಮಹಿಳೆಯೊಬ್ಬರ ಚಿನ್ನಾಭರಣ ದೋಚಿದ್ದ ಕಳ್ಳಿ ಮಾರತ್ತಹಳ್ಳಿ ಪೊಲೀಸರ ಅತಿಥಿಯಾಗಿದ್ದಾಳೆ.

ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಅಕ್ಕಿಮ್‌ ಮಣಿ(35) ಬಂಧಿತೆ. ಆರೋಪಿಯಿಂದ 13 ಲಕ್ಷ ರೂ. ಮೌಲ್ಯದ 271 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಆರೋಪಿ ಇತ್ತೀಚೆಗೆ ಮುನೆಕೊಳಲುನ ಇಸ್ರೋ ಲೇಔಟ್‌ ಬಳಿಯ ಮನೆಯೊಂದರ ಬಳಿ ಬಂದು ಮನೆ ಕೆಲಸ ಮಾಡುತ್ತೇನೆ.ಬಳಿಕ ಬಾಡಿ ಮಸಾಜ್‌ ಮಾಡುತ್ತೇನೆ ಎಂದು ನಂಬಿಸಿದ್ದಾಳೆ. ಮನೆಯೊಳಗೆ ಬಂದ ಆರೋಪಿತೆ, ಮನೆಕೆಲಸ ಮುಗಿಸಿ, ಮನೆ ಮಾಲೀಕಿಗೆ ಬಾಡಿ ಮಸಾಜ್‌ ಮಾಡುತ್ತೇನೆ ಎಂದು ಮಾಂಗಲ್ಯ ಸರ ಬಿಚ್ಚಿಸಿದ್ದಾಳೆ.

ಬಳಿಕ ಸ್ನಾನ ಮಾಡಿಕೊಂಡು ಬರುವಂತೆ ಹೇಳಿ,ಚಿನ್ನದ ಸರ ಸಮೇತ ಪರಾರಿಯಾಗಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಆರೋಪಿ ಆಗರದ ಸೋಮಸುಂದರಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಮನೆ ಕೆಲಸ ಮಾಡುವ ಸೋಗಿನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಳು. ಮನೆಗೆಲಸ ಮಾಡುವ ಸೋಗಿನಲ್ಲಿ ಮನೆಗಳಿಗಾಗಿ ಶೋಧ ನಡೆಸಿ, ವಯೋವೃದ್ಧರನ್ನೇ ಟಾಗೇìಟ್‌ ಮಾಡಿ ಕೃತ್ಯ ಎಸಗುತ್ತಿದ್ದಳು. ಈಕೆಯ ಬಂಧನದಿಂದ ಮಾರತ್ತಹಳ್ಳಿ ಠಾಣೆಯ 2, ಕೆ.ಆರ್‌.ಪುರ, ರಾಜಾಜಿನಗರದ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next