Advertisement

ಆನೆಗುಂದಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕಳ್ಳತನ; ಒಂದೇ ವಾರದಲ್ಲಿ ಹುಂಡಿ ಕಳ್ಳರ ಬಂಧನ

01:33 PM Nov 23, 2022 | Team Udayavani |

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಆನೆಗೊಂದಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಹುಂಡಿ ಕಳ್ಳತನ ಮಾಡಿದ ಕಳ್ಳರನ್ನು ಗ್ರಾಮೀಣ ಪೊಲೀಸರು ಒಂದು ವಾರದಲ್ಲಿಯೇ ಬಂಧಿಸಿದ್ದಾರೆ.

Advertisement

ಕಳೆದ ವಾರ ರಂಗನಾಥ ಸ್ವಾಮಿ ಕುಡಿಯ ಕಳ್ಳತನ ಮಾಡಿ ಕಳ್ಳತನದ ಬಗ್ಗೆ ಮಹಾಲಕ್ಷ್ಮಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಹುಲಿಗಿ ಗ್ರಾಮದ ಮತ್ತು ಕೊಟ್ಟೂರಿನ ದೂಪದಳ್ಳಿಯ ಗ್ರಾಮದ ಐದು ಜನ ಕಳ್ಳರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಎಚ್. ರಾಮಸ್ವಾಮಿ ಅಂಜಿನಪ್ಪ ದೂಪದಳ್ಳ, ಕೊಟ್ಟೂರು, ನಾಗರಾಜ್ ಕಮ್ಮಾರ್ ಹುಲಿಗಿ, ವಿಶ್ವನಾಥ್ ಹುಲಗಿ, ಕುಮಾರ ಬಿಗ್ಗು ಹುಲಿಗಿ, ಮಂಜುನಾಥ ಚಿಲಕನಟ್ಟಿ, ಮರಿಯಮ್ಮನಹಳ್ಳಿ, ವಿಜಯನಗರ ಜಿಲ್ಲೆ ಐದು ಜನ ಕಳ್ಳರನ್ನು ಗ್ರಾಮೀಣ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶ್ಯು ಗಿರಿ ನಿರ್ದೇಶನದಲ್ಲಿ ಡಿವೈಎಸ್ಪಿ ರುದ್ರೇಶ್ ವಜ್ಜನಕೊಪ್ಪ ,ಗ್ರಾಮೀಣ ಸಿಪಿಐ ಮಂಜುನಾಥ್ ಹಾಗೂ ಪಿಎಸ್ಐ ಶಾರದಮ್ಮ ಪೊಲೀಸ್ ಸಿಬ್ಬಂದಿಗಳಾದ  ಮರಿಯಪ್ಪ, ಆಂಜ, ಮಂಜುನಾಥ್, ಶಾಮ, ಮಹಬೂಬ್ ಸೈಯದ್ ಗೌಸ್ ಸಯ್ಯದ್ , ಶಿವಕುಮಾರ್ ಹಾಗೂ ಮಹಾಂತೇಶ್ ಕಾರ್ಯನಿರ್ವಹಿಸಿ ಕಳ್ಳರನ್ನು ಬಂಧಿಸಿ ಅವರಿಂದ ಬೈಕ್ ಸೇರಿದಂತೆ ಕಳ್ಳತನಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next