Advertisement
ತಾಲೂಕಿನ ಯಂಟಗನಹಳ್ಳಿ ಗ್ರಾಪಂ ಕಚೇರಿಗೆ ಅಧಿಕಾರಿಗಳು ಶನಿವಾರ ಸಂಜೆ ಕಚೇರಿ ಸಮಯ ಮುಗಿದ ಬಳಿಕ ಬೀಗ ಹಾಕಿ ಮನೆಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ರಾಷ್ಟ್ರಧ್ವಜ ಹಾರಿಸಲು ಸಿಬ್ಬಂದಿ ಕಚೇರಿಗೆ ಬಂದಾಗ ಬೀಗ ಹೊಡೆದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
Related Articles
Advertisement
ಸದಾ ಹೆದ್ದಾರಿಯಲ್ಲಿ ನೂರಾರು ವಾಹನಗಳು ಓಡಾಡುತಿದ್ದರೂ ಹೆದರದೆ ಕಳ್ಳತನ ಮಾಡಲು ಮುಂದಾಗಿರುವ ಕಳ್ಳರು ಘಟನಾಸ್ಥಳಕ್ಕೆ ಹಾಗೂ ಕಚೇರಿಗೆ ಹೊಸಬರಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ, ಒಟ್ಟಾರೆ ಪೊಲೀಸರ ತನಿಖೆಯಿಂದ ಮಾತ್ರ ನಿಜವಾದ ಖದೀಮರು ಕೈಚಳಕದ ಮಾಹಿತಿ ತಿಳಿಯಬೇಕಾಗಿದೆ.
ಕಾರ್ಯದರ್ಶಿ ಬೀರು ಸೇಫ್: ಅನೇಕ ತನಿಖೆಗಳನ್ನು ಎದುರಿಸುತ್ತಿರುವ ಕಾರ್ಯದರ್ಶಿ ಮೂರು ದಿನಗಳಿಂದ ರಜೆಯಲ್ಲಿದ್ದು ಗ್ರಾಮಪಂಚಾಯಿತಿ ಕಚೇರಿಯಲ್ಲಿರುವ ಕಾರ್ಯದರ್ಶಿಯ ಬೀರು ಬಿಟ್ಟು ಉಳಿದ ಎಲ್ಲಾ ಬೀರುಗಳ ಹುಡುಕಾಟ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿ ಕಳ್ಳತನವನ್ನು ಕೆಲ ಸಿಬ್ಬಂದಿಗಳ ಸಹಕಾರದಿಂದ ಮಾಡಿದ್ದಾರೆ ಸಿಬ್ಬಂಧಿಗಳ ಸೂಕ್ತ ತನಿಖೆಯಾಗಬೇಕು ಎಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.
ಪೊಲೀಸರ ಮೇಲೆ ಭರವಸೆ : ಪಂಚಾಯಿತಿ ಕಚೇರಿಯಲ್ಲಿ ಹಣವಿರುವುದಿಲ್ಲ,ಚಿನ್ನಬೆಳ್ಳಿ ಮೊದಲೇ ಇರುವುದಿಲ್ಲ ದಾಖಲಾತಿಗಳಿರುವ ಪೈಲ್ ನಾಶಕ್ಕೆ ಯಾರೋ ಮೊದಲೆ ಯೋಜನೆ ರೂಪಿಸಿ ಕಳ್ಳತನ ಮಾಡಿರುವಂತೆ ಕಂಡುಬರುತ್ತಿದ್ದು ನಮ್ಮ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆಯಿದೆ, ಶೀರ್ಘದಲ್ಲಿ ಖದೀಮರು ಪತ್ತೆಯಾಗುವ ವಿಶ್ವಾಸವಿದೆ ಎಂದು ಗ್ರಾಮಪಂಚಾಯಿತಿ ಸದಸ್ಯ ಮಹದೇವಪುರ ಚಿಕ್ಕಣ್ಣ ತಿಳಿಸಿದರು.
ಗ್ರಾಮಪಂಚಾಯಿತಿಗೆ ಕಳ್ಳರು ಬಂದಿರುವುದು ಅಚ್ಚರಿಯ ಸಂಗತಿ, ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ಮಾಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಖದೀಮರನ್ನು ಶೀಘ್ರದಲ್ಲಿ ಸೆರೆಹಿಡಿಯಬೇಕು ಎಂದು ಒತ್ತಾಯಿಸುತ್ತೇನೆ, ತಪ್ಪಿತಸ್ಥರಿಗೆ ಸೂಖ್ತ ಶಿಕ್ಷೆಯಾಗಬೇಕು. -ರಾಹುಲ್‌ಗೌಡ, ಯಂಟಗನಹಳ್ಳಿ ಗ್ರಾಪಂ ಅಧ್ಯಕ್ಷ