Advertisement

ಪಾರ್ಸೆಲ್ ಡೆಲಿವರಿ ಕಚೇರಿಯಲ್ಲಿ ಕಳವು ; ಅಧಿಕ ಮೊತ್ತದ ನಗದು, ವಸ್ತುಗಳು

02:54 PM Jan 30, 2023 | Team Udayavani |

ಸುರತ್ಕಲ್: ಪಾರ್ಸೆಲ್ ಡೆಲಿವರಿ ಕಚೇರಿಯೊಂದಕ್ಕೆ ನುಗ್ಗಿ ಕಳವು ಮಾಡಿದ ಘಟನೆ ಮುಕ್ಕದಲ್ಲಿ ನಡೆದಿದೆ.

Advertisement

ಮುಕ್ಕ ಚೆಕ್ ಪೋಸ್ಟ್ ಬಳಿ ಇರುವ ಡೆಲಿವರಿ ಕಚೇರಿ ಇದಾಗಿದ್ದು, ಮೂರು ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಾಗೂ ವಿತರಣೆಗೆ ಶೇಖರಿಸಿಟ್ಟ ಅಮೂಲ್ಯ ವಸ್ತುಗಳನ್ನು ದೋಚಲಾಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.