Advertisement

Fruad: ಫೇಸ್‌ಬುಕ್ ನಲ್ಲಿ ಹುಡುಗಿ ಎಂದು ನಂಬಿಸಿ 7 ಲಕ್ಷ ವಂಚಿಸಿದ ತೀರ್ಥಹಳ್ಳಿಯ ಭೂಪ

03:51 PM Dec 15, 2023 | Team Udayavani |

ತೀರ್ಥಹಳ್ಳಿ: ಫೇಸ್‌ಬುಕ್ ನಲ್ಲಿ ತಾನು ಹುಡುಗಿ ಎಂಬಂತೆ ಬಿಂಬಿಸಿಕೊಂಡಿದ್ದ ತೀರ್ಥಹಳ್ಳಿಯ ಯುವಕನೊಬ್ಬ ತುಮಕೂರು ಜಿಲ್ಲೆಯ ಶಿರಾ ಗೇಟ್​ನ ಯುವಕನೊಬ್ಬನಿಗೆ 7.25 ಲಕ್ಷ ರೂ ವಂಚಿಸಿದ್ದಾನೆ.

Advertisement

ತೀರ್ಥಹಳ್ಳಿ ಯುವಕನ ವಿರುದ್ಧ ದಾಖಲಾದ ದೂರಿನನ್ವಯ ತುಮಕೂರು ಪೊಲೀಸರು ತೀರ್ಥಹಳ್ಳಿಯಲ್ಲಿದ್ದ ಆರೋಪಿಯನ್ನು ಹುಡುಕಿ ಆತನನ್ನು ಅರೆಸ್ಟ್ ಮಾಡಿದ್ದು, ಸದ್ಯ ಕೋರ್ಟ್​ ಮೂಲಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತೀರ್ಥಹಳ್ಳಿಯ 21 ವರ್ಷದ ಯುವಕ ಆರೋಪಿಯಾಗಿದ್ದು, ಸದ್ಯ ಪೊಲೀಸರು ಈ ಜಾಲದಲ್ಲಿ ಇನ್ಯಾರಾರು ಇದ್ದಾರೆ ಎಂಬ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹುಡುಗಿ ಹೆಸರಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡಿ, ಸಂತ್ರಸ್ತರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಆನಂತರ ಅವರೊಂದಿಗೆ ವಾಟ್ಸ್ಯಾಪ್​ ಸಂಪರ್ಕದ ಮೂಲಕ ಇಲ್ಲದ ಸಲಿಗೆಯ ಮಾತನಾಡುತ್ತಾರೆ. ಬಳಿಕ ಕಥೆ ಕಟ್ಟಿ ಗೂಗಲ್ ಪೇ, ಪೋನ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸುತ್ತಾರೆ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಇದೆ ವಿಚಾರದಲ್ಲಿ ಸದ್ಯ ತುಮಕೂರು ಪೊಲೀಸರು ಇನ್ನಷ್ಟು ಆರೋಪಿಗಳ ಪತ್ತೆಯಲ್ಲಿ ತೊಡಗಿದ್ದಾರೆ.

ಈ ಆರೋಪಿಯು ಶರ್ಮಿಳಾ ಮತ್ತು ದಿವ್ಯಾ ಎಂಬ ಹೆಸರಿನಲ್ಲಿ ಫೇಸ್​ಬುಕ್ ಮೆಸೆಂಜರ್​ ಹಾಗೂ ವಾಟ್ಸ್ಯಾಪ್​ನಲ್ಲಿ ಸಂತ್ರಸ್ತ ಯುವಕನ್ನು ಪರಿಚಯ ಮಾಡುತ್ತಿದ್ದರಂತೆ. ಈತನ ಜೊತೆಗೆ ಇನ್ನೊಂದಿಷ್ಟು ಆರೋಪಿಗಳು ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಗನು ಈ ರೀತಿಯಲ್ಲಿ ಹಣ ಕಳೆದುಕೊಂಡು ಖಿನ್ನತೆಗೆ ಒಳಗಾಗಿರುವುದನ್ನು ಗಮನಿಸಿದ ತಂದೆ ಈ ಕುರಿತು ಕಳೆದ ಆಗಸ್ಟ್​ 15 ರಂದು ಸಿಇಎನ್​ ಪೊಲೀಸ್ ಸ್ಟೇಷನ್​ಗೆ ತುಮಕೂರಿನಲ್ಲಿ ದೂರು ನೀಡಿದ್ದರು. ಅದರ ಅನ್ವಯ ಪೊಲೀಸರು ಇದೀಗ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next