Advertisement

Theerthahalli: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆ ಸಂಭ್ರಮ ಆರಂಭ

05:29 PM Jan 03, 2024 | Pranav MS |

ತೀರ್ಥಹಳ್ಳಿ : ಮಲೆನಾಡಿನ ಹೆಬ್ಬಾಗಿಲು ತೀರ್ಥಹಳ್ಳಿಯ ಪುರಾಣ ಪ್ರಸಿದ್ದ ಶ್ರೀ ರಾಮೇಶ್ವರ ದೇವರ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ಜನವರಿ 11, 12,,13ರಂದು ಸುಮಾರು 18 ಲಕ್ಷ ರೂ ವೆಚ್ಚದಲ್ಲಿ ಅದ್ದೂರಿ ಜಾತ್ರೆ ನೆಡೆಸಲು ತೀರ್ಮಾನಿಸಲಾಗಿದೆ ಎಂದು ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ತಿಳಿಸಿದರು.

Advertisement

ಬುಧವಾರ ರಾಮೇಶ್ವರ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿ ಜ 11 ಕ್ಕೆ ತೀರ್ಥಸ್ನಾನ, 12 ಕ್ಕೆ ಬ್ರಹ್ಮರಥೋತ್ಸವ 13 ಕ್ಕೆ ಅದ್ದೂರಿ ತೆಪ್ಪೋತ್ಸವ ನೆಡೆಸಲು ನಿರ್ಧರಿಸಲಾಗಿದೆ.
ಮೂರು ದಿನಗಳ ವಿಜೃಂಭಣೆಯ ಜಾತ್ರಾ ಮಹೋತ್ಸವದಲ್ಲಿ ಬರುವ ಭಕ್ತರರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಜ.15 ಕ್ಕೆ ಮಕರ ಸಂಕ್ರಮಣ ರಥೋತ್ಸವ ನೆಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್. ಎಂ ಮಂಜುನಾಥ್ ಗೌಡರು, ತಹಸೀಲ್ದಾರ್ ಜಕ್ಕಣ್ಣ ಗೌಡರ್ ಭಾಗಿಯಾಗಲಿದ್ದಾರೆ.

ತೆಪ್ಪೋತ್ಸವದ ದಿನ ಶಿವಾಕಾಶಿಯ ಪರಿಣಿತರಿಂದ ಸಿಡಿಮದ್ದಿನ ಸಂಭ್ರಮ ಇರಲಿದೆ ಹಾಗೂ ದೇವತಾ ಕಾರ್ಯಗಳು ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದರು

ಕಾರ್ಯಕ್ರಮಗಳು ಏನೇನು?

Advertisement

ದಿನಾಂಕ 09-01-2024 ನೇ ಮಂಗಳವಾರ- ಶ್ರೀ ಗಣಪತಿ ಪೂಜೆ, ಪುಣ್ಯಾಹ, ಶತರುದ್ರಾಭಿಷೇಕ, ದೇವನಾಂದಿ, ಧ್ವಜಾರೋಹಣ, ಸಾಯಂಕಾಲ ರಂಗಪೂಜೆ, ಅಂಕುರಾರೋಪಣ, ಭೇರಿತಾಡನ, ಕೌತುಕ ಬಂಧನ, ಬಲಿ ಉತ್ಸವಗಳು ನಡೆಯಲಿದೆ.

ದಿನಾಂಕ 10-01-2024 ನೇ ಬುಧವಾರ- ಅಗ್ನಿಜನನ, ಅಧಿವಾಸ ಹೋಮ, ಮಹಾಪೂಜೆ, ಬಲಿ, ಸಂಜೆ 4-00 ಕ್ಕೆ ಪುರೋತ್ಸವ, ನಂತರ ರಂಗಪೂಜೆ, ಬಲಿ, ಸೇರಿ ಇತರ ಪೂಜೆ ನಡೆಯಲಿದೆ

ದಿನಾಂಕ 11-01-2024 ನೇ ಗುರುವಾರ- ಉಷಃ ಕಾಲದಲ್ಲಿ ಶ್ರೀ ಪರಶುರಾಮ ತೀರ್ಥಪೂಜೆ ತೀರ್ಥಾಭಿಷೇಕ ಮತ್ತು ತೀರ್ಥಸ್ಥಾನ
ಪ್ರಾತಃಕಾಲದಲ್ಲಿ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ, ಉತ್ಸವ ಹಾಗೂ ಸಂಜೆ : ರಂಗ ಪೂಜೆ : ರಾತ್ರಿ : ಬಲಿ ಉತ್ಸವ ನಡೆಯಲಿದೆ.

ದಿನಾಂಕ 12-01-2024 ನೇ ಶುಕ್ರವಾರ- ಬೆಳಗ್ಗೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಉತ್ಸವಬಲಿ, ಶುಭ ಅಭಿಜಿನ್ ಮಹೂರ್ತದಲ್ಲಿ
ಶ್ರೀ ಮನ್ಮಹಾರಥಾರೋಹಣ , ರಾತ್ರಿ- ಭೂತ ಬಲಿ, ಶಯನೋತ್ಸವ ನಡೆಯಲಿದೆ

ದಿನಾಂಕ 13-01-2024 ನೇ ಶನಿವಾರ- ಪ್ರಭೋದೋತ್ಸವ, ಚೂರ್ಣೋತ್ಸವ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಬಲಿ, ಸಾಯಂಕಾಲ: ಉತ್ಸವ, ರಾತ್ರಿ 7-00 ಕ್ಕೆ
ಅದ್ದೂರಿ ತೆಪ್ಪೋತ್ಸವ, ಸಂಧಾನ, ಪೂರ್ಣಾಹುತಿ, ಧ್ವಜ ಅವರೋಹಣ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 15-01-2024 ನೇ ಭಾನುವಾರ- ಶುಭ ಅಭಿಜಿನ್ ಮಹೂರ್ತದಲ್ಲಿ ಮಕರ ಸಂಕ್ರಾಂತಿ ರಥೋತ್ಸವ ನಡೆಯಲಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ಕುಕ್ಕೆ ಪ್ರಶಾಂತ್, ಕಿಶೋರ್, ಜಯಪ್ರಕಾಶ್ ಶೆಟ್ಟಿ, ಅಶೋಕ್ ಶೆಟ್ಟಿ, ನಯನ, ವಾಣಿ, ರತ್ನಾಕರ್ ಶೆಟ್ಟಿ, ಪದ್ಭಾನಾಬ್ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next