Advertisement

Theerthahalli: ಗುಂಡಿನ ಶಬ್ದ !? ಮಿಸ್ ಫೈರಿಂಗ್  !

01:19 PM Aug 05, 2023 | Team Udayavani |

ತೀರ್ಥಹಳ್ಳಿ : ತಾಲೂಕಿನ ಆರಗ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸನಗದ್ದೆಯ ಬಳಿ ಫೈರಿಂಗ್ ಆಗಿದ್ದು‌, ಗುಂಡು ಹೊಡೆತ ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು  ತಿಳಿದು ಬಂದಿದೆ.

Advertisement

ಪಟ್ಟಣದ ಆರಗದ ಸಮೀಪದ ದಾಸನಗದ್ದೆ ಗ್ರಾಮದಲ್ಲಿ ಆ.5ರ ಶನಿವಾರ ತಡರಾತ್ರಿ ರಾಕೇಶ್ ಎಂಬವರ ತೊಡೆಗೆ ಗುಂಡು ಹಾರಿದೆ. ಮಿಸ್ ಫೈರಿಂಗ್ ಆಗಿದೆ ಎಂಬ ಮಾಹಿತಿ  ಲಭ್ಯವಾಗಿದೆ.

ಮಾಹಿತಿ ಪ್ರಕಾರ ತೋಟಕ್ಕೆ ಗನ್‌ ತೆಗೆದುಕೊಂಡ ಹೋದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು, ಮಿಸ್ ಫೈರಿಂಗ್ ಆಗಿರಬಹುದು ಎಂದು ಹೇಳಾಗುತ್ತಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ರವರಿಂದ ತಿಳಿದು ಬರಬೇಕಿದೆ.  ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next