ದೊಡ್ಡಬಳ್ಳಾಪುರ: ರಂಗ ಚಟುವಟಿಕೆಗಳು ಒಂದು ಪ್ರದೇಶಕ್ಕೆ ಸೀಮಿತವಾಗದೇ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸ ಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ಭಾವೈಕ್ಯತೆಗೆ ನಾಂದಿಯಾಗಬೇಕಿದ್ದು,ಕಲಾವಿದರಲ್ಲಿ ಪರಸ್ಪರ ಸೌಹಾರ್ದತೆ ಬೆಸೆಯಬೇಕು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ವತಿಯಿಂದ ನಡೆದ ನಾಟ್ಯರಾಣಿ ಶಾಂತಲಾ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಶಾಂತಲಾ ಉತ್ಸವ ಮೊದಲಾದ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿರಬೇಕು. ಕಲಾಭವನ ನವೀಕರಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ತಾಲೂಕು ಕಲಾವಿದರ ಸಂಘದ ಗೌರವ ಅಧ್ಯಕ್ಷ ಎಸ್.ರಾಮಮೂರ್ತಿ ಮಾತನಾಡಿ, ನಾಟ್ಯರಾಣಿ ಶಾಂತಲೆ ಅಪ್ರ ತಿಮ ಭರತನಾಟ್ಯ ಕಲಾವಿದೆಯಾಗಿದ್ದರು. ಜೊತೆಗೆ ಶಿಲ್ಪಕಲೆ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದರು. ಇಂತಹ ಕಲಾವಿ ದೆಯ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅರ್ಥ ಪೂರ್ಣವಾಗಿದೆ.ದೊಡ್ಡಬಳ್ಳಾಪುರ- ಚಿಕ್ಕಬಳ್ಳಾಪುರ ಊರುಗಳಿಗೂ ಹೊಯ್ಸಳ ವಂಶದ ಪ್ರಭಾವವಿದ್ದು, ಇಲ್ಲಿನ ಕಲೆ ಪರಂ ಪರೆಗಳಿಗೆ ಸ್ಫೂರ್ತಿಯಾಗಿದೆ ಎಂದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಲಾವಿದರ ಸಂಘದ ಗೌ.ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ತಾಲೂಕು ಕಲಾವಿ ದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಚಂದ್ರಶೇಖರ್, ಉಪಾಧ್ಯಕ್ಷರಾದ ಕೆ.ನರಸಿಂಹಯ್ಯ, ಎಚ್.ಪ್ರಕಾಶ್ ರಾವ್, ಖಜಾಂಚಿ ಎಚ್.ಮುನಿಪಾಪಯ್ಯ, ಜಂಟಿ ಕಾರ್ಯದರ್ಶಿ ಟಿ.ಆರ್.ಮುದ್ದುಕೃಷ್ಣಪ್ಪ, ಸಹ ಕಾರ್ಯದರ್ಶಿ ನಾಗದೇನಹಳ್ಳಿ ಮಂಜುನಾಥ್, ಹಿರಿಯ ಕಲಾವಿದರಾದ ಎಂ.ವೆಂಕಟರಾಜು, ಮುನಿರಾಜು, ಎನ್ .ವೆಂಕಟೇಶ್, ನಾಟಕ ನಿರ್ದೇಶಕರಾದ ಟಿ.ವಿ.ಕೃಷ್ಣಪ್ಪ, ಬಸವರಾಜಯ್ಯ, ಆನಂದಮೂರ್ತಿ ಇತರರಿದ್ದರು. ಕಾರ್ಯಕ್ರಮದ ಅಂಗವಾಗಿ ತಾಲೂಕು ಕಲಾವಿದರಿಂದ ರಂಗಗೀತೆ, ಭಕ್ತಿಗೀತೆ ಗೀತಗಾಯನ ಮೊದಲಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.