Advertisement

ರಂಗಭೂಮಿ ಹಲವುಗಳ ಸೃಷ್ಟಿಕರ್ತ: ಜೆ.ಲೋಕೇಶ್‌

11:55 AM Nov 22, 2017 | |

ಬೆಂಗಳೂರು: ರಂಗಭೂಮಿ ಹಲವುಗಳ ಸೃಷ್ಟಿ ಕರ್ತ. ಎಲ್ಲವನ್ನೂ ಇದು ಕಲಿಸುತ್ತೇ. ಹೀಗಾಗಿ ಮಕ್ಕಳು ಮೊಬೈಲ್‌, ಟಿವಿ ಸಂಸ್ಕೃತಿಯನ್ನು ಬಿಟ್ಟು, ರಂಗಭೂಮಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್‌ ಸಲಹೆ ನೀಡಿದರು. ನಗರದಲ್ಲಿ ಮಂಗಳವಾರ ಜೆಎಸ್‌ಎಸ್‌ ಮಹಾವಿದ್ಯಾಪೀಠ ಶಿವರಾತ್ರೀಶ್ವರ ಕೇಂದ್ರಲ್ಲಿ ಆಯೋಜಿಸಿದ್ದ, ಜೆಎಸ್‌ಎಸ್‌ ರಂಗೋತ್ಸವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಮನುಷ್ಯ ಬೆಳಕಿಲ್ಲದ ದಾರಿಯಲ್ಲಿ ಸಾಗಬಹುದು. ಆದರೆ ಕನಸುಗಳೇ ಇಲ್ಲದ ದಾರಿಯಲ್ಲಿ ನಡೆಯುವುದು ಅಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಭವಿಷತ್ತಿನ ಕನಸು ಕಾಣಬೇಕು. ಆರೋಗ್ಯಕರವಾದ ಕನಸು ಕಂಡಾಗ ಮಾತ್ರ ನಮ್ಮನ್ನು ನಾವು ಸೃಷ್ಟಿಸಿಕೊಳ್ಳಬಹುದು. ಚಂದ್ರಲೋಕಕ್ಕೂ ತೆರಳಬಹುದು ಎಂದರು.

ಮಕ್ಕಳು ಇಂದು ಮೊಬೈಲ್‌ ಸಂಸ್ಕೃತಿಕೆಗೆ ಒಗ್ಗಿಕೊಂಡಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದರಿಂದ ದೊರವಿರಲು ಮಕ್ಕಳು ರಂಗಭೂಮಿಯತ್ತ ಚಿತ್ತಹರಿಸಬೇಕು. ಪ್ರತಿಯೊಬ್ಬರಲ್ಲಿ ಒಂದೊಂದು ಪ್ರತಿಭೆ ಹುದುಗಿದ್ದು ಅದನ್ನು ನಾವೇ ಹೊರತಗಿಯಬೇಕು. ಮುಂದಿನ ಪೀಳಿಗೆಯ ಮಾರ್ಗದಶಕರಾಗುವ ವಿದ್ಯಾರ್ಥಿಗಳು ಹೊಸತರತ್ತ ಚಿತ್ತ ಹರಿಸಿ ಎಂದು ತಿಳಿಸಿದರು.

ಅಖೀಲಭಾರತ ಶರಣ ಸಾಹಿತ್ಯ ಪರಿಷತ್‌ ಬೆಂಗಳೂರು ಘಟಕದ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ನಾಟಕ ರಂಗವು ಬಿ.ವಿ.ಕಾರಂತ, ಪ್ರೇಮಕಾರಂತ ಸೇರಿದಂತೆ ಹಲವು ದಿಗ್ಗಜರನ್ನು ಹುಟ್ಟುಹಾಕಿತು. ಈ ಮಹಾನ್‌ ಕಲಾವಿದರು ಮಕ್ಕಳ ರಂಗಭೂಮಿಯನ್ನು ಹುಟ್ಟುಹಾಕಿದರು.

ಆದರೆ ಇಂದು ಮಕ್ಕಳು ರಂಗಭೂಮಿಯತ್ತ ಆಸಕ್ತಿ ತೋರುತ್ತಿಲ್ಲ. ಅಪಾಯಕಾರಿ ವಸ್ತುಗಳನ್ನಿಟ್ಟುಕೊಂಡು ಜೀವನ ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಕಾಲೇಜು ರಂಗೋತ್ಸವದಂತೆ ಮಕ್ಕಳ ನಾಟಕೋತ್ಸವದ ಕಡೆಗೂ ಹೆಚ್ಚು ಗಮನ ನೀಡುವಂತೆ ಒತ್ತಾಯಿಸಿದರು.

Advertisement

ಕೆಲವು ನಿರ್ದೇಶಕರು ಬರೀ ಪೌರಾಣಿಕ ಕಥಾವಸ್ತುಗಳನ್ನು ರಂಗದ ಮೇಲೆ ಇಡುತ್ತಿದ್ದಾರೆ. ಇದರ ಜೊತೆ ರಂಗಭೂಮಿಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಳ್ಳಬೇಕು. ವಾಸ್ತವದ ವಿಷಯಗಳನ್ನಿಟ್ಟುಕೊಂಡೇ ನಾಟಕಗಳನ್ನು ಸೃಷ್ಟಿಸಿ ರಂಗ ಭೂಮಿಯ ಮೇಲೆ ಪ್ರಯೋಗ ಮಾಡಬೇಕು ಆಗ ಹೊಸತರ ಅವಿರ್ಭವ ಸಾಧ್ಯ ಎಂದರು. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಗೌರವ ಸಲಹೆಗಾರ, ಡಾ.ಗೊ.ರು.ಚನ್ನಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next