ದೇವದತ್ತನನ್ನು ಮುಂದಿಟ್ಟುಕೊಂಡು ಬೌದ್ಧ ಭಿಕ್ಷುಗಳು ಯಾತ್ರೆ ಹೊರಟಿದ್ದರು. ಒಂದು ಘೋರ ಕಾನನದ ನಡುವಿನ ದಾರಿ. ದರೋಡೆಕೋರನೊಬ್ಬ ಅವರನ್ನು ತಡೆದ. “”ನಿಮ್ಮಲ್ಲಿರುವುದನ್ನು ಕೊಡಿ. ಇಲ್ಲದಿದ್ದರೆ ತಲೆಯೊಡೆಯುತ್ತೇನೆ” ಎಂದ. ದೇವತ್ತ ಏನೂ ಹೆದರದೆ ಹೇಳಿದ, “”ತಲೆಯೊಡೆಯಲು ನಮ್ಮಲ್ಲಿ ಅಂಥಾದ್ದೇನಿದೆ? ನಿನಗೆ ಕೊಡುವುದಕ್ಕೆ ನಮ್ಮಲ್ಲೇನೂ ಇಲ್ಲ”.
“”ಏನೂ ಇಲ್ಲವೆಂದು ಸುಳ್ಳು ಹೇಳಬೇಡಿ, ಪ್ರಾಣ ಹೋದೀತು, ಎಚ್ಚರಿಕೆ” “”ನಮ್ಮಲ್ಲಿ ಏನೂ ಇಲ್ಲವೆಂದು ಹೇಳಲಾರೆವು. ರಕ್ತಮಾಂಸಗಳಿಂದ ಕೂಡಿದ ದೇಹವಿದೆ. ಉಟ್ಟ ಕೌಪೀನ ಇದೆ. ಜೋಳಿಗೆ ಇದೆ. ಜೋಳಿಗೆಯಲ್ಲಿ ದಾರಿಗೆ ಬೇಕಾದ ಆಹಾರ ಇದೆ. ಜೋಳಿಗೆಯಲ್ಲಿ ದಾರಿಗೆ ಬೇಕಾದ ಆಹಾರ ಇದೆ. ಅವಷ್ಟನ್ನು ನಿನಗೆ ಕೊಡಬಹುದು. ಆದರೆ, ಅದಷ್ಟೇ ಅಲ್ಲ ; ಇದೆ… ಆದರೆ, ಅದನ್ನು ನಿನ್ನಂಥವನಿಗೆ ಕೊಟ್ಟರೆ ತೂತುಪಾತ್ರದಲ್ಲಿ ನೀರು ತುಂಬಿಸಿದ ಹಾಗಾದೀತು!”
ಕಳ್ಳನಿಗೆ ಸಿಟ್ಟು ಅಧಿಕವಾಯಿತು. “”ಒಗಟು ಮಾತು ಬೇಡ, ನಿಮ್ಮ ತಲೆಯೊಡೆದೇ ಸಿದ್ಧ” ಎಂದು ಅಬ್ಬರಿಸಿದ. “”ಈ ರೀತಿ ಮಾಡಲು ನಿನ್ನ ಆತ್ಮಸಾಕ್ಷಿ ಒಪ್ಪುತ್ತದೆಯೇ? ಒಪ್ಪುತ್ತದೆಯಾದರೆ ನಮ್ಮ ತಲೆಯೊಡೆಯುವಿಯಂತೆ, ನಮ್ಮದೇನೂ ಆಕ್ಷೇಪವಿಲ್ಲ.”
ಕಳ್ಳ ತಲೆ ಒಡೆಯಲು ದೊಣ್ಣೆ ಎತ್ತಿದ. ಅವನ ಕೈ ಅಲ್ಲಿಯೇ ಸ್ಥಗಿತವಾಯಿತು. ಕೈಯನ್ನು ಅಲುಗಿಸಲೂ ಸಾಧ್ಯವಾಗಲಿಲ್ಲ. ನಿಂತಲ್ಲಿಯೇ ಕುಸಿದ. “”ನಿಮ್ಮಲ್ಲೇನೂ ಮಹಾಶಕ್ತಿ ಇರಬೇಕು. ನನ್ನದು ಸರ್ವಥಾ ತಪ್ಪಾಯ್ತು, ಕ್ಷಮಿಸಿ, ಮಹಾನುಭಾವರೇ” ಎಂದು ಅಳುತ್ತ ಅಂಗಲಾಚಿದ.
“”ನಮ್ಮಲ್ಲೇನೂ ಮಹಾಶಕ್ತಿಯಿಲ್ಲ. ನಿನ್ನ ಪಾಪ ಅಧಿಕವಾಯಿತು. ಪಾಪ ಹೆಚ್ಚಾದರೆ ಮನುಷ್ಯ ತನ್ನಿಂತಾನೇ ದುರ್ಬಲನಾಗುತ್ತ ಹೋಗುತ್ತಾನೆ. ನಿನ್ನ ಸ್ಥಿತಿಯೂ ಹಾಗೆಯೇ ಆಯಿತು” ಎಂದ ದೇವದತ್ತ.
“”ಪಾಪವೆಂದರೆ ಏನು ಮಹಾನುಭಾವ?” ಕಳ್ಳ ಕೇಳುತ್ತಾನೆ ದೈನ್ಯಭಾವದಿಂದ.
“”ಅವರವರ ಆತ್ಮಸಾಕ್ಷಿಯ ವಿರುದ್ಧವಾಗಿ ಏನು ಮಾಡಿದರೂ ಅದು ಪಾಪವೇ”