Advertisement

ಯುವಕನ ಹೃದಯ ಸಾಗಣೆ

11:41 AM Jan 21, 2017 | |

ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡ ಯುವಕನೊಬ್ಬನ ಹೃದಯವನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯಿಂದ ನಾರಾಯಣ ಹೆಲ್ತ್‌ ಸಿಟಿಗೆ ರವಾನೆಯಾಗಿದ್ದು, 56 ವರ್ಷದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪಿಯು ವಿದ್ಯಾರ್ಥಿಯಾಗಿದ್ದ 17 ವರ್ಷದ ಯುವಕ ಜ.12ರಂದು ಜೆ.ಪಿ.ನಗರ ಬಳಿ ರಸ್ತೆ ಅಪಘಾತಕ್ಕೀಡಾಗಿದ್ದ.

Advertisement

ತಕ್ಷಣ ಆತನನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಜ.19ರಂದು ಮೆದುಳು ನಿಷ್ಕಿೃಯಗೊಂಡಿತು. ಈ ಬಗ್ಗೆ ಮಾಹಿತಿ ಪಡೆದ ಝೆಡ್‌ಸಿಸಿಕೆ ಸದಸ್ಯರು ಅಂಗಾಂಗ ದಾನಕ್ಕೆ ಮೃತ ಯುವಕನ ಪೋಷಕರ ಮನವೊಲಿಸಿದರು. ಯುವಕನ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ದೊಮ್ಮಲೂರಿನ ನಿವಾಸಿ 56 ವರ್ಷದ ವ್ಯಕ್ತಿಗೆ ಹೃದಯ ಅಳವಡಿಸಲು ಸಿದ್ಧತಾ ಕಾರ್ಯಗಳನ್ನು ನಡೆಸಲಾಯಿತು.

ಸಂಚಾರ ಪೊಲೀಸರ ನೆರವಿನೊಂದಿಗೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, 25 ಕಿ.ಮೀ. ದೂರ ಕೇವಲ 19 ನಿಮಿಷದಲ್ಲಿ ಹೃದಯವನ್ನು ತಲುಪಿಸಲಾಯಿತು. ಕಿಡ್ನಿ, ಕಾರ್ನಿಯಾ, ಯಕೃತ್‌ ಅನ್ನು ದಾನ ಮಾಡಲಾಗಿದ್ದು, ಇನ್ನು ಯಾರಿಗೆ ನೀಡಬೇಕು ಎಂಬುದು ನಿರ್ಧರಿಸಿಲ್ಲ. ಒಂದು ಕಿಡ್ನಿ ಮಾತ್ರ ಫೋರ್ಟಿಸ್‌ ಆಸ್ಪತ್ರೆಯಲ್ಲಿನ 44 ವರ್ಷದ ವ್ಯಕ್ತಿಗೆ ಬಳಕೆ ಮಾಡಲಾಗಿದೆ. ತಜ್ಞ ವೈದ್ಯ ಡಾ.ಮೋಹನ್‌ ಕೇಶವಮೂರ್ತಿ ನೇತೃತ್ವದ ವೈದ್ಯಕೀಯ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next