Advertisement

ವಿದ್ಯುತ್‌ ಕಾರುಗಳ ಯುಗಾರಂಭ

11:30 AM Jun 09, 2020 | mahesh |

ಜಗತ್ತು ಈಗ ಮತ್ತೆ ಸಂಪೂರ್ಣ ಪರಿಸರ ಸ್ನೇಹಿಯಾಗಲು ಹೊರಟಿದೆ. ಅದಕ್ಕೆ ಪೂರಕವಾಗಿ ಹೊಗೆಯುಗಳದ ವಾಹನಗಳು ರಸ್ತೆಗಿಳಿಯಬೇಕು ಎನ್ನುವುದು ಎಲ್ಲರ ಬಯಕೆ. ಪೆಟ್ರೋಲ್‌, ಡೀಸೆಲ್‌ ವಾಹನಗಳಿಂದ ವಿಪರೀತ ಹೊಗೆ ಬರುವುದರಿಂದ ವಿದ್ಯುತ್‌ ಚಾಲಿತ ವಾಹನಗಳಿಗೆ ಬೇಡಿಕೆ ಶುರುವಾಗಿದೆ. ಇದರ ಮಧ್ಯೆ ತಾಂತ್ರಿಕವಾಗಿ ಬಲಿಷ್ಠ ವಾಗಿರುವ, ಸಂಪೂರ್ಣ ಪರಿಸರಸ್ನೇಹಿಯಾಗಿರುವ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಜೋರಾಗಿ ಸಾಗಿದೆ. 2021ರೊಳಗೆ ಭಾರತದಲ್ಲಿ ಕಾರ್ಯಾರಂಭ ಮಾಡಲು ಸಜ್ಜಾಗಿರುವ ವಾಹನಗಳ ವಿವರ ಇಲ್ಲಿದೆ.

Advertisement

ವಿದ್ಯುತ್‌ ವಾಹನಗಳು ಯಾಕೆ ಬೇಕು?
● ಪೆಟ್ರೋಲ್‌, ಡೀಸೆಲ್‌ ವಾಹನಗಳಿಂದ ಬರುವ ಹೊಗೆಯಿಂದ ವಾಯುಮಾಲಿನ್ಯ ವಿಪರೀತವಾಗಿದೆ.
● ಹೊಗೆಯುಗುಳುವ ವಾಹನಗಳಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಮಹಾನಗರಗಳು ರೋಗಗ್ರಸ್ತವಾಗುತ್ತಿವೆ.
● ಪೆಟ್ರೋಲ್‌, ಡೀಸೆಲ್‌ ಯಾವತ್ತಿದ್ದರೂ ಮುಗಿದುಹೋಗುವ ತೈಲಗಳು, ಅವುಗಳ ಮೇಲೆ ದೀರ್ಘಾವಧಿ ಅವಲಂಬಿಸಲು ಸಾಧ್ಯವಿಲ್ಲ.

ಅಡ್ಡಿಗಳೇನು?
● ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ವಿದ್ಯುತ್‌ ಚಾಲಿತ ವಾಹನಗಳನ್ನು ರಸ್ತೆಗಿಳಿಸುವಷ್ಟು ತಾಂತ್ರಿಕ ಶ್ರೀಮಂತಿಕೆ ಹೊಂದಿಲ್ಲ.
● ಇಂತಹ ವಾಹನಗಳನ್ನು ಚಾರ್ಜ್‌ ಮಾಡಲು ಬೇಕಾದ ವ್ಯವಸ್ಥೆ ಭಾರತದಲ್ಲಿ ಇಲ್ಲವೇ ಇಲ್ಲ ಎನ್ನುವ ಮಟ್ಟದಲ್ಲಿದೆ.
● ವಾಹನಗಳೂ ತಾಂತ್ರಿಕವಾಗಿ ಬಲಿಷ್ಠವಾಗಿಲ್ಲ. ವಾಹನಗಳ ಬ್ಯಾಟರಿಗಳೂ ಇದುವರೆಗೆ ಹೇಳಿಕೊಳ್ಳುವಷ್ಟು ಸಕ್ಷಮತೆ ತೋರಿಲ್ಲ.

ಸಿದ್ಧವಾಗಿರುವ ಕಾರುಗಳು
ಟಾಟಾ ಅಲ್ಟ್ರೋಜ್‌
ಈ ಕಾರನ್ನು 2019ರಲ್ಲಿ ಒಮ್ಮೆ ಪ್ರದರ್ಶನ ಮಾಡಲಾಗಿತ್ತು. ಟಾಟಾ ಸಂಸ್ಥೆ, ಜಿಪಾನ್‌ ಪವರ್‌ ಟೈನ್‌ ತಂತ್ರಜ್ಞಾನ ಬಳಸಿ ಈ ಕಾರು ತಯಾರಿಸಿದೆ. ಒಮ್ಮೆ ಚಾರ್ಜ್‌ ಮಾಡಿದರೆ 250 ಕಿ.ಮೀ. ಸಂಚರಿಸಬಹುದು. 8 ವರ್ಷ ವಾರಂಟಿ ಇರುವ ಲಿಥಿಯಮ್‌ ಐಯಾನ್‌ ಬ್ಯಾಟರಿ ಹೊಂದಿದೆ.

ಮಹೀಂದ್ರ ಇಎಕ್ಸ್‌ಯುವಿ300
2020ರ ಆಟೋ ಎಕ್ಸ್‌ಪೋದಲ್ಲಿ ಇದು ಮೊದಲ ಬಾರಿ ಕಾಣಿಸಿಕೊಂಡಿತ್ತು. ಮಹೀಂದ್ರದ  ಬಹು ನಿರೀಕ್ಷಿತ ಕಾರೂ ಹೌದು. ಎರಡು ಮಾದರಿಯಲ್ಲಿ ಈ ಕಾರು
ತಯಾರಾಗಿದೆ. ಒಮ್ಮೆ ಚಾರ್ಜ್‌ ಮಾಡಿದರೆ 250ರಿಂದ 300 ಕಿ.ಮೀ. ಸಂಚರಿಸಬಲ್ಲ ಒಂದು ಕಾರು, 350ರಿಂದ 400 ಕಿ.ಮೀ. ಸಂಚರಿಸಬಲ್ಲ ಇನ್ನೊಂದು ಕಾರೂ ಇದೆ. ಇದೂ ಕೂಡಾ ಲಿಥಿಯಮ್‌ ಐಯಾನ್‌ ಬ್ಯಾಟರಿ ಹೊಂದಿದೆ.

Advertisement

ಜಾಗ್ವಾರ್‌ ಐ-ಪೇಸ್‌
ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಈ ಕಾರು ಲಭ್ಯವಿದೆ. 2019ರಲ್ಲಿ ಜಾಗತಿಕ ಕಾರು ಪ್ರಶಸ್ತಿಯಲ್ಲಿ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.
ಅಂದಿನಿಂದಲೇ ಗ್ರಾಹಕರು ಇದರ ಮೇಲೆ ಕಣ್ಣಿಟ್ಟಿದ್ದಾರೆ. ಒಮ್ಮೆ ಚಾರ್ಜ್‌ ಮಾಡಿದರೆ ಗರಿಷ್ಠ 480 ಕಿ.ಮೀ. ಓಡಿಸಬಹುದು.

ಆಡಿ ಇ-ಟ್ರಾನ್‌
ಈ ಕಾರು ಈಗಾಗಲೇ ಭಾರತ ಪ್ರವೇಶಿಸಿದೆ. ಆದರೆ ಕೊರೊನಾ ಕಾರಣ ರಸ್ತೆಗಿಳಿಯಲು 2021ರವರೆಗೆ ಕಾಯ ಬೇಕಾಗಬಹುದು. 265 ಕಿ.ವ್ಯಾ.
ಸಾಮರ್ಥಯದ ಬ್ಯಾಟರಿ ಹೊಂದಿದೆ. ಒಮ್ಮೆ ಚಾರ್ಜ್‌ ಮಾಡಿದರೆ 400 ಕಿ.ಮೀ. ಸಂಚರಿಸಬಹುದು. 200 ಕಿ.ಮೀ. ವೇಗದಲ್ಲಿ ಸಂಚರಿಸುವ ತಾಕತ್ತು ಹೊಂದಿದೆ.

ಮರ್ಸಿಡಿಸ್‌ ಬೆಂಜ್‌ ಇಕ್ಯೂಸಿ
ಈ ಕಾರು ಇದೇ ವರ್ಷ ಭಾರತ ಪ್ರವೇಶಿಸಲಿದೆ. ಗಂಟೆಗೆ 80 ಕೆಡಬ್ಲ್ಯೂಎಚ್‌ ಸಾಮರ್ಥಯದ ಲಿಥಿಯಮ್‌ ಐಯಾನ್‌ ಬ್ಯಾಟರಿ ಹೊಂದಿದೆ. ಒಮ್ಮೆ ಚಾರ್ಜ್‌
ಮಾಡಿದರೆ ಗರಿಷ್ಠ 400 ಕಿ.ಮೀ. ಸಂಚರಿಸಬಹುದು.

ಪೋರ್ಶೆ ಟಯ್ಕನ್‌
ಈ ಐಷಾರಾಮಿ ಕಾರು ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ಆರಂಭದಲ್ಲಿ ಭಾರತ ಪ್ರವೇಶಿಸಬಹುದು. 2020ರಲ್ಲಿ ಇದಕ್ಕೆ ಎರಡು ಜಾಗತಿಕ ಕಾರು
ಪ್ರಶಸ್ತಿ ಬಂದಿದೆ. ಈ ಕಾರನ್ನು ಒಮ್ಮೆ ಚಾರ್ಜ್‌ ಮಾಡಿದರೆ ಗರಿಷ್ಠ 500 ಕಿ.ಮೀ.ವರೆಗೆ ಪ್ರಯಾಣಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next