ಒಂದು ಕಪ್ ಅಲಸಂಡೆಕಾಳು
ಅರ್ಧ ಕಪ್ ಈರುಳ್ಳಿ ಚೂರು
2 ಚಮಚ ಕೊತ್ತಂಬರಿಸೊಪ್ಪು
1 ಎಸಳು ಕರಿಬೇವು
ಅರ್ಧ ಚಮಚ ಜೀರಿಗೆ
2-3 ಹಸಿಮೆಣಸು
ಕರಿಯಲು ಬೇಕಾದಷ್ಟು ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು.
Advertisement
ಅಲಸಂಡೆ ಕಾಳನ್ನು ರಾತ್ರಿಯಿಡೀ ನೆನೆಸಿಡಬೇಕು. ಮರುದಿನ ಕಾಳನ್ನು ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಈರುಳ್ಳಿ , ಕೊತ್ತಂಬರಿ ಸೊಪ್ಪು, ಜೀರಿಗೆ, ಕರಿಬೇವಿನ ಎಲೆ, ಹಸಿ ಮೆಣಸು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಅದನ್ನು ಅಲಸಂಡೆ ಕಾಳಿನ ಮಿಶ್ರಣಕ್ಕೆ ಹಾಕಿ ಕಲಸಬೇಕು. ಬಳಿಕ ಅದನ್ನು ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ವಡೆಯಂತೆ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಹುರಿದು ತೆಗೆಯಬೇಕು.