Advertisement
ಸದ್ಯ ಜಗತ್ತಿನಲ್ಲೇ ಇಂತಹ ವಿಮಾನ ನಿಲ್ದಾಣ ಇಲ್ಲ ಎಂದು ಹೇಳಲಾಗಿದೆ. ಅಮೆರಿಕ ಜಗತ್ತಿನಲ್ಲೇ ಅತಿ ದೊಡ್ಡ ವೈಮಾನಿಕ ಮಾರುಕಟ್ಟೆಯಾಗಿದ್ದು, ಅದಕ್ಕೆ ಸಡ್ಡು ಹೊಡೆಯುವಂತೆ ಬೀಜಿಂಗ್‌ನ ಈ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.173 ಎಕರೆಯಲ್ಲಿ ಬೀಜಿಂಗ್ ಡಾಕ್ಸಿಂಗ್ ಅಂ.ರಾ. ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ಬರೋಬ್ಬರಿ 80,460 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದರ ಗಾತ್ರ ಸುಮಾರು 100 ಫುಟ್ಬಾಲ್ ಕ್ರೀಡಾಂಗಣಕ್ಕೆ ಸಮವಾಗಿದೆ. ಸ್ಟಾರ್‌ಫಿಶ್ ಮಾದರಿಯಲ್ಲಿ ವಾಸ್ತು ಹೊಂದಿದೆ. ಇದನ್ನು ಇರಾಕ್-ಬ್ರಿಟಿಷ್ ವಾಸ್ತುಶಿಲ್ಪಿ ಝಹಾ ಹದೀದ್ ಅವರು ವಿನ್ಯಾಸ ಮಾಡಿದ್ದಾರೆ. ವಿಮಾನ ನಿಲ್ದಾಣದ ಕೆಳಭಾಗದಲ್ಲಿ ರೈಲು ನಿಲ್ದಾಣವಿದ್ದು, ಬೀಜಿಂಗ್ ನಗರವನ್ನು ಕೇವಲ 20 ನಿಮಿಷಲ್ಲಿ ತಲುಪಬಹುದು. ಕೇವಲ ನಾಲ್ಕೇ ವರ್ಷದಲ್ಲಿ ಈ ನಿಲ್ದಾಣ ನಿರ್ಮಾಣವಾಗಿದೆ. 2014 ಡಿ.26ರಂದು ಇದರ ಕೆಲಸ ಶುರುವಾಗಿತ್ತು.
2050 ವರ್ಷವನ್ನು ಗಮನದಲ್ಲಿಟ್ಟುಕೊಂಡು, ಆ ವೇಳೆಗೆ ಇರಬಹುದಾದ ಪ್ರಯಾಣಿಕರ ದಟ್ಟಣೆ ಪರಿಗಣಿಸಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಇದರಲ್ಲಿ ದೇಶೀಯ ಮತ್ತು ಅಂ.ರಾ. ವಿಮಾನ ನಿಲ್ದಾಣವಿದ್ದು, ಪ್ರತಿ ವರ್ಷ 1 ಟರ್ಮಿನಲ್‌ನಲ್ಲಿ 10 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
Related Articles
ಸದ್ಯ ಅಮೆರಿಕದ ಅಟ್ಲಾಂಟಾ ಮತ್ತು ಬೀಜಿಂಗ್‌ನ ಈಗಿನ ವಿಮಾನ ನಿಲ್ದಾಣಗಳು ಜಗತ್ತಿನಲ್ಲೇ ಅತಿ ನಿಬಿಡ ವಿಮಾನ ನಿಲ್ದಾಣಗಳಾಗಿದ್ದು ವಾರ್ಷಿಕ 10 ಕೋಟಿ ಪ್ರಯಾಣಿಕರ ನಿರ್ವಹಣೆ ಮಾಡುತ್ತಿದೆ.
Advertisement