Advertisement

ಮೋದಿ ಆಡಳಿತಕ್ಕೆ ಇಡಿ ವಿಶ್ವವೇ ಬೆರಗಾಗಿದೆ: ಪಾಟೀಲ

06:39 PM Sep 28, 2021 | Nagendra Trasi |

ಇಂಡಿ: ದೇಶದ ಏಳ್ಗೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅನನ್ಯವಾಗಿದ್ದು ತಮ್ಮ ಆಡಳಿತಾವಧಿಯಲ್ಲಿ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.

Advertisement

ಚಿಕ್ಕಮಣೂರ ಗ್ರಾಮದ ಭೀಮಾನದಿ ಪಾತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಸೇವೆ ಮತ್ತು ಸಮರ್ಪಣಾ ಕಾರ್ಯಕ್ರಮದಲ್ಲಿ ಭೀಮಾನದಿ ಸ್ವತ್ಛತೆಯಲ್ಲಿ ಪಾಲ್ಗೊಂಡು ನಂತರ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಮೋದಿಯವರ ಆಡಳಿತಕ್ಕೆ ಇಡಿ ವಿಶ್ವವೇ ಬೆರಗಾಗಿದೆ. ವಿದೇಶ ಪ್ರವಾಸ ಕೈಗೊಂಡು ಅನೇಕ ಉದ್ಯಮಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿದ್ದಾರೆ. ಅನೇಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿವೆ. ಇದರಿಂದಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಲಭಿಸಲಿದೆ ಎಂದರು.

ದೇಶ ಅಭಿವೃದ್ಧಿ ಹೊಂದುತ್ತಿದ್ದು ಯುವ ಜನಾಂಗವೆಲ್ಲ ಮೋದಿಯವರಿಗೆ ಬೆಂಬಲಿಸುತ್ತಿದ್ದಾರೆ. ಹೀಗಾಗಿ ಎದುರಿನ ಪಕ್ಷಗಳಿಗೆ ಅ ಕಾರ ಸಿಗುವುದೇ ಇಲ್ಲ
ಎಂಬುದು ಸ್ಪಷ್ಠವಾಗಿ ಗೊತ್ತಾಗಿ ಬಿಟ್ಟಿದೆ ಎಂದು ವ್ಯಂಗ್ಯವಾಡಿದರು. ಶೀಘ್ರದಲ್ಲೇ ತಾಪಂ ಹಾಗೂ ಜಿಪಂ ಚುನಾವಣೆಗಳು ಬರಲಿದ್ದು ಕಾರ್ಯಕರ್ತರು ಸಕ್ರೀಯವಾಗಿ ಪಕ್ಷ ಬಲವರ್ಧನೆಗೆ ಶ್ರಮಿಸಬೇಕು. ಜಿಲ್ಲೆಯ ಪ್ರತಿಶತ 80ಕ್ಕಿಂತ ಹೆಚ್ಚು ಸ್ಥಾನಗಳು ಬಿಜೆಪಿಗೆ ಲಭಿಸಬೇಕು. ಅದಕ್ಕೆ ಕಾರ್ಯಕರ್ತರ ಸಕ್ರೀಯತೆ ಅವಶ್ಯವಾಗಿದ್ದು ಇಂದಿನಿಂದಲೇ ಎಲ್ಲರೂ ಕಾರ್ಯೋನ್ಮುಖರಾಗೋಣ ಎಂದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಅನಿಲ ಜಮಾದಾರ, ಸಿದ್ದು ಬುಳ್ಳಾ ಮತ್ತಿತರರು ಮಾತನಾಡಿದರು.

ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ, ಬಿಜೆಪಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ರಾಜಕುಮಾರ ಸಗಾಯಿ, ಸ್ವತಂತ್ರ ಸಿಂಧೆ, ಭೀಮಸಿಂಗ ರಾಠೊಡ, ಅನೀಲಗೌಡ ಬಿರಾದಾರ, ಸೋಮು ನಿಂಬರಗಿಮಠ, ಶಾಂತು ಬಿರಾದಾರ, ಶಿವಯೋಗಿ ರೂಗಿಮಠ, ಶಾಂತು ಕಂಬಾರ, ಭೀಮಾಶಂಕರ ಆಳೂರ ಸೇರಿದಂತೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next