Advertisement
ಪಟ್ಟಣದ ಸಮೀಪದ ಕಾವಲಹೊಸಹಳ್ಳಿ ಅರಿವಿನ ಮಂದಿರದಲ್ಲಿ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವೇದಾದ್ರಿ ಮಹರ್ಷಿ ಅವರ ಧರ್ಮಪತ್ನಿ ಮಾತೆ ಲೋಗಾಂಬಾಳ್ ಅವರ 103ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಪತ್ನಿ ಪ್ರಶಂಸಾ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್‌ನ ಉಪಾಧ್ಯಕ್ಷ ಉಮಾಪತಿ ಮಾತನಾಡಿ, ನಾವು ಸುಮಾರು 15 ವರ್ಷಗಳಿಂದ “ಪತ್ನಿ ಪ್ರಶಂಸಾ ದಿನದಚರಣೆಮಾಡಿಕೊಂಡು ಬಂದಿದ್ದೇವೆ. ತಾಯಿ ದಿನ, ಮಕ್ಕಳ ದಿನ, ತಂದೆ ದಿನ, ಪರಿಸರ ದಿನ ಹೀಗೆ ಹಲುವು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ವೇದಾದ್ರಿ ಮಹರ್ಷಿ ಅವರ ಚಿಂತನೆಯ ಪತ್ನಿ ಪ್ರಶಂಸೆ ದಿನ ವಿಶೇಷವಾದದ್ದು, ಇದರಿಂದ ದಾಂಪತ್ಯ ಜೀವನದಲ್ಲಿ ಮನೋಬಲ ವೃದ್ಧಿಯಾಗಿ ಸಂಸ್ಕಾರ, ಧಾರ್ಮಿಕ ವಿಚಾರಧಾರೆಗಳಡಿಯಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ಪುರಸಭಾ ಸದಸ್ಯ ಶಂಕರ್ ಕುಮಾರ್, ಕಸಾಪ ಅಧ್ಯಕ್ಷ ನವೀನ್ ಕುಮಾರ್ (ಬಾಬು), ವಿಜಯಾ, ತನುಜಾ ವಿಶೇಷ ಆಹ್ವಾನಿತ ದಂಪತಿಗಳಾಗಿ ಗವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರೋ.ಎಂ.ಗೋವಿಂದರಾಜು, ಪೊ›.ಕೆ.ನರಸಿಂಹಯ್ಯ, ಪನ್ನೀರ್ ಸೆಲ್ವಂ, ಭ್ರಮರಾಂಭ, ಕೃಪಾನಿಧಿ, ಟಿ.ನಾಗಾರಾಜು ಮೊದಲಾದವರಿದ್ದರು.