Advertisement

ಸಂಚಾರ ಸ್ಥಗಿತಗೊಂಡರೂ ನಡೆಯದ ಕಾಮಗಾರಿ

12:20 PM Jun 10, 2018 | Team Udayavani |

ಮಹಾನಗರ : ಮಂಗಳಾದೇವಿ ದೇವಸ್ಥಾನದಿಂದ ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ತಲುಪುವ ರಸ್ತೆಯಲ್ಲಿ ಕಾಮಗಾರಿ ಸಲುವಾಗಿ ಶನಿವಾರ ರಾತ್ರಿಯವರೆಗೆ ವಾಹನ ಸಂಚಾರ ಸ್ಥಗಿತಗೊಳಿಸುತ್ತೇವೆ ಎಂದು ಮಂಗಳೂರು ಟ್ರಾಫಿಕ್‌ ಎಸಿಪಿ ಶುಕ್ರವಾರ ಹೇಳಿಕೆ ನೀಡಿದ್ದರು. ರಸ್ತೆ ಸಂಚಾರ ಬಂದ್‌ ಆದರೂ ಈ ರಸ್ತೆಯಲ್ಲಿ ಯಾವುದೇ ಕಾಮಗಾರಿ ನಡೆಸದೆ ಇದ್ದುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದಿ ಮಹೇಶ್ವರಿ ವೈದ್ಯನಾಥ ದೇವಸ್ಥಾನದ ಹಿಂಭಾಗದಲ್ಲಿ ಸಾಗುವ ರಸ್ತೆಯಲ್ಲಿ ಮಳೆ ಬಂದರೆ ಸಾಕು ಸುಮಾರು 3 ಅಡಿಯಷ್ಟು ನೀರು ನಿಲ್ಲುತ್ತಿತ್ತು. 

Advertisement

ಅದರಂತೆಯೇ ಗುರುವಾರ ನಗರದಲ್ಲಿ ಪ್ರಾರಂಭವಾದ ಮಳೆಗೆ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು. ಇದೇ ಕಾರಣಕ್ಕೆ ರಸ್ತೆ ಕಾಮಗಾರಿಗೆ ಪಾಲಿಕೆ ಮುಂದಾಗಿತ್ತು. ಶುಕ್ರವಾರ ರಾತ್ರಿವರೆಗೆ ಅರೆಬರೆ ಕಾಮಗಾರಿ ನಡೆದಿದ್ದು, ಈ ರಸ್ತೆಯಿಂದ ನೀರು ಹರಿಯಲು ಪೈಪ್‌ ವ್ಯವಸ್ಥೆ ಅಳವಡಿಸಲಾಗಿದೆ. ಬಳಿಕ, ತಗ್ಗು ಇದ್ದಂತಹ ಪ್ರದೇಶಕ್ಕೆ ಕೆಸರಿನ ಮಣ್ಣಿನ ರಾಶಿಯನ್ನು ಸುರಿಯಾಲಾಗಿದೆ. ರಾತ್ರಿ ವೇಳೆ ಸುರಿದ ಭಾರೀ ಮಳೆಗೆ ಕೆಸರಿನ ರಾಶಿ ರಸ್ತೆಯಲ್ಲಿ ಹರಡಿಕೊಂಡಿದ್ದು, ಕೇರಳ ರಾಜ್ಯದಿಂದ ಬರುತ್ತಿದ್ದ ಮೀನಿನ ಗಾಡಿ ಇದರಲ್ಲಿ ಹೂತು ಹೋಗಿದೆ.

ಶನಿವಾರ ಇಡೀ ದಿನ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದರೂ ಯಾವುದೇ ಕಾಮಗಾರಿ ನಡೆಯಲಿಲ್ಲ. ಈ ಬಗ್ಗೆ ಸ್ಥಳೀಯರು ನೀಡಿದ ದೂರಿನ ಮೇಲೆ ಟ್ರಾಫಿಕ್‌ ಎಸಿಪಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಬಳಿಕ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪಾಲಿಕೆಗೆ ಸೂಚನೆ ನೀಡಿದ್ದಾರೆ. ಸಂಜೆಯಾದರೂ ಕಾಮಗಾರಿ ನಡೆಯದಿರುವುದನ್ನು ಗಮನಿಸಿದ ಸ್ಥಳೀಯರು ರಸ್ತೆಯಲ್ಲಿ ಹೋಗುತ್ತಿದ್ದ ಜೇಸಿಬಿ ಮೂಲಕ ಕೆಸರಿನ ರಾಶಿ ತೆರವುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next