Advertisement
ಚುನಾವಣೆ ಪ್ರಚಾರದ ಸಂದರ್ಭ ನಾನು ಮಹಿಳೆಯರ ತಂಡ ಕಟ್ಟಿಕೊಂಡು ಬೇರೆ-ಬೇರೆ ಊರುಗಳಿಗೆ ತೆರಳಿ ನಮ್ಮವರಿಗೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದೆ. ನಾನು ಸ್ಥಳೀಯ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿದ್ದರಿಂದ ಮಹಿಳೆಯರನ್ನು ಸಂಘಟಿಸುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ ಎನ್ನುತ್ತಾರೆ ಅನಸೂಯ.
ಆ ದಿನಗಳಲ್ಲಿ ತಮ್ಮ ಅಹವಾಲುಗಳನ್ನು ಹಿಡಿದುಕೊಂಡು ಮನೆ ಬಾಗಿಲಿಗೆ ಬರುವ ಜನತೆಯನ್ನು ಗುರುತಿಸಿ ಆತ್ಮೀಯವಾಗಿ ಮಾತನಾಡಿಸುವುದೇ ಖುಷಿಯ ಸಂಗತಿಯಾಗಿತ್ತು. ಕೆಲವು ಮಹಿಳೆಯರು ತಮ್ಮ ಕೆಲಸಗಳಿಗಾಗಿ ನನ್ನನ್ನೇ ಅರಸಿ ಬರುತ್ತಿ ದ್ದರು ಎಂದು ಖುಷಿಯಿಂದ ಹೇಳುತ್ತಾರೆ. ಹುರಿಹಗ್ಗದ ಕೈಗಾರಿಕೆ ಹಿಂದೆ ಪತ್ನಿ
ಮಹಿಳೆಯರ ಸ್ವ ಉದ್ಯೋಗಕ್ಕೆ ಅನುಕೂಲ ವಾಗುವಂತೆ ಹಾಗೂ ತರಬೇತಿ ಪಡೆಯುವ ಮಹಿಳೆಯರಿಗೆ ಸರಕಾರದಿಂದ ಅನುದಾನ ಬರುವ ರೀತಿ ಹುರಿ ಹಗ್ಗದ ಕಾರ್ಖಾನೆ ಸ್ಥಾಪಿಸಬೇಕು ಎಂದು ಅನಸೂಯಾ ಪತಿ ಯನ್ನು ಒತ್ತಾಯಿಸುತ್ತಿದ್ದರಂತೆ. ಅದರಂತೆ ಪಾಂಡೇಶ್ವರದಲ್ಲಿ ಸರಕಾರಿ ಪ್ರಾಯೋಜಿತ ಹುರಿಹಗ್ಗದ ಕೈಗಾರಿಕೆ ಸ್ಥಾಪನೆಗೊಂಡಿತು. ಅದು ಆ ಕಾಲದಲ್ಲಿ ಮಹಿಳೆಯರು ಸ್ವಾವಲಂಬಿ ಗಳಾಗುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
Related Articles
ನಾನು ಸದಾ ಕಾಲ ಜನಸೇವೆಯಲ್ಲಿ ತೊಡಗಿಕೊಳ್ಳುವಂತೆ ಹಾಗೂ ಸಂಸಾರದ ಜವಾಬ್ದಾರಿ ಹೆಚ್ಚಿನ ಮಟ್ಟಿಗೆ ನನ್ನ ಹೆಗಲಿಗೆ ಬೀಳದಂತೆ ನನ್ನಾಕೆ ಎಚ್ಚರ ವಹಿಸುತ್ತಿದ್ದಳು. 1994ರ ಚುನಾವಣೆಯಲ್ಲಿ ಸೋತಾಗ “ಇಷ್ಟು ದಿನ ಜನ ನಮಗೆ ಅವಕಾಶ ನೀಡಿದ್ದರು; ಈಗ ಬೇರೆಯವರಿಗೆ ನೀಡಿದ್ದಾರೆ. ಅದರಿಂದ ಹತಾಶರಾಗುವುದು ಬೇಡ’ ಎಂದು ಸಮಾಧಾನಿಸಿ ದೈರ್ಯ ತುಂಬಿದ್ದಳು ಎಂದು ಬಸವರಾಜ್ ನೆನಪಿಸಿಕೊಳ್ಳುತ್ತಾರೆ.
Advertisement
– ರಾಜೇಶ ಗಾಣಿಗ ಅಚ್ಲಾಡಿ